ಬೈಟುಕಾಫಿ

ಜನ್ಮ ಪುನೀತ

18ನೇ ಶತಮಾನದಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಕ್ರಾಂತಿ ತಂದಾಕೆ ಫ್ಲಾರೆನ್ಸ್ ನೈಟಿಂಗೇಲ್.

ಜನ್ಮ ಪುನೀತ
Published On :

18ನೇ ಶತಮಾನದಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಕ್ರಾಂತಿ ತಂದಾಕೆ ಫ್ಲಾರೆನ್ಸ್ ನೈಟಿಂಗೇಲ್. ಆಕೆಯ ಜನ್ಮದಿನವನ್ನು ಅಂತಾರಾಷ್ಟ್ರೀಯ ನರ್ಸಿಂಗ್ ದಿನ ಎಂದು ಗುರುತಿಸಲಾಗುತ್ತದೆ. ಕರ್ನಾಟಕ ಸರ್ಕಾರ ಕಳೆದ 14 ವರ್ಷಗಳಿಂದ ಈ ಹೆಸರಿನಲ್ಲಿ ವಿಶೇಷ ನರ್ಸಿಂಗ್ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡುತ್ತಿದೆ. ಇಲ್ಲಿ ಅರ್ಹತೆಯೇ ಆಧಾರ. 12 ಜನಕ್ಕೆ ಮಾತ್ರ ಪ್ರಾತಿನಿಧ್ಯ. ಈ ವರ್ಷ ಹೀಗೆ ಪ್ರಶಸ್ತಿ ಪಡೆದವರು ಅಂತೋನಿಯಾ ಪುನೀತಾ.
ಕೋರಮಂಗಲದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಪುನೀತಾ ನರ್ಸಿಂಗ್ ಸೂಪರಿಂಟೆಂಡೆಂಟ್. ನರ್ಸಿಂಗ್ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದ 12 ಮಂದಿಯಲ್ಲಿ ಈಕೆ ಅಪ್ಪಟ ಕನ್ನಡತಿ. ಎಂಎಸ್‌ಸಿ ನರ್ಸಿಂಗ್, ಕನ್ನಡ ಎಂಎ ಈಕೆಯ ವಿದ್ಯಾರ್ಹತೆಗಳು. ನರ್ಸಿಂಗ್‌ನಲ್ಲಿ ರಾಜ್ಯಕ್ಕೆ ರ್ಯಾಂಕ್ ತಂದಾಕೆ.
ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುವ ನನಗೆ ಮಕ್ಕಳೇ ಗುರುಗಳು. ಬದುಕಿನ ಕಷ್ಟಗಳೇ ಕೆಲಸಕ್ಕೆ ಸ್ಫೂರ್ತಿ ಎನ್ನುವ ಇವರು ನೂರಾರು ದಾದಿಯರಿಗೆ ತರಬೇತಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕೆಲಸದ ವಿಷಯದಲ್ಲಿ ಸದಾ ಕಟ್ಟುನಿಟ್ಟು ಹಾಗೂ ಸಹಾಯಹಸ್ತ ಚಾಚುವ ಸ್ವಭಾವ. ಕೈದಿಗಳ ಮಕ್ಕಳ ಅಭಿವೃದ್ಧಿಗೆ ಸಂಸ್ಥೆಯೊಂದನ್ನು ಹುಟ್ಟುಹಾಕುವ ಕನಸಿದೆ ಎನ್ನುತ್ತಾರೆ.
ಇಷ್ಟೆಲ್ಲಾ ಜವಾಬ್ದಾರಿಯ ಈ ದಾದಿಯ ಇನ್ನೊಂದು ಸ್ಫೂರ್ತಿಯ ಸೆಲೆಯೆಂದರೆ, ರೇಡಿಯೋ ನಿರೂಪಕಿಯ ಪ್ರವೃತ್ತಿ. ರೇಡಿಯೋ ಕಾರ್ಯಕ್ರಮಗಳಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಬೀರುವ ಈಕೆ, ಆ ನಿಟ್ಟಿನಲ್ಲಿ ಸಾಕಷ್ಟು ಜ್ಞಾನ ಹೊಂದಿರುವವರು. ದಾಸ ಸಾಹಿತ್ಯದಿಂದ ಭಾವಗೀತೆಗಳವರೆಗೂ ಸ್ಫುಟವಾಗಿ, ಶುದ್ಧವಾಗಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಇವರು ಪುನೀತಾ ಎಂಬ ಹೆಸರಿನಲ್ಲಿ ಕೇಳುಗರಿಗೆ ಪರಿಚಿತ. ಆಕಾಶವಾಣಿಯ ಕನ್ನಡ ಕಾಮನಬಿಲ್ಲು ಕಾರ್ಯಕ್ರಮದಲ್ಲಿ ನೀವಿವರನ್ನು ಕೇಳಬಹುದು. ಸಿಗುವ ಭಾನುವಾರದ ರಜೆ ಇದಕ್ಕೆ ಮೀಸಲು. ಸಾಹಿತ್ಯ, ಸಂಗೀತ ಜ್ಞಾನಭಂಡಾರದ ಆಕಾಶವಾಣಿ ನನಗೆ ಸರಸ್ವತಿ ಸಾನಿಧ್ಯ ಎನ್ನುತ್ತಾರಿವರು.
ಮುದ್ದಾದ ಇಬ್ಬರು ಮಕ್ಕಳು, ಪತಿಯೊಡಗೂಡಿದ ಸುಂದರ ಸಂಸಾರ. ವೃತ್ತಿ, ಪ್ರವೃತ್ತಿಗಳಲ್ಲಿ ಸಮಾಜಮುಖಿಯಾಗಿರುವ ಈಕೆ ಹೆಣ್ಣುಮಕ್ಕಳಿಗೆ ಮಾದರಿ.

ಕೈದಿಗಳ ಮಕ್ಕಳ ಅಭಿವೃದ್ಧಿಗೆ ಸಂಸ್ಥೆಯೊಂದನ್ನು ಹುಟ್ಟುಹಾಕುವ ಕನಸಿದೆ.
- ಅಂತೋನಿಯಾ ಪುನೀತಾ

- ವಿಜಯಶ್ರೀ ಎಂ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.