ಬೈಟುಕಾಫಿ

ಫ್ಯಾಶನ್ ಪರೇಡ್

ಫ್ಯಾಶನ್ ಪರೇಡ್
Published On :

ಹೊರಗೆ ಈಗತಾನೆ ಕಾಲಿಡುತ್ತಿರುವ ಮಳೆಗಾಲ ತಂದ ತಂಪು ತಂಪು. ಒಳಗೆ ಬೆಕ್ಕಿನ ನಡಿಗೆಯ ಲಲನೆಯರು ಮೂಡಿಸಿದ ನಸುಬೆಚ್ಚಗೆ ವಾತಾವರಣ. ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಅಂದು ವಿನ್ಯಾಸಗಳೇ ಮಾತಾಡಿದವು. 'ಪರೇಡ್ ಆಫ್ ಫ್ಯಾಶನ್‌' ಹೆಸರಿನ ಫ್ಯಾಶನ್ ಶೋ ಇತ್ತೀಚೆಗೆ ಇಲ್ಲಿ ಕಳೆಗಟ್ಟಿತು. ಬಸವೇಶ್ವರ ನಗರದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯವರು ವಿನ್ಯಾಸಗೊಳಿಸಿದ ದಿರಸುಗಳನ್ನು ಧರಿಸಿದ ಮಾಡೆಲ್‌ಗಳು ಮಾಡ್ ಆಗಿ ಹೆಜ್ಜೆ ಹಾಕಿ ಜನರ ಗಮನವನ್ನು ತಮ್ಮತ್ತ, ಅಲ್ಲಲ್ಲ, ಬಟ್ಟೆಯತ್ತ ಸೆಳೆದರು.  ರಕ್ಷಾ ಹೊಳ್ಳ, ಶ್ವೇತಾ ದಾಸಪ್ಪ, ರೂಬಿ ಮುಂತಾದ ಖ್ಯಾತ ಮಾಡೆಲ್‌ಗಳ ಜತೆ 18 ರೂಪದರ್ಶಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ವಿನ್ಯಾಸಗಳು ಚಿಟ್ಟೆ, ಶಿವ ಮುಂತಾದ ಪರಿಕಲ್ಪನೆಗಳಿಂದ ಸ್ಫೂರ್ತಿ ಪಡೆದಿದ್ದವು. ಸಾಂಪ್ರದಾಯಿಕ, ಪಾಶ್ಚಾತ್ಯ, ಎತ್ನಿಕ್ ಶೈಲಿಗಳ ಸಹಾಯವನ್ನು ಡಿಸೈನರ್ಸ್ ಪಡೆದಿದ್ದುದು ಕಾಣುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.