ಬೈಟುಕಾಫಿ

ವಿಚಾರವಂತ ನರೇಂದ್ರನಿಗೆ ಸ್ಪರ್ಶಸಿದ್ಧಿ!

Published On :

ಕೆಲವು ದಿನಗಳು ಕಳೆದ ಮೇಲೆ ನರೇಂದ್ರ ಮತ್ತೆ ದಕ್ಷಿಣೇಶ್ವರದತ್ತ ನಡೆದ. ಈ ಬಾರಿ ರಾಮಕೃಷ್ಣರ ಸ್ಪರ್ಶವಶನಾಗದಿರಲು ನಿಶ್ಚಯಿಸಿಕೊಂಡ. ಇವನನ್ನು ಕಂಡೊಡನೆಯೇ ಉಲ್ಲಸಿತರಾಗಿ ಯದುಮಲ್ಲಿಕನ ತೋಟಕ್ಕೆ ಕರೆದೊಯ್ದರು. ಏಕಾಂತದಲ್ಲಿ ಕುಳ್ಳಿರಿಸಿ, ಮೆಲ್ಲನೆ ಭಾವಸಮಾಧಿಗೇರಿದರು. ಆ ಸ್ಥಿತಿಯಲ್ಲಿರುವಾಗಲೇ ನರೇಂದ್ರನನ್ನು ಸ್ಪರ್ಶಿಸಿದರು. ಎಷ್ಟು ಪ್ರಯತ್ನಪಟ್ಟರೂ ನರೇಂದ್ರ ತನ್ನನ್ನು ನಿಯಂತ್ರಿಸಿಕೊಳ್ಳಲಾಗದೆ ಸ್ಪರ್ಶವಶನಾದ. ಪ್ರಜ್ಞೆಯೂ ತಪ್ಪಿತು! ಎಚ್ಚರವಾದಾಗ ರಾಮಕೃಷ್ಣರು ನರೇಂದ್ರನ ಎದೆಯನ್ನು ನೇವರಿಸುತ್ತಿದ್ದರು.
ರಾಮಕೃಷ್ಣರು ಸ್ಪರ್ಶ ಮಾತ್ರದಿಂದ ಅವನ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ ಸಮಾಧಿಸ್ಥಿತಿಗೇರಿಸಿದ್ದರು. ಅವನ ಪೂರ್ವವೃತ್ತಾಂತವನ್ನು ಅರಿತು ಇವನೊಬ್ಬ 'ನಿತ್ಯಸಿದ್ಧನಾದ ಋಷಿ, ಧ್ಯಾನಸಿದ್ಧ' ಎಂಬುದನ್ನು ದೃಢಪಡಿಸಿಕೊಂಡರು. ಈ ಅತಿಮಾನುಷ ಅಲೌಕಿಕ ಶಕ್ತಿಯ ಮುಂದೆ ತನ್ನ ಬುದ್ಧಿಶಕ್ತಿ, ಇಚ್ಛಾಶಕ್ತಿಗಳೆಲ್ಲ ತೀರಾ ದುರ್ಬಲವೆಂದು ಅರಿವಾಯಿತು. ಅವರು ದೈವೀಶಕ್ತಿ ಸಂಪನ್ನರಾದ ಮಹಾಪುರುಷರೇ ಆಗಿರಬೇಕು ಎಂದು ಅವರನ್ನು ಗುರುವೆಂದು ಸ್ವೀಕರಿಸಲು ಮಾನಸಿಕವಾಗಿ ಸಿದ್ಧನಾದ. ಆದರೆ ತನ್ನ ವಿಚಾರಸ್ವಾತಂತ್ರ್ಯವನ್ನು ಮಾತ್ರ ಎಂದೆಂದಿಗೂ ಬಿಟ್ಟುಕೊಡಲಾರೆ ಎಂಬ ಷರತ್ತನ್ನು ವಿಧಿಸಿದ. ರಾಮಕೃಷ್ಣರು ಪಡೆದುಕೊಂಡ ದರ್ಶನಗಳನ್ನಾಗಲಿ, ಅನುಭವಗಳಲ್ಲಾಗಲಿ ನನಗೆ ಅವು ಲಭ್ಯವಾದ ಹೊರತು ನಂಬಲಾರೆ. ಇದರಿಂದ ಅವರ ಅಸಮಾಧಾನಕ್ಕೆ ಗುರಿಯಾಗಬೇಕಾದರೂ ಸರಿಯೆ ಎಂದು ಆಲೋಚಿಸಿ ಅವರ ಪಾದಕ್ಕೆರಗಿ ಬೀಳ್ಕೊಟ್ಟ.

-ಆನಂದ ಎಸ್.ಎನ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.