ಬೈಟುಕಾಫಿ

ಸಾಕ್ಷಾತ್ಕಾರಕ್ಕಿರುವುದು ಒಂದೇ ದಾರಿಯಲ್ಲ!

Published On :

ನರೇಂದ್ರ ಬಂಡಾಯ ಬುದ್ಧಿಯವನು. ಅವನು ಯಾವುದನ್ನೂ ಪ್ರಶ್ನಿಸದೆ, ಪ್ರಮಾಣಿಸದೆ ಒಪ್ಪಿಕೊಳ್ಳುವವನಲ್ಲ. ಇದನ್ನು ಕಂಡು ರಾಮಕೃಷ್ಣರು ಸಂತೋಷಿಸುತ್ತಿದ್ದರು. ನಿಜವಾದ ಜ್ಞಾನದ ಬೆಳಕನ್ನು ಪಡೆಯಬೇಕಾದರೆ ಸಾಕಷ್ಟು ವಾದವಿವಾದಗಳನ್ನು ಮಾಡಲೇಬೇಕು ಎಂಬುದು ಅವರ ವಿಚಾರವಾಗಿತ್ತು.

ನರೇಂದ್ರ ಬ್ರಹ್ಮಸಮಾಜದ ಸಗುಣ-ನಿರಾಕಾರ ಬ್ರಹ್ಮದ ತತ್ತ್ವಕ್ಕೆ ಸಂಪೂರ್ಣ ಬದ್ಧನಾಗಿದ್ದ. ಆದ್ದರಿಂದ ಯಾವುದೇ ದೇವದೇವಿಯರ ಅಸ್ತಿತ್ವವನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರತಿಮೆಗಳನ್ನೆಲ್ಲಾ ಪೂಜಿಸುವುದು, ಅವುಗಳ ಮುಂದೆ ಅಡ್ಡಬೀಳುವುದು ಇದನ್ನೆಲ್ಲ ಮೌಢ್ಯವೆಂದು ಹೀಗಳೆಯುತ್ತಿದ್ದ. ಅವನ ಸ್ನೇಹಿತ ರಾಖಾಲ ರಾಮಕೃಷ್ಣರ ಸಹವಾಸದಿಂದಾಗಿ ಕಾಳೀ ದೇವಸ್ಥಾನಕ್ಕೆ ಹೋಗುತ್ತಿದ್ದ, ದೇವಿಗೆ ಪ್ರಣಾಮ ಸಲ್ಲಿಸುತ್ತಿದ್ದ. ಇದನ್ನು ನರೇಂದ್ರ ಪ್ರಶ್ನಿಸಿದ್ದ.

ವಿಗ್ರಹಗಳು ಆಧ್ಯಾತ್ಮಿಕ ತತ್ತ್ವಗಳ ಮೂರ್ತರೂಪ ಎಂಬ ಸತ್ಯವನ್ನು ನರೇಂದ್ರನಿಗೆ ಮನಗಾಣಿಸುವ ಸಂದರ್ಭದಲ್ಲಿ ಒಮ್ಮೆ ರಾಮಕೃಷ್ಣರು 'ನೀನು ನನ್ನ ತಾಯಿ ಜಗನ್ಮಾತೆಯನ್ನು ಒಪ್ಪಿಕೊಳ್ಳದೆಯಿದ್ದ ಮೇಲೆ ಇಲ್ಲಿಗೇಕೆ ಬರುತ್ತಿರುವೆ?' ಎಂದು ಕೆಣಕಿದರು. 'ಇಲ್ಲಿಗೆ ಬಂದ ಮಾತ್ರಕ್ಕೆ ನಾನು ಆಕೆಯನ್ನು ಒಪ್ಪಿಕೊಂಡುಬಿಡಬೇಕೋ?' ನರೇಂದ್ರನ ದಿಟ್ಟತನದ ಉತ್ತರವನ್ನು ಕೇಳಿ ರಾಮಕೃಷ್ಣರು, 'ಆಗಲಿ, ಆಗಲಿ ಹೀಗೇ ಹೇಳುತ್ತಿರು, ಇನ್ನು ಕೇಲವೇ ದಿನಗಳಲ್ಲಿ ನೀನು ನನ್ನ ತಾಯಿಯನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ; ಅವಳ ಹೆಸರಿನಲ್ಲಿ ಕಣ್ಣೀರು ಸುರಿಸುತ್ತೀಯೆ! ನೋಡುತ್ತಿರು' ಎಂದು ಮುಗುಳ್ನಕ್ಕರು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.