ಕಠೋರ ವಾಸ್ತವಿಕತೆಯ ಜೀವನದರ್ಶನ
ಬೃಹತ್ಕಾರ್ಯಗಳನ್ನು ಸಾಧಿಸಬೇಕಾದರೆ ಬೃಹತ್ತಾದ ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ನರೇಂದ್ರ ಮುಂದೆ ಸ್ವಾಮಿ ವಿವೇಕಾನಂದರಾದಾಗ ಎದುರಿಸಬೇಕಾದ ಪರ್ವತೋಪಮ ಕಷ್ಟಗಳನ್ನು ಪೂರ್ವ ತಯಾರಿಯಾಗಿ ಮೊದಲೇ ಅನುಭವಿಸುತ್ತಿದ್ದ. ನರೇಂದ್ರ ಕೆಲಸಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ. ಹೊಟ್ಟೆಯಲ್ಲಿ ಹಸಿವಿನ ಕಾವು, ತಲೆಯ ಮೇಲೆ ಬಿಸಿಲಿನ ಗಾವು. ಹಾಗಂತ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಮನೆಮಂದಿಯ ಹೊಟ್ಟೆ ತುಂಬಿಸಲೇಬೇಕಾಗಿತ್ತು. ಸಂಬಂಧಿಕರು ನೆರವಿಗೆ ಬರಲಿಲ್ಲ. ಎಲ್ಲ ಕಡೆಯಲ್ಲೂ ಬಾಗಿಲು ಮುಚ್ಚಿಕೊಳ್ಳುತ್ತಿತ್ತು. ಅವನಿಗೀಗ ಜೀವನದ ಕಠೋರ ವಾಸ್ತವಿಕತೆಯ ದರ್ಶನವಾಗತೊಡಗಿತು. ಈ ಜಗತ್ತಿನಲ್ಲಿ ಸ್ವಾರ್ಥರಹಿತವಾದ ಸಹಾನುಭೂತಿ, ಸ್ನೇಹಗಳೆಲ್ಲ ಕೇವಲ ಮಾತನಾಡಲು ಉಪಯೋಗಿಸುವ ಔಪಚಾರಿಕ ಪದಗಳಷ್ಟೆ ಎಂದೆನಿಸಿತು. ಹಿಂದೆ ಅವನಿಗೆ ಸಹಾಯ ಮಾಡಲು ಮುಂದಾಗುತ್ತಿದ್ದವರೆಲ್ಲ ಇಂದು ಅವನನ್ನು ಕಂಡ ತಕ್ಷಣ ಮುಖ ತಿರುಗಿಸತೊಡಗಿದ್ದರು. 'ಶಕ್ತರಾದರೆ ನೆಂಟರೆಲ್ಲ ಹಿತರು, ಅಶಕ್ತರಾದರೆ ಅವರೇ ವೈರಿಗಳು' ಎನ್ನುವಂತೆ ಎಲ್ಲರೂ ದೂರಸರಿದರು.
ಹಳೆ ಸ್ನೇಹಿತರು, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ಅನೇಕ ಅನೈತಿಕ ಮಾರ್ಗಗಳನ್ನು ಹೇಳಿ, ತಮ್ಮೊಂದಿಗೆ ಸೇರಿಕೊಳ್ಳುವಂತೆ ನರೇಂದ್ರನನ್ನು ಆಹ್ವಾನಿಸಿದರು. ಆದರೆ ನರೇಂದ್ರ ಪ್ರಲೋಭನೆಗಳನ್ನೆಲ್ಲ ಒಂದೇ ಮಾತಿನಲ್ಲಿ ಚಾಡಿಸಿಬಿಟ್ಟ. ನರೇಂದ್ರನಿಗೊದಗಿದ ಕಷ್ಟ ಪರಂಪರೆಗಳು ಅವನನ್ನು ನೈತಿಕತೆಯ ಶಿಖರದಿಂದ ಜಾರಿಸಲು ಸಮರ್ಥವಾಗಲಿಲ್ಲ ಎನ್ನುವುದು ಇಲ್ಲಿ ಮಹತ್ವದ ಅಂಶ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

