ಬೈಟುಕಾಫಿ

ಮ್ಯಾಂಗೋ ಹಪ್ಪಳ

'ಎಲ್ಲ ಸೀಸನ್‌ನಲ್ಲೂ ಮಾವು' ಅಂತ 'ಮಾಝಾ'ದವರು ಮಾತ್ರ ಬೀಗುವುದಲ್ಲ. ಶಿವರಾಮ ಹೆಗಡೆಯವರೂ ಬೀಗುತ್ತಾರೆ! ಐದು ವರ್ಷದ ಹಿಂದೆಯೇ ...

ಮ್ಯಾಂಗೋ ಹಪ್ಪಳ
Published On :

'ಎಲ್ಲ ಸೀಸನ್‌ನಲ್ಲೂ ಮಾವು' ಅಂತ 'ಮಾಝಾ'ದವರು ಮಾತ್ರ ಬೀಗುವುದಲ್ಲ. ಶಿವರಾಮ ಹೆಗಡೆಯವರೂ ಬೀಗುತ್ತಾರೆ! ಐದು ವರ್ಷದ ಹಿಂದೆಯೇ ಸಿದ್ಧಪಡಿಸಿದ ಮಾವಿನ ಹಪ್ಪಳ ಅವರ ಬಾಯಲ್ಲೀಗ ಕುರುಂ ಕುರುಂ!
ಯಲ್ಲಾಪುರ ತಾಲೂಕಿನ ಉಮಚ್ಗಿ ಸಮೀಪದ ಭಂಡೀಮನೆಯ ಕೃಷಿಕರಾದ ಶಿವರಾಮ, ಸದಾ ಪ್ರಯೋಗಶೀಲರು. 2009ರ ಮಾವಿನ ಹಣ್ಣಿನ ಸೀಸನ್‌ನಲ್ಲಿ ಹುಳಿ ಹಾಗೂ ಸಿಹಿ ಹಣ್ಣಿನ ಗುಳವನ್ನು ಪ್ಲೇಟಿನಲ್ಲಿ ಹಾಕಿ ಒಣಗಿಸಿದರು. ಚೆನ್ನಾಗಿ ಒಣಗಿದ ಮೇಲೆ ತಿನ್ನಲು ರುಚಿ ಎನಿಸಿತು. ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಟ್ಟುಕೊಂಡರು. ಅಂದು ತಯಾರಿಸಿದ ಮಾವಿನ ಹಣ್ಣಿನ ಹಪ್ಪಳ ಈಗಲೂ ಯಥಾಸ್ಥಿತಿಯಲ್ಲೇ ಇದೆ. ಮತ್ತಷ್ಟು ರುಚಿಕಟ್ಟಾಗಿದೆ.
ಸಿಂಪಲ್ಲಾಗಿ ತಯಾರಿಸಿದ ಸಿಹಿಮಾವಿನ ಹಪ್ಪಳ ತಿನ್ನಲು ಬಹಳ ರುಚಿ. ಚಾಕೊಲೇಟ್‌ಗಿಂತ ಜಾಸ್ತಿ ಟೇಸ್ಟು. ಆದರೆ, ಹುಳಿಮಾವಿನ ಹಣ್ಣಿನ ಹಪ್ಪಳ ಹಾಗೆಯೇ ತಿನ್ನಲು ಯೋಗ್ಯವಲ್ಲದಿದ್ದರೂ ಅದರಿಂದ ಅಪ್ಪೇಹುಳಿ ಮಾಡಿಕೊಂಡು ಸವಿಯಲು ಸಾಧ್ಯವಿದೆ ಎನ್ನುತ್ತಾರೆ ಶಿವರಾಮ ಹೆಗಡೆ. ಅದನ್ನು ದೀರ್ಘ ಕಾಲದವರೆಗೆ ಇಟ್ಟುಕೊಳ್ಳಬಹುದು.
'ಮಾವಿನ ಹಣ್ಣಿನ ಸೀಸನ್‌ನಲ್ಲಿ ಎಷ್ಟೋ ಹಣ್ಣುಗಳು ವ್ಯರ್ಥವಾಗುತ್ತವೆ. ಜನರು ತಮಗೆ ಬೇಕಾದಷ್ಟು ಹಣ್ಣನ್ನು ಧಾರಾಳವಾಗಿ ಸವಿಯಲಿ. ಆದರೆ, ಸುಮ್ಮನೆ ಹಾಳಾಗಿ ಹೋಗುವ ಹಣ್ಣುಗಳಿಂದ ಈ ರೀತಿಯ ಹಪ್ಪಳ ತಯಾರಿಸಿಕೊಂಡರೆ ಬೇಕಾದಾಗ ತಿನ್ನಬಹುದು' ಎನ್ನುತ್ತಾರೆ ಹೆಗಡೆ.
ಹೆಚ್ಚು ಖರ್ಚು, ಶ್ರಮವಿಲ್ಲದೇ ಮಾವಿನಹಣ್ಣಿನ ಹಪ್ಪಳ ರೆಡಿಮಾಡಬಹುದು. ಅದನ್ನು ಚಿಕ್ಕಚಿಕ್ಕ ತುಂಡುಗಳನ್ನಾಗಿ ಮಾಡಿ ಪ್ಯಾಕೆಟ್ ಮಾಡಿದರೆ ನೆಲ್ಲಿ ಚಿಟ್ಟು, ಅಡಕೆ ಪುಡಿಯಂತೆ ಮಾರಬಹುದು ಎಂಬ ಸಲಹೆಯೂ ಹೆಗಡೆಯವರದ್ದೇ. ಹೆಚ್ಚಿನ ಮಾಹಿತಿಗೆ ಒಂದು ಹಲೋ ಹೇಳಿ... 08419255666.

- ಚಿತ್ರ, ಬರಹ: ಗಣಪತಿ ಹಾಸ್ಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.