ದೇವಿ ಕೃಪೆ
ಕನ್ನಡಿಗರ ಹೃದಯ ಒಮ್ಮೆ ಏರಿಳಿತಗೊಂಡರೂ ಡಾ. ದೇವಿ ಶೆಟ್ಟಿ ನೆನಪಾಗುತ್ತಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದ...

ಕನ್ನಡಿಗರ ಹೃದಯ ಒಮ್ಮೆ ಏರಿಳಿತಗೊಂಡರೂ ಡಾ. ದೇವಿ ಶೆಟ್ಟಿ ನೆನಪಾಗುತ್ತಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞ. ಇವರ ಕೈ ಚಳಕದಿಂದ ಅದೆಷ್ಟೋ ಹೃದಯಗಳು ಅಪಾಯದಿಂದ
ಪಾರಾಗಿವೆ. ಮದರ್ ತೆರೇಸಾರಂಥ ಮಾತೃ ಹೃದಯಕ್ಕೂ ಚಿಕಿತ್ಸೆ ನೀಡಿದ ದೇವಿ ಶೆಟ್ಟಿ, ವೈದ್ಯಲೋಕದ ಅಪರೂಪದ ಪ್ರತಿಭೆ.ಫಲಾಪೇಕ್ಷೆ ಇಲ್ಲದೆ ಬಡವರ ಹೃದಯಕ್ಕೂ ಕತ್ತರಿ ಪ್ರಯೋಗಿಸುವ ವಿಶಾಲ ಹೃದಯಿ. ಸಣ್ಣ ಹೃದಯ, ಕಠಿಣ ಹೃದಯ, ಬಡವರು, ಶ್ರೀಮಂತರ, ಪಾಕಿಸ್ತಾನಿಗಳು, ಭಾರತೀಯರು ಹೀಗೆ ಯಾರ ಹೃದಯವನ್ನೂ ಭೇದ ಮಾಡದೇ ಜೀವ ನೀಡುವ ಡಾ. ದೇವಿ ಶೆಟ್ಟಿ, ಇಲ್ಲಿನ ಪ್ರಶ್ನೆಗಳಿಗೆ ಹೃದಯದಿಂದಲೇ ಉತ್ತರಿಸಿದ್ದಾರೆ.
ಸಿಂಪಲ್ಲಾಗಿ ಹೃದಯದ ಆರೈಕೆ ಹೇಗೆ?
-ಪಥ್ಯ. ಕಡಿಮೆ ಕಾರ್ಬೋಹೈಡ್ರೇಟ್, ಹೆಚ್ಚಿನ ಪ್ರೊಟೀನ್ ಹಾಗೂ ಕಡಿಮೆ ಎಣ್ಣೆ ಬಳಸಿ.
-ವ್ಯಾಯಾಮ. ದಿನಕ್ಕೆ ಅರ್ಧ ಗಂಟೆ ವಾಕಿಂಗ್. ಕಡೇಪಕ್ಷ ವಾರದಲ್ಲಿ ಐದು ದಿನ ನಡೆಯಿರಿ. ಲಿಫ್ಟ್ ಬಳಸೋದನ್ನು ಕಮ್ಮಿ ಮಾಡಿ. ಒಂದೇ ಕಡೆ ಗಂಟೆಗಟ್ಟಲೆ ಕೂತಿರಬೇಡಿ.
= ದೇಹದ ತೂಕಕ್ಕೆ ಮಿತಿ ಇರಲಿ.
-ಬಿಪಿ, ಸಕ್ಕರೆ ಕಾಯಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
- ಸ್ಮೋಕಿಂಗ್ ಬಿಟ್ಹಾಕಿ.
ಜಂಕ್ಫುಡ್ಗೆ ನಿಮ್ಮ ವ್ಯಾಖ್ಯಾನ ಏನು?
ಮ್ಯಾಕ್ಡೊನಾಲ್ಡ್, ಸಮೋಸಾ ಮತ್ತು ಮಸಾಲೆ ದೋಸೆ ಕೂಡ ಹೌದು.
ಹೊತ್ಹೊತ್ತಿಗೆ ತಿನ್ನದೇ ಹೋದರೆ ಹೃದಯಕ್ಕೆ ಏನಾಗುತ್ತೆ?
ಹೊತ್ ಹೊತ್ತಿಗೆ ತಿನ್ನಲ್ಲ ಅಂತ ಜಂಕ್ಫುಡ್ಗಳಿಗೆ ಬಾಯಿ ಕೊಡುತ್ತಾರೆ. ಇದು ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಎನ್ಜೈಮ್ಗಳ ಬಿಡುಗಡೆಗೆ ತೊಂದರೆಯೊಡ್ಡುತ್ತದೆ.
ಮಾಂಸಾಹಾರ ಹೃದಯಕ್ಕೆ ಒಳ್ಳೆಯದೇ?
ಇಲ್ಲ.
ಹೃದಯಕ್ಕೆ ಒಳ್ಳೆಯ ಹಾಗೂ ಕೆಟ್ಟ ಆಹಾರ ಯಾವುದು?
ಹಣ್ಣು, ತರಕಾರಿಗಳು ಬಹಳ ಒಳ್ಳೆಯದು. ಎಣ್ಣೆ ಹೃದಯದ ಶತ್ರು.
ಕಡಲೆಕಾಯಿ ಎಣ್ಣೆ, ಸೂರ್ಯಕಾಂತಿ ಅಥವಾ ಆಲೀವ್ ಆಯಿಲ್... ಯಾವುದು ಓಕೆ?
ಎಲ್ಲವೂ ಕೆಟ್ಟದ್ದೇ
ಆರೋಗ್ಯವಂತನಿಗೂ ಹಾರ್ಟ್ ಅಟ್ಯಾಕ್ ಆಗುತ್ತೆ. ಈ ಹಾರ್ಟನ್ನು ಹ್ಯಾಗೆ ನಂಬೋದು?
ಇಂಥ ಸಮಸ್ಯೆಯನ್ನು ಸೈಲೆಂಟ್ ಅಟ್ಯಾಕ್ ಅಂತಾರೆ. ಅದಕ್ಕೆ ಪ್ರತಿಯೊಬ್ಬರೂ 30 ವರ್ಷವಾದ ನಂತರ ಆಗಾಗ್ಗೆ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ರೊಟೀನ್ ಚೆಕ್ ಅಪ್ ಅಂದ್ರೆ ಏನು? ಯಾವುದಾದರೂ ಪರ್ಟಿಕ್ಯುಲರ್ ಟೆಸ್ಟ್ ಇದ್ಯಾ?
ಕೊಲೆಸ್ಟೆರಾಲ್ ಹಾಗೂ ಸಕ್ಕರೆ ಅಂಶ ಪತ್ತೆಗೆ ಮಾಡುವ ರಕ್ತ ಪರೀಕ್ಷೆ. ಬಿಪಿ ಕಡೆಯೂ ಗಮನವಿರಲಿ. ಯಾವುದೇ ಅಪಾಯದ ಮುನ್ಸೂಚನೆ ಇದ್ದರೆ ಥ್ರೆಡ್ಮಿಲ್ ಟೆಸ್ಟ್ ಸೂಕ್ತ.
ಕೊಬ್ಬು ಚಿಕ್ಕ ವಯಸ್ಸಿನಲ್ಲೇ ದೇಹದಲ್ಲಿ ಸ್ಟೋರ್ ಆಗುತ್ತಾ? ಅಥವಾ 30 ವರ್ಷದ ನಂತರ ಇದರ ಬಗ್ಗೆ ತಲೆ ಕೆಡಿಸಿಕೊಂಡರೆ ಸಾಕಾ?
ಚಿಕ್ಕ ವಯಸ್ಸಿನಿಂದಲೇ ಹೆಚ್ಚು ಜಾಗೃತರಾಗಿರಬೇಕು.
ಕೊಬ್ಬನ್ನು ಯಾವುದೇ ಔಷಧಿಗಳಿಲ್ಲದೆ ಹೇಗೆ ಕಂಟ್ರೋಲ್ ಮಾಡಿಕೊಳ್ಳಬಹುದು?
ಪಥ್ಯ ಮಾಡಿ. ವಾಕಿಂಗ್ ಒಳ್ಳೆಯದು. ಆಕ್ರೋಟ್ ತಿನ್ನಿ.
ಹೃದಯ ಕಾಯಿಲೆ ವಂಶಪಾರಂಪರ್ಯವೇ?
ಹೌದು.
ಲೋ ಬಿಪಿ ಇರುವವರು ಹೃದ್ರೋಗದಿಂದ ಬಳಲುತ್ತಿರುತ್ತಾರಾ?
ಬಹಳ ಕಡಿಮೆ.
ಹೃದಯ ಬಳಲಲು ಕಾರಣಗಳೇನು? ಆ ಒತ್ತಡವನ್ನು ಕಡಿಮೆ ಮಾಡೋದು ಹೇಗೆ?
ಮೊದಲು ಜೀವನದ ಬಗ್ಗೆ ನಿಮ್ಮ ಧೋರಣೆ, ದೃಷ್ಟಿಕೋನ ಬದಲಾಗಲಿ. ಎಲ್ಲ ವಿಷ್ಯದಲ್ಲೂ ಪರಿಪೂರ್ಣತೆ ಇರಬೇಕೆಂದು ನಿರೀಕ್ಷಿಸಬೇಡಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ಆಗಲಿ ಎಂದು ಬಯಸೋದು ತಪ್ಪು.
ವಾಕಿಂಗ್ಗಿಂತ ಜಾಗಿಂಗ್ ಒಳ್ಳೆಯದಾ? ಅಥವಾ ಅದಕ್ಕಿಂತಲೂ ಶ್ರಮದಾಯಿಕ ವ್ಯಾಯಾಮದ ಅಗತ್ಯವಿದೆಯಾ?
ಜಾಗಿಂಗ್ಗಿಂತ ವಾಕಿಂಗ್ ಒಳ್ಳೆಯದು. ಜಾಗಿಂಗ್ನಿಂದ ಬೇಗ ದಣಿವಾಗುತ್ತದೆ. ಮೂಳೆಯ ಸಂದುಗಳಿಗೆ ತೊಂದರೆಯಾಗುವ ಸಾಧ್ಯತೆಗಳೂ ಇದರಿಂದ ಹೆಚ್ಚು.
ಹಾರ್ಟ್ ಅಟ್ಯಾಕ್ ಆಯ್ತು ಎಂದ ಕೂಡಲೇ ಯಾವ ಪ್ರಥಮ ಚಿಕಿತ್ಸೆ ನೀಡಬೇಕು?
ರೋಗಿಯನ್ನು ನಿದ್ರೆ ಮಾಡುವ ಭಂಗಿಯಲ್ಲಿ ಮಲಗಲು ಸಹಕರಿಸಿ. ಆಸ್ಪಿರಿನ್ ಮಾತ್ರೆಯನ್ನು ನಾಲಗೆ ಕೆಳಗೆ ಇಡಿ. ಜೊತೆಗೆ ಡ್ಟ್ಠಛ್ಝಿಡ್ಠಿಛಡಿಜ ಮಾತ್ರೆ ಆದರೂ ಒಳ್ಳೆಯದು. ಆದಷ್ಟು ಬೇಗ ಆತನನ್ನು ಹೃದಯ ಶುಶ್ರೂಷಾ ಘಟಕ್ಕೆ ಕರೆದುಕೊಂಡು ಹೋಗಿ. ಮೊದಲ ಒಂದು ಗಂಟೆಯಲ್ಲಿ ಹೆಚ್ಚಿನ ಆಘಾತವಾಗುವ ಸಾಧ್ಯತೆಗಳಿರುತ್ತವೆ
ಹಾರ್ಟ್ ಅಟ್ಯಾಕ್ ಆದಾಗ ಅವರೇ ಏನಾದ್ರೂ ಮುಂಜಾಗ್ರತೆ ಕೈಗೊಳ್ಳಲು ಸಾಧ್ಯವಾ?
ಹೌದು. ಆರಾಮವಾಗಿ ಮಲಗಿಕೊಳ್ಳಿ. ಆಸ್ಪಿರಿನ್ ಮಾತ್ರೆಯನ್ನು ನಾಲಗೆ ಕೆಳಗೆ ಇಟ್ಟುಕೊಳ್ಳಿ. ತಕ್ಷಣವೇ ಯಾರಿಗಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿ. ಆ್ಯಂಬ್ಯುಲೆನ್ಸ್ಗೆ ಕಾಯ್ತಾ ಕೂರಬೇಡಿ. ಅದು ಸಮಯಕ್ಕೆ ಸರಿಯಾಗಿ ಬಾರದಿರಬಹುದು.
ಹಾರ್ಟ್ ಅಟ್ಯಾಕ್ನಿಂದ ಬರುವ ಎದೆ ನೋವು ಹಾಗೂ ಗ್ಯಾಸ್ಟ್ರಿಕ್ನಿಂದ ಬರುವ ಎದೆ ನೋವಿಗೂ ವ್ಯತ್ಯಾಸ ಏನು?
ಇಸಿಜಿ ಮಾಡಿಸದೇ ಕಂಡು ಹಿಡಿಯೋದು ಬಹಳ ಕಷ್ಟ.
ಯುವಕರಲ್ಲೂ ಹೃದ್ರೋಗ ಹೆಚ್ಚಲು ಕಾರಣಗಳೇನು? 30-40 ವರ್ಷದ ಮಧ್ಯಮ ವಯಸ್ಸಿನವರಿಗೂ ಹಾರ್ಟ್ ಪ್ರಾಬ್ಲಂ ಇರುತ್ತಲ್ಲಾ?
ಅರಿವು ಹೆಚ್ಚಾಗುತ್ತಿದ್ದಂತೆ ಹೃದ್ರೋಗಗಳೂ ಹೆಚ್ಚು ಬೆಳಕಿಗೆ ಬರುತ್ತಿವೆ. ಯುರೋಪ್ ಹಾಗೂ ಅಮೆರಿಕ ಹೊರತುಪಡಿಸಿ ಇತರೆ ದೇಶಗಳಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುವುದಕ್ಕೆ ಜೀವನ ಶೈಲಿ ಬದಲಾಗಿರೋದು, ಕೂತ್ಕೊಂಡೇ ಕೆಲಸ ಮಾಡೋದು, ಸ್ಮೋಕಿಂಗ್, ಜಂಕ್ಫುಡ್ ತಿನ್ನೋದು ಮತ್ತು ವ್ಯಾಯಾಮ ಮಾಡದೇ ಇರೋದು ಕಾರಣ.
ಇಂದಿನ ಲೈಫ್ಸ್ಟೈಲ್ ಹೃದಯದ ಮೇಲೆ ಪರಿಣಾಮ ಬೀರುತ್ತಾ?
ದೇಹದಲ್ಲಿ ಕಸುವು ಇರುವಾಗ ಏನೇ ಮಾಡಿದರೂ ಅದು ತಡೆದುಕೊಳ್ಳುತ್ತದೆ. ಆದರೆ, ವಯಸ್ಸಾಗುತ್ತಾ ಬಂದಂತೆ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಜೈವಿಕ ಗಡಿಯಾರಕ್ಕೆ ಎಲ್ಲರೂ ಬೆಲೆ ಕೊಡಬೇಕು.
120/80 ಬಿಪಿ ಇಲ್ಲದೇ, ಬೇರೆ ರೇಂಜ್ನಲ್ಲಿದ್ದರೂ ನಾರ್ಮಲ್ ಬಿಪಿ ಎಂದು ಕನ್ಸಿಡರ್ ಮಾಡಬಹುದಾ?
ಹೌದು.
- ಹತ್ತಿರದ ಸಂಬಂಧಿಗಳಲ್ಲಿ ಮದುವೆಯಾದರೆ ಹುಟ್ಟುವ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆಯಾ?
ಹೌದು. ರಕ್ತ ಸಂಬಂಧದಿಂದ ಜನ್ಮಜಾತ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅಷ್ಟಕ್ಕೂ ಸಾಫ್ಟ್ವೇರ್ ಎಂಜಿನಿಯರ್ ಆಗಿಯೇ ಮಗುವನ್ನು ಪಡೆಯೋದು ಸಾಧ್ಯವಿಲ್ಲ ಬಿಡಿ.
-ಆ್ಯಂಟಿ ಹೈಪರ್ಟೆನ್ಸೀವ್ ಔಷಧಿಗಳು ಏನಾದ್ರೂ ಸಮಸ್ಯೆಗಳನ್ನು ಸೃಷ್ಟಿಸುತ್ತವಾ?
ಹೌದು. ಬಹುತೇಕ ಔಷಧಿಗಳು ಅಡ್ಡಪರಿಣಾಮ ಬೀರುತ್ತವೆ. ಆದರೆ, ಆಧುನಿಕ ಆ್ಯಂಟಿ ಹೈಪರ್ಟೆನ್ಸೀವ್ ಔಷಧಿಗಳು ಬಹಳ ಸುರಕ್ಷಿತ.
ಆಧುನಿಕ ಆ್ಯಂಟಿ ಹೈಪರ್ಸೆನ್ಸಿಟಿವ್ ಔಷಧಿಗಳು ಯಾವುವು?
ಅವುಗಳಲ್ಲಿ ನೂರಾರಿವೆ. ವೈದ್ಯರು ನಿಮ್ಮ ಸಮಸ್ಯೆಗೆ ಸೂಕ್ತ ಸಲಹೆಗಳನ್ನೇ ನೀಡುತ್ತಾರೆ. ಆದರೆ, ಔಷಧಿಗಳಿಗಿಂತಲೂ ವಾಕಿಂಗ್ನಂಥ ನೈಸರ್ಗಿಕ ವಿಧಾನಗಳಿಂದ ನಿಮ್ಮ ಬಿಪಿಯನ್ನು ಕಂಟ್ರೋಲ್ನಲ್ಲಿಟ್ಟುಕೊಳ್ಳಿ. ಪಥ್ಯ ಮಾಡಿ. ಜೀವನದ ಬಗ್ಗೆ ಆ್ಯಟಿಡ್ಯೂಟ್ ಬದಲಾಗಲಿ.
ಡಿಸ್ಪಿರನ್ ಅಥವಾ ಅದೇ ರೀತಿಯ ನೋವು ನಿವಾರಕಗಳು ಹೃದಯದ ಕಾಯಿಲೆಯನ್ನು ಹೆಚ್ಚಿಸುತ್ತಾ?
ಇಲ್ಲ.
ಅತಿ ಹೆಚ್ಚು ಕಾಫಿ. ಟೀ ಕುಡಿದರೆ ಹೃದಯದ ಮೇಲೆ ಪರಿಣಾಮ ಬೀರುತ್ತಾ?
ಇಲ್ಲ.
ಅಸ್ತಮಾ ರೋಗಿಗಳಿಗೆ ಹೃದ್ರೋಗ ಬರೋದು ಹೆಚ್ಚಾ?
ಇಲ್ಲ.
ಭಾರತೀಯರಿಗೆ ಹೃದ್ರೋಗಳು ಬೇರೆಯವರಿಗಿಂತ ಮೂರು ಪಟ್ಟು ಹೆಚ್ಚು ಬರುತ್ತದೆ ಎಂದು ನೀವೇ ಹೇಳಿದ್ರಿ. ಆದರೆ ಯುರೋಪ್ ಹಾಗೂ ಅಮೆರಿಕದವರು ಹೆಚ್ಚು ಜಂಕ್ ಫುಡ್ ತಿನ್ನುತ್ತಾರಲ್ಲ?
ಪ್ರತೀ ಜನಾಂಗವೂ ಒಂದೊಂದು ರೋಗಕ್ಕೆ ಸುಲಭವಾಗಿ ಈಡಾಗುತ್ತದೆ. ದುರಾದೃಷ್ಟಕ್ಕೆ ಭಾರತೀಯರು
ಅತ್ಯಂತ ಶ್ರೀಮಂತ ರೋಗಕ್ಕೆ ಬಲಿಯಾಗೋದು ಹೆಚ್ಚು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


