ಬೈಟುಕಾಫಿ

ದೇಸೀಗಿರಿ

'ಆಯುರ್ವೇದ ಪರ್ಯಾಯ ವೈದ್ಯಕೀಯವಲ್ಲ, ಅದೇ ನೈಸರ್ಗಿಕ ಪದ್ಧತಿ' 'ಅಲೋಪತಿ ಆಂಬುಲೆನ್ಸ್ ಇದ್ದಂತೆ- ತುರ್ತುಸ್ಥಿತಿಯಲ್ಲಿ ಮಾತ್ರ. ಆಯುರ್ವೇದ ...

ದೇಸೀಗಿರಿ
Published On :

'ಆಯುರ್ವೇದ ಪರ್ಯಾಯ ವೈದ್ಯಕೀಯವಲ್ಲ, ಅದೇ ನೈಸರ್ಗಿಕ ಪದ್ಧತಿ'
'ಅಲೋಪತಿ ಆಂಬುಲೆನ್ಸ್ ಇದ್ದಂತೆ- ತುರ್ತುಸ್ಥಿತಿಯಲ್ಲಿ ಮಾತ್ರ. ಆಯುರ್ವೇದ ಕಾರಿನಂತೆ- ಯಾವಾಗ ಬೇಕಾದರೂ'
'ಮೂಲಿಕೆ ಸಸ್ಯಗಳು ಮನುಷ್ಯನ ದೇಹಕ್ಕೆ ತುಂಬಾ ಸನಿಹ- ಗೆಳೆಯರಿಗಂತಲೂ' 'ಆಯುರ್ವೇದ ಹೇಳುವುದು ಬದುಕುಳಿಯಬೇಕೆಂದಲ್ಲ, ಬದುಕಬೇಕೆಂದು'
ಈ ನುಡಿಮುತ್ತುಗಳು ಯಾರದೆಂದು ಯೋಚಿಸಿದಿರಾ? ಅಯುರ್ವೇದ ವೈದ್ಯಪದ್ಧತಿಯ ಮೂಲಕ ಸಾವಿರಾರು ಮಂದಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟ ಡಾ.ಗಿರಿಧರ ಕಜೆ ಅವರದು.
104 ಡಿಗ್ರಿ ಜ್ವರ ವಕ್ಕರಿಸಿದರೆ ಯಾರಾದರೂ ಅಲೋಪತಿ ಡಾಕ್ಟರ ಬಳಿ ದೌಡಾಯಿಸುತ್ತಾರೆ. ಆದರೆ ಕಜೆ ತಾವೇ ಔಷಧ ಕೊಡುತ್ತಾರೆ. ಆಯುರ್ವೇದಕ್ಕೆ ಅಂಥ ತೀವ್ರ ಜ್ವರವನ್ನೂ ಇಳಿಸುವ ಶಕ್ತಿಯಿದೆ ಎಂಬುದವರ ನಂಬಿಕೆ. ಅದಕ್ಕೆ ಸಾಕ್ಷಿ ಅವರ ಮಗುವೇ. ಒಂದು ವರ್ಷದ ಮಗುವಿಗೆ 103 ಡಿಗ್ರಿ ಜ್ವರ ಬಂದಾಗ ತಮ್ಮದೇ ಔಷಧದಿಂದಲೇ ಉಳಿಸಿಕೊಂಡರಂತೆ. ಆದ್ದರಿಂದಲೇ ಅವರು ಆಯುರ್ವೇದದ ಬಗ್ಗೆ ಮಾತನಾಡುವಾಗ ಅದಮ್ಯ ಆತ್ಮವಿಶ್ವಾಸ ಹಾಗೂ ಅನುಭವಗಳು ಎದ್ದು ಕಾಣುತ್ತವೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ಪ್ರಶಾಂತಿ ಕ್ಲಿನಿಕ್ನಲ್ಲಿ ನಿತ್ಯ ನೂರಾರು ರೋಗಿಗಳನ್ನು ಮುಖಾಮುಖಿಯಾಗುವ ಅವರು ಕ್ಷಣವೂ ಬಿಡುವಿಲ್ಲದ ವೈದ್ಯ. ಅದರ ನಡುವೆಯೇ ನೈಸರ್ಗಿಕ ಆಹಾರ ಪದ್ಧತಿ, ಔಷಧಗಳ ಬಗ್ಗೆ ಮೀಡಿಯಾಗಳಲ್ಲಿ ಮಾಹಿತಿ. 2003ರಲ್ಲಿ ಅವರು ಯಶಸ್ವಿಯಾಗಿ ನಿರ್ವಹಿಸಿದ ವಿಶ್ವ ಆಯುರ್ವೇದ ಸಮ್ಮೇಳನವನ್ನೂ ಇಲ್ಲಿ ನೆನೆಯಬಹುದು.
ಅಯುರ್ವೇದವನ್ನು ಬರಿಯ ಚಿಕಿತ್ಸಾ ಕ್ರಮವಾಗಿಯಷ್ಟೇ ನೋಡದೆ, ಅದನ್ನೊಂದು ಆರೋಗ್ಯಪೂರ್ಣ ಜೀವನ ವಿಧಾನವಾಗಿಯೂ ನೋಡುವುದು ಕಜೆ ವೈಶಿಷ್ಟ್ಯ. ನಿತ್ಯದ ಆಹಾರ ಸೇವನೆಯಲ್ಲಿ ಸರಿಯಾದ ವಿಧಾನವನ್ನು ಅನುಸರಿಸುವುದೇ ನಿರೋಗಿಯಾಗಿ ಬಾಳುವುದರ ಗುಟ್ಟು ಎಂಬುದು ಅವರ ಅಂಬೋಣ. ನಿತ್ಯದ ಆಹಾರ ತರಗತಿಯಂತೆ, ಟಾನಿಕ್ ಸೇವನೆ ಟ್ಯೂಶನ್ ಇದ್ದಂತೆ, ಅದು ಅನಿವಾರ್ಯವೇನಲ್ಲ ಎನ್ನುವುದು ಅವರ ಉಪಮೆ. 'ಆಯುರ್ವೇದ ಉತ್ಸವ'ವನ್ನು ಅವರು ಸಂಘಟಿಸಿದರೆ ಅದರಲ್ಲಿ ಸಂಗೀತ, ಸಾಹಿತ್ಯ, ಯಕ್ಷಗಾನ, ಹಾಸ್ಯ ಎಲ್ಲವೂ ಜಾಗ ಪಡೆಯುತ್ತವೆ.
ಡಾ.ಗಿರಿಧರ ಕಜೆ ಯಾಕೆ ಮುಖ್ಯ? ಎಲ್ಲರೂ ಅಲೋಪತಿಯ ಮೊರೆ ಹೋಗುತ್ತಿರುವಾಗ, ದೇಶೀಯ ವೈದ್ಯಪದ್ಧತಿಗಳ ನಿಜಾಯಿತಿಯನ್ನು ಯಾವುದೇ ಕಪಟವಿಲ್ಲದೆ ಸಾಬೀತುಪಡಿಸುವ ಕಜೆಯಂಥವರು ಮುಖ್ಯರಾಗುತ್ತಾರೆ. <


ವೈದ್ಯ ನಡೆದ ದಾರಿ, ಸಾಗುತ್ತಿರುವ ದಾರಿ ಇವೆರಡೂ ಸರಿಯಿದ್ದಲ್ಲಿ ಮಾತ್ರ ಸಾಮಾಜಿಕ ಸ್ವಾಸ್ಥ್ಯ ರಕ್ಷಣೆ ಸಾಧ್ಯ. ನವರಸಗಳಲ್ಲಿ ಕರುಣಾರಸದಿಂದ ಹುಟ್ಟಿದ್ದು ವೈದ್ಯಶಾಸ್ತ್ರ. ಆರೋಗ್ಯವನ್ನು ಜನರಿಗೆ ತಲುಪಿಸುವ ಹೊಣೆ ಹೊತ್ತ ಡಾಕ್ಟರ್ಗಳಲ್ಲಿ ಕರುಣಾಭಾವ ಹುಟ್ಟಬೇಕಾದ್ದು ಇಂದಿನ ಅವಶ್ಯಕತೆ.
- ಡಾ.ಗಿರಿಧರ ಕಜೆ


- ಹರೀಶ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.