ಬೈಟುಕಾಫಿ

ಆ ಹುಡುಗನ ಪ್ರೀತಿ..!

Published On :

ಅವನು ದಿನಾಲೂ ಅವಳ ಫೋಟೊ ನೋಡುತ್ತ ಕೂರುತ್ತಿದ್ದ. ಆಕೆಯನ್ನು ನೋಡುತ್ತಲೇ ಅದೇನೋ ಒಂಥರಾ ಖುಷಿಯಲ್ಲಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಿದ್ದ. ಅವಳ ಗುಣಗಾನದಲ್ಲಿ ಮೈಮರೆಯುತ್ತಿದ್ದ. ಅವನ ತಂದೆ ತಾಯಿಗಂತೂ ಈತನ ನಡವಳಿಕೆ ಕಂಡು ಏನು ಮಾಡಬೇಕೆಂಬುದೇ ತೋಚತಾಯಿತು.
ಮಗ ಪ್ರೀತಿ-ಪ್ರೇಮ ಅಂತ ಹಾಳಾಗಿಹೋಗುತ್ತಾನೇನೋ ಎಂಬ ಭೀತಿ ಅವರ ನಿದ್ದೆಗೆಡಿಸಿತ್ತು. ಆತ ಒಂದು ದಿನವೂ ಇವರ ಮಾತು ಮೀರಿದವನಲ್ಲ. ಪಡ್ಡೆ ಹುಡುಗರ ಜಾಯಮಾನವೂ ಅವನದಾಗಿರಲಿಲ್ಲ. ಆದರೆ ಅದೇಕೋ ಅವನು ಓರ್ವ ಹೆಣ್ಣಿನ ಫೋಟೊ ನೋಡುತ್ತ, ಏಕಾಂತದಲ್ಲಿರುತ,್ತ ಆಕೆಯಿಂದ ತನ್ನಲ್ಲಿ ಏನೋ ಪರಿವರ್ತನೆಯಾಗುತ್ತಿದೆ ಎಂಬಂತೆ ವರ್ತಿಸುತ್ತಿದ್ದುದನ್ನು ಕಂಡು ಬೆರಗಾಗಿದ್ದರು. ಕಡೆಗೊಂದು ದಿನ ಆತನ ತಂದೆ ತಾಯಿ ಇಬ್ಬರೂ ಅವನನ್ನು ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋದರು.
ಮನೋವೈದ್ಯರು, 'ನೋಡಪ್ಪಾ, ಈ ವಯಸ್ಸಿನಲ್ಲಿ ಓದಿ ಏನಾದರೂ ಸಾಧಿಸಿ ತೋರಿಸಬೇಕು. ಹಾಳಾದ ಪ್ರೀತಿ-ಪ್ರೇಮ ಎಂದು ತಲೆಕೆಡಿಸಿಕೊಂಡು ಹೆತ್ತವರನ್ನು ನೋಯಿಸಬೇಡ. ಇಷ್ಟಕ್ಕೂ ಆ ಫೋಟೊದಲ್ಲಿರುವವಳು ಯಾರು?' ಎಂದು ಕೇಳಿದರು. ಆಗ ಆತ ನಗುತ್ತ ಆ ಫೋಟೊ ತೋರಿಸಿದ. ಆ ಫೋಟೊದಲ್ಲಿದ್ದವಳು ನಿಜವಾಗಿಯೂ ಸುಂದರಿ, ಮಹಾನ್ ಸಾಧಕಿ, ಮಾದರಿ ಮಹಿಳೆ ಮದರ್ ತೆರೆಸಾ! 'ಈಕೆಯದು ಅದೆಂಥ ದೊಡ್ಡ ಸಾಧನೆ. ನನಗೆ ಇವಳೇ ಸ್ಫೂರ್ತಿ. ಹಾಗಾಗಿ ನಾನು ಸದಾ ಇವಳ ಫೋಟೊವನ್ನು ನೋಡುತ್ತಿರುತ್ತೇನೆ' ಎಂದಾಗ ಅಲ್ಲಿದ್ದವರು ಮೌನಕ್ಕೆ ಶರಣಾಗಿದ್ದರು!
- ಶರಣಪ್ಪ ಜಿ. ಚಟ್ಟಿ, ಗೋಲಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.