ನುಲಿ ನಲಿ
ನಾಲಿಗೆ ನುಲಿ
ಚುನಾವಣೆಗಳ ಚದುರಂಗದಾಟಗಳಿಗೆ ಚರ್ಚೆಗಳ ಚರ್ವಿತಚರ್ವಣ, ಚೋದ್ಯಗಳೇ ಛಾವಣಿ.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಪದ್ಯ-ಗದ್ಯ, ವಾರ್ತೆಗಳು ಹವಾಮಾನ ವರದಿ
ಇತ್ಯಾದಿ ವಾಚಿಸುವವ -
ಸಾರು, ಹುಳಿಯ ತಳದಲ್ಲಿರುವ ಸ್ವಾರಸ್ಯ, ಸ್ಥಿರದ
ವಿರುದ್ಧ ಪದ ಚಲಿಸುವುದು, ನಿಲ್ಲಿಸಿದರೆ, ಕೊನೆಗೆ
ಅಭ್ಯಾಸವಾಗಬಹುದು -
ಈ ರಾಶಿಯ ಹೆಸರು, ಏಡಿಯ ಹೆಸರು
ಎರಡೂ ಒಂದೇ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಶ್ರೀಮನ್ನಾರಾಯಣ, ಸದಾ ತನ್ನ ಪರಮಭಕ್ತ
ನಾರದ ಮಹರ್ಷಿಯ -
ಇದು ನನ್ನ ವ್ಯಾಪ್ತಿಗೆ ಬರುತ್ತದೆ ಎಂದು
ಹೇಳಲು ಒಂದೇ ಪದ -
'ಲೋಕಪಾವನಿ, ಜಗಜ್ಜನನಿ, ಶ್ರೀಮಾತೆ' -
ಒಂದು ನೂರು ಸಾವಿರ, ಸಣ್ಣ ಆಕಾರದ
ತೇಲುವ ದೋಣಿಗಳು -
ಗತಪ್ರತ್ಯಾಗತ
ಇತ್ತೀಚೆಗೆ ಬಂದಿದ್ದ, ಧಾನ್ಯಗಳಿಂದ ಧೂಳು ಬೇರ್ಪಡಿಸುವ ಸಾಧನ, ರಜೆ ತೆಗೆದುಕೊಂಡು ಹೋದರೆ, ಹೀಗೆ ಹೇಳಬಹುದೇ?
'ಜರಡಿರಜ'
ನಿನ್ನೆಯ ಉತ್ತರಗಳು
3 ಅಕ್ಷರ- ವಾಸುಕಿ, ಸುಸ್ವರ, ಕಿರಣ.
4 ಅಕ್ಷರ- ಜನಮತ, ನಮಸ್ಕಾರ, ಮಸ್ಕಾನಗೆ, ತರಗೆಲೆ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

