ಬೈಟುಕಾಫಿ

ವಿಪರ್ಯಾಸ!

Published On :

ಆ ಯುವಕನಿಗೆ ಮದುವೆಯಾಗಿ ಎರಡೋ-ಮೂರೋ ತಿಂಗಳಾಗಿತ್ತಷ್ಟೆ. ಆಗಲೇ ಅತ್ತೆ-ಸೊಸೆಗೆ ಸಣ್ಣಪುಟ್ಟ ಜಗಳ, ಭಿನ್ನಾಭಿಪ್ರಾಯ ಪ್ರಾರಂಭವಾಗಿಬಿಟ್ಟಿತ್ತು. ಹಾಗಂತ ಅದೇನೂ ಅಂಥ ದೊಡ್ಡ ವಿಷಯವಾಗಿರಲಿಲ್ಲ. ಎಲ್ಲರ ಮನೆಯಂತೆಯೇ ಇತ್ತು. ಆದರೆ ಆತನ ಹೆಂಡತಿಗೆ ಅತ್ತೆ-ಮಾವನ ಬಗ್ಗೆ ಸಣ್ಣದೊಂದು ಅಸಡ್ಡೆ, ಅವರನ್ನು ನೋಡಿದರೆ ಸಿಡಿಸಿಡಿ, ಕಿರಿಕಿರಿ ಪ್ರಾರಂಭವಾಗಿತ್ತು. ಏನೇ ಆಗಲಿ ಅವರನ್ನು ಮನೆಯಿಂದ ಹೊರ ಕಳಿಸಿಯೇಬಿಡಬೇ ಕೆಂಬುದೇ ಆಕೆಯ ಒಂದಂಶದ ಅಜೆಂಡಾ ಆಗಿತ್ತು. ಪ್ರೈವೆಸಿಯ ನೆಪ ಹೇಳಿ ಅತ್ತೆ -ಮಾವನನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಹುನ್ನಾರ ಮಾಡತೊಡಗಿದಳು.
ಇನ್ನು ಆತನೋ ವಿವೇಚನೆ ಕಳೆದುಕೊಂಡಿದ್ದ. ಹೆತ್ತು, ಸಾಕಿ ಸಲಹಿದ ತಂದೆ ತಾಯಿಗಿಂತ ಹೆಂಡತಿಯ ಪ್ರೈವೇಸಿಯೇ ಆತನಿಗೆ ದೊಡ್ಡ ವಿಷಯವಾಯಿತು. ಹೆಂಡತಿಯ ಬೆಣ್ಣೆ ಮಾತುಗಳಿಗೆ ಕರಗಿಹೋದ. ತಾವಂದುಕೊಂಡಂತೆ ವೃದ್ಧ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಸ್ವತಃ ಮಗನೇ ಮುಂದಾದ.
ಕಾಲಚಕ್ರ ಉರುಳಲೇಬೇಕಲ್ಲವೇ? ಉರುಳಿದ ಕಾಲಚಕ್ರದಲ್ಲಿ ಆತನ ಮಗನೂ ದೊಡ್ಡವನಾದ. ಮದುವೆಯೂ ಆಯಿತು. ಆ ಮಗ ತನ್ನ ತಂದೆ-ತಾಯಿಗೆ 'ಗೆಟ್ ಔಟ್‌' ಎಂದ. ಆಗ ಆ ತಂದೆ ಹೆಂಡತಿಯ ಮುಖಾಂತರ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ! ಆ ವೇಳಾಗಾಗಲೇ ಆತನ ತಂದೆ-ತಾಯಿ ಮರಣ ಹೊಂದಿದ್ದರು. ಎಂಥ ವಿಪರ್ಯಾಸ!

-ಬಿ. ಸೋಮಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.