ಲೇಖನ ಆಹ್ವಾನ
ಬೆಂಗಳೂರಿನ ಭಾರತಿ ಕಲಾನಿಕೇತನ ಸಂಸ್ಥೆಯು ಈ ವರ್ಷದ ರಾಜ್ಯೋತ್ಸವದಂದು 'ಸಾಹಿತ್ಯ ಕೌಸ್ತುಭ' ಎಂಬ 600 ಪುಟಗಳ ಬೃಹತ್ ಕೃತಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿ ಗೌರವ ಪ್ರಧಾನ ಸಂಪಾದಕರು. ಕಳೆದ 25 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಮತ್ತು ನಾನಾ ಕ್ಷೇತ್ರಗಳಲ್ಲಿ ಆಗಿರುವ ಬೆಳವಣಿಗೆ ದಾಖಲಿಸುವುದು ಪ್ರಮುಖ ಉದ್ದೇಶ. ಈ ಸಂಪುಟಕ್ಕೆ ಆಸಕ್ತರು ಲೇಖನಗಳನ್ನು ಕಳಿಸಬಹುದು. ಕಥೆ, ಕವನ, ಹಾಸ್ಯ, ರಂಗಭೂಮಿ, ಜಾನಪದ, ಯಕ್ಷಗಾನ, ಇತಿಹಾಸ, ಶಾಸನ, ವಾಸ್ತುಶಿಲ್ಪ, ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ಸಂಶೋಧನೆಗಳಿಗೆ ಸಂಬಂಧಿಸಿದ ಲೇಖನಗಳನ್ನು ಕಳಿಸಬಹುದು. ಕನಿಷ್ಠ ಎಂಟು ಪುಟ, ಗರಿಷ್ಠ ಮಿತಿ ಇಲ್ಲ. ಲೇಖನ ಕಳಿಸಲು ಕೊನೆ ದಿನ ಏಪ್ರಿಲ್ 15. ಲೇಖಕರಿಗೆ ಒಂದು ಪ್ರತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಲೇಖನ ಕಳಿಸಬೇಕಾದ ಮತ್ತು ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ: ಎನ್.ನಾರಾಯಣ ಬಲ್ಲಾಳ, ಸಂಪಾದಕರು, ಭಾರತಿ ಕಲಾನಿಕೇತನ ಸಂಸ್ಥೆ, ನಂ. 53/4 ಡಬ್ಲ್ಯೂ, 3ನೇ ಅಡ್ಡರಸ್ತೆ, ಕೆಂಪಮ್ಮ ದೇವಸ್ಥಾನದ ಹಿಂಬದಿ, ಸೋಮೇಶ್ವರ ಬಡಾವಣೆ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076. ಮೊ: 9646002960. ಮಿಂಚಂಚೆ: bsprasadh@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

