ಕಿವಿ ಮೇಲ್ ಫ್ಲವರ್

ಮಾನಿನಿಯರ ಆಕ್ಸೆಸರೀಸ್ಗಳಲ್ಲಿ ಇವತ್ತಿದ್ದದ್ದು, ನಾಳೆಗೆ ಹಳತು. ಇದು ಎಲ್ಲ ಕಾಲದ ಫ್ಯಾಶನ್ನ ಪ್ಯಾಶನ್. ಕಿವಿ ಮೇಲೆ ನವಿಲು ಗರಿ ಇಟ್ಟುಕೊಂಡದ್ದಾಯಿತು. ಈಗ ನಮ್ಮ ಕಿವಿ ಮೇಲೆ ನಾವೇ ಹೂ ಇಟ್ಟುಕೊಳ್ಳುವ ಜಮಾನ.
ತದ್ರೂಪು ಹೂವೇ ಮೈದಳೆದಂತೆ. ಸ್ಪರ್ಶದಲ್ಲೂ ಅದೇ ನಯ, ನುಣುಪು. ಕಿವಿ ಮೇಲಿರಿಸಿದರಂತೂ ಥೇಟ್ ಶಕುಂತಲೆಯೇ.
ಕಾಲೇಜು ಹುಡುಗಿಯರ ಕಿವಿಗೊಂದು ಹೊಸ ಶೋಭೆ ತಂದಿವೆ ಈ ಫ್ಲವರ್ ಇಯರ್ ರಿಂಗ್ಸ್. ಡ್ರೆಸ್ಗೆ ತಕ್ಕಂತೆ ಮ್ಯಾಚಿಂಗ್ ಫಾರ್ಮುಲಾ ಇಲ್ಲೂ ಚೆನ್ನಾಗಿಯೇ ವರ್ಕ್ ಆಗುತ್ತಿದೆ. ಇಂಥವುಗಳು ಅಗ್ಗದಲ್ಲಿ ಸಿಕ್ಕರೆ ಯಾರು ತಾನೇ ಬಿಟ್ಟಾರು? ಡ್ರೆಸ್ಗೊಂದು ಬಣ್ಣದಲ್ಲಿ ಕಲರ್ ಕಾಂಬಿನೇಷನ್ ಮಾಡಲು ಅಡ್ಡಿಯಿಲ್ಲ. ಫ್ಯಾಷನ್ ಥೀಮ್ನಲ್ಲಿ ಇವುಗಳ ಡಿಸೈನ್, ವರ್ಕ್ಗಳು ಗೋಲ್ಡ್, ಪರ್ಲ್, ಸ್ಟೋನ್ ವರ್ಕ್ ಸೂಪರ್ಬ್.
ಟ್ರೆಂಡ್ ಬದಲಾವಣೆಯಲ್ಲಿ ಮುಂದಿರುವ ಯಾವ ಕಾಲೇಜು ಯುವತಿಯರ ಕಿವಿ ನೋಡಿದರೂ ಇವುಗಳದ್ದೇ ಕಾರುಬಾರು. ವರ್ಕಿಂಗ್ ವುಮೆನ್, ಹೌಸ್ ವೈಫ್, ಟೀನೇಜ್ ಗರ್ಲ್, ಪುಟಾಣಿ ಬಟಾಣಿಗಳೆಲ್ಲಾ ಈ ಫ್ಲವರ್ ಇಯರ್ ರಿಂಗ್ಸ್ಗೆ ಫಿದಾ ಆಗಿರುವುದಂತೂ ಸದ್ಯದ ಸತ್ಯ. ಎಲ್ಲರ ಫೇವರಿಟ್ ಆಕ್ಸೆಸರಿ ಲಿಸ್ಟ್ನಲ್ಲಿ ಇಂದು ಅಗ್ರಸ್ಥಾನ ಪಡೆದಿದೆ ಈ ಆರ್ಟಿಫಿಷಿಯಲ್ ಫ್ಲವರ್ಸ್.
ಅಗ್ಗವಾಗಿ ಸಿಗುವಂಥವುಗಳನ್ನು ಡ್ರೆಸ್ಗೊಂದರಂತೆ ಮ್ಯಾಚಿಂಗ್ ಆಗಿ ಶೇಖರಿಸಿಡಬಹುದು. ಬ್ರಾಂಡ್ ಬೇಕೆನ್ನುವವರಿಗೆ ದುಬಾರಿ ಡಿಸೈನ್ಗಳು ಚಿನ್ನ, ಬೆಳ್ಳಿ, ಡೈಮಂಡ್ಗಳಲ್ಲೂ ಮೈದಳೆಯುತ್ತಿವೆ.
ಡಿಸೈನ್ಗಳೇನು?
ಲಾಕ್ಡ್, ಹ್ಯಾಂಗಿಂಗ್, ಬಟನ್ ಲಾಕ್ಡ್ ಮತ್ತಿತರೆ ರೀತಿಗಳಲ್ಲಿ ಇವು ಸಿಗಲಿವೆ. ಎಲ್ಲಾ ಕಲರ್ಗಳಲ್ಲೂ, ಎಲ್ಲಾ ಡಿಸೈನ್ಗಳಲ್ಲೂ ಲಭ್ಯ. ಕಣ್ಣಿಗೆ ಕಾಣದ ಚಿಕ್ಕ ಗಾತ್ರದಿಂದ ಹಿಡಿದು, ಕಿವಿ ತುಂಬಾ ಕಾಣುವ ಗಾತ್ರಗಳಲ್ಲಿ ಸಿಗಲಿದೆ. ಸ್ಟೈಲ್, ಚಾಯ್ಸ್ಗೆ ತಕ್ಕುದಾಗಿ ಸೆಲೆಕ್ಷನ್ ನಿಮ್ಮದು. ಇವುಗಳ ಕಲೆಕ್ಷನ್ಗಳು ಮಾಲ್ಗಳಿಂದ ಹಿಡಿದು ಬೀದಿ ಬದಿ ಅಂಗಡಿಗಳ ವರೆಗೂ ವ್ಯಾಪಿಸಿದೆ.
-ಭಾಗ್ಯ ಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


