ಶಿಕ್ಷಣವೆಂದರೆ...
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಯನ್ನು ದಡ್ಡ ಎಂತಲೂ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯನ್ನು ಬುದ್ಧಿವಂತಎಂತಲೂ ಕರೆಯುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ನಿರ್ಮಾಣ ಮಾಡಲಾಗುತ್ತದೆ. ತತ್ತ್ವಜ್ಞಾನಿಗಳು, ಶಿಕ್ಷಣತಜ್ಞರು ರೂಪಿಸಿದ ಮೂಲ ಸಿದ್ಧಾಂತಗಳನ್ನು ಗ್ರಂಥಗಳಲ್ಲಿ ಮುಚ್ಚಿಟ್ಟು, ಅಂಕಾಧಾರಿತ ಶಿಕ್ಷಣವನ್ನು ಪತ್ರ, ಪರದೆಗಳಲ್ಲಿ ಬಿಚ್ಚಿಡಲಾಗಿದೆ. ಪಠ್ಯವಸ್ತುವಿನಿಂದ ಗೈಡ್‌ಗಳಿಗೆ, ಗೈಡ್‌ಗಳಿಂದ ಶಿಕ್ಷಕರಿಗೆ, ಶಿಕ್ಷಕರಿಂದ ವಿದ್ಯಾರ್ಥಿಗಳ ನೋಟ್ಸ್‌ಗಳಿಗೆ, ನೋಟ್ಸ್‌ಗಳಿಂದ ತಲೆಗಳಿಗೆ, ತಲೆಗಳಿಂದ ಉತ್ತರ ಪತ್ರಿಕೆಗಳಿಗೆ ಹರಿದಾಡುವ ಜ್ಞಾನದ ಸಂಚಾರಕ್ಕೆ ಶಿಕ್ಷಣವೆಂದು ಕರೆಯುತ್ತಾರೆ.
ವಿದ್ಯಾಭ್ಯಾಸವೆಂದರೆ ತಲೆಗೆ ತುಂಬಲಾದ ಮಾಹಿತಿಗಳ ಮೊತ್ತವಲ್ಲ, ಪುಸ್ತಕಪಾಂಡಿತ್ಯವಲ್ಲ. ಹಲವು ವಿಧದ ಜ್ಞಾನಾರ್ಜನೆಯೂ ಅಲ್ಲ. ಯಾವುದು ಜನಸಾಮಾನ್ಯರನ್ನು ಜೀವನಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದೊ, ಯಾವುದು ಮನುಷ್ಯನಿಗೆ ಚಾರಿತ್ರ್ಯಬಲ, ಸೇವಾತತ್ಪರತೆ, ಸಾಹಸಿಕತೆಗಳನ್ನು ಒದಗಿಸುವುದೊ ಅದು ಶಿಕ್ಷಣ.
ಇನ್ನು ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ಅದೆಲ್ಲವೂ ಒಳಗೇ ಇರುವುದು. ಜಗತ್ತು ಗಳಿಸಿರುವ ಜ್ಞಾನವೆಲ್ಲವೂ ಮನಸ್ಸಿನಿಂದ ಬಂದುದು. ಜಗತ್ತಿನ ಅನಂತ ಪುಸ್ತಕ ಭಂಟಾರವೆಲ್ಲ ನಿಮ್ಮ ಮನಸ್ಸಿನಲ್ಲಿಯೇ ಇದೆ. ಬಾಹ್ಯಪ್ರಪಂಚವೆಂಬುದು ಸೂಚನೆ ಮಾತ್ರ. ಅದು ನಿಮ್ಮ ಮನಸ್ಸನ್ನು ವಿಚಾರ ಮಾಡುವಂತೆ ಪ್ರೇರೇಪಿಸುವುದು ಅಷ್ಟೆ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

