ಶಸ್ತ್ರಚಿಕಿತ್ಸಕರಿಗೆ ಬೇಕಾಗಿರುವುದು...
ಪ್ರಖ್ಯಾತ ಶಸ್ತ್ರಚಿಕಿತ್ಸಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಹೀಗೆಂದು ಹೇಳಿದರು: ಶಸ್ತ್ರಚಿಕಿತ್ಸಕನಿಗೆ ಮುಖ್ಯವಾಗಿ ಎರಡು ಕೌಶಲಗಳಿರಬೇಕು- ಒಂದು, ಹೇವರಿಕೆ ಇಲ್ಲದಿರುವುದು, ಇನ್ನೊಂದು ಸೂಕ್ಷ್ಮವಾಗಿ ಗಮನಿಸುವಿಕೆ.
ಅನಂತರ ಅವರು ತಮ್ಮ ಒಂದು ಬೆರಳನ್ನು ವಾಕರಿಕೆ ಬರುವಂತಹ ಒಂದು ದ್ರಾವಣದಲ್ಲಿ ಅದ್ದಿ ಅದನ್ನು ನೆಕ್ಕಿದರು ಮತ್ತು ತಮ್ಮ ವಿದ್ಯಾರ್ಥಿಗಳಿಗೂ ಹಾಗೆಯೇ ಮಾಡುವಂತೆ ಹೇಳಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡು ಯಾವುದೇ ಹೇವರಿಕೆಯನ್ನು ತೋರ್ಪಡಿಸದೆ ತಮ್ಮ ಬೆರಳನ್ನು ದ್ರಾವಣದಲ್ಲಿ ಅದ್ದಿ ನೆಕ್ಕಿದರು.
ಶಸ್ತ್ರಚಿಕಿತ್ಸಕರು ನಗುತ್ತ ಹೇಳಿದರು- 'ವಿದ್ಯಾರ್ಥಿಗಳೇ, ಮೊದಲನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಆದರೆ ದುರದೃಷ್ಟವಶಾತ್ ಎರಡನೇ ಪರೀಕ್ಷೆಯಲ್ಲಿ ನೀವ್ಯಾರೂ ಉತ್ತೀರ್ಣರಾಗಿಲ್ಲ. ಕಾರಣ, ನಿಮ್ಮಲ್ಲಿ ಯಾರೊಬ್ಬರೂ ಕೂಡ ನಾನು ನೆಕ್ಕಿದ ಬೆರಳು, ನಾನು ದ್ರಾವಣದಲ್ಲಿ ಅದ್ದಿದ ಬೆರಳಲ್ಲ ಎಂಬುದನ್ನು ಗಮನಿಸಲಿಲ್ಲ!'
- ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

