ಬೈಟುಕಾಫಿ

ಕರಕುಶಲ ತರಬೇತಿ

Published On :

ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹಶಿಲ್ಪ ಮತ್ತು ಕುಂಭ ಕಲೆ (ಟೆರ್ರಾಕೋಟ) ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ನೇರ ಸಂದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಟೆರ್ರಾಕೋಟ ಕಲೆಯ ತರಬೇತಿ ಅವಧಿ 6 ತಿಂಗಳು. ಉಳಿದವುಗಳ ತರಬೇತಿಯ ಅವಧಿ 18 ತಿಂಗಳು. 18ರಿಂದ 35 ವರ್ಷದವರೆಗಿನ, ಕನಿಷ್ಠ 7ನೇ ತರಗತಿ ಉತ್ತೀರ್ಣರಾದವರು ತರಬೇತಿಗೆ ಅರ್ಹರಾಗಿರುತ್ತಾರೆ. ತರಬೇತಿ ಅವಧಿಯಲ್ಲಿ ಊಟ, ವಸತಿ, ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸ ಎಲ್ಲವೂ ಉಚಿತ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆ ಆದ್ಯತೆ.
ಮೇ 27ರಿಂದ 30ರವರೆಗೆ ನೇರ ಸಂದರ್ಶನ ಜರುಗಲಿದೆ. ಮೇ 31, 2013ರಿಂದ ತರಬೇತಿ ತರಗತಿಗಳು ಪ್ರಾರಂಭವಾಗುವವು. ಪ್ರವೇಶಕ್ಕೆ ಅರ್ಜಿಗಳನ್ನು ಸಂದರ್ಶನದ ದಿನ ಅಥವಾ ಮುಂಗಡವಾಗಿ ಪಡೆದು ಸಲ್ಲಿಸಬಹುದು. ಆಸಕ್ತರು ಪೋಷಕರೊಡನೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ- ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆ, ಜೋಗರದುಡ್ಡಿ, ಬಿಡದಿ ಕೈಗಾರಿಕಾ ಪ್ರದೇಶ, ಬಿಡದಿ-562109, ರಾಮನಗರ ಜಿಲ್ಲೆ. ಮೊಬೈಲ್: 9900158885.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.