ಸೋತು ಜಯಿಸಿ
ಈ ಯಶಸ್ಸು ಅನ್ನೋದಿದೆಯಲ್ಲ. ಅದಕ್ಕೊಂದು ನಿರ್ದಿಷ್ಟ ಮಾನದಂಡ ಅಂತಿಲ್ಲ. ಯಶಸ್ಸೆಂದರೆ ಇದೇ ಅಂಥ ಯಾರೊಬ್ಬರೂ...
ಈ ಯಶಸ್ಸು ಅನ್ನೋದಿದೆಯಲ್ಲ. ಅದಕ್ಕೊಂದು ನಿರ್ದಿಷ್ಟ ಮಾನದಂಡ ಅಂತಿಲ್ಲ. ಯಶಸ್ಸೆಂದರೆ ಇದೇ ಅಂಥ ಯಾರೊಬ್ಬರೂ ಖಚಿತವಾಗಿ ಹೇಳಲು ಬಾರದು. ಕಾರಣವಿಷ್ಟೆ, ವ್ಯಕ್ತಿಯಿಂದ ವ್ಯಕ್ತಿಗೆ ಅದರ ಸ್ವರೂಪ ಬದಲು. ರಾಜಕಾರಣಿಗೆ ಅದು ಅದೃಷ್ಟವೆಂದೆನಿಸಿಕೊಳ್ಳಬಹುದು. ಉದ್ಯಮಿಗೆ ಪರಿಶ್ರಮದ ಫಲವಾಗಿ ಕಾಣುತ್ತದೆ. ವಿದ್ಯಾರ್ಥಿಗಳು ಅದನ್ನು ಹಿರಿಯರ ಆಶೀರ್ವಾದ ಎನ್ನುತ್ತಾರೆ. ಸ್ತ್ರೀ ತನ್ನ ಸಾಧನೆಯನ್ನು ಹೆತ್ತವರೋ, ಗಂಡನೋ ಅಂತೂ ಪುರುಷರ ಬೆಂಬಲ ಎಂದು ಬಿಂಬಿಸಿ ಅವರಿಂದ ಬರುವ ಅಡ್ಡಿಯನ್ನು ನಿವಾರಿಸಿಕೊಳ್ಳುತ್ತಾಳೆ. ಉದ್ಯೋಗಿಗಳು ತಮ್ಮ ಸಕ್ಸಸ್ಗೆ ಬಾಸ್ನ ಹೆಸರನ್ನು ಸೇರಿಸುತ್ತಾರೆ. ಸಂತರು, ಧರ್ಮಭೀರುಗಳು ದೇವರ ಕೃಪೆಯೆಂದು ಬಣ್ಣಿಸುತ್ತಾರೆ. ಕ್ರೀಡಾಪಟುಗಳು, ಹೋರಾಟಗಾರರು ತಮ್ಮ ಛಲದ ಫಲವೆಂದು ಬೀಗುತ್ತಾರೆ. ಅಧಿಕಾರಶಾಹಿಗಳು ತಮ್ಮ ಸಾಮರ್ಥ್ಯವೇ ಇದಕ್ಕೆಲ್ಲಾ ಕಾರಣವೆಂಬ ಹೊಗಳಿಕೆಯನ್ನು ಬಯಸುತ್ತಾರೆ. ಕೆಲವೊಮ್ಮೆ ಯಶಸ್ಸು ಪ್ರಾಮಾಣಿಕತೆಗೆ ಸಂದ ಗೌರವವೆಂದೂ, ಒಳ್ಳೆಯತನಕ್ಕೆ ಸಿಕ್ಕ ಬೆಲೆಯೆಂದೂ ಗುರುತಿಸಲಾಗುತ್ತದೆ.
ಇದರಲ್ಲಿ ಯಾವುದು ನಿಜ? ಎಲ್ಲವೂ ನಿಜ ಮತ್ತುಋ ಎಲ್ಲವೂ ನಿಜವಲ್ಲ! ಏಕೆಂದರೆ ಇವೆಲ್ಲವೂ ಕಾರಣಗಳಲ್ಲಿ ಒಂದಾಗಿರಬಹದು ಅಥವಾ ಇವೆಲ್ಲದರ ಸಂಗಮವಾಗಿಯೂ ಇದ್ದಿರಬಹುದು. ನಿಜವಾಜ ಯಶಸ್ಸು ಅಡಗಿರುವುದು ರಾಜಿಯಲ್ಲಿ. ಇವೆಲ್ಲವೂ ಇದ್ದೂ ಸಿದ್ಧಾಂತದ ಹೆಸರಿನ ಸಿನಿಕತನಕ್ಕೆ ಬಿದ್ದೋ, ಹಠಮಾರಿತನ ತೋರಿಯೋ, ಜಿಗುಟುತನದಿಂದಲೋ ಕುಳಿತುಬಿಟ್ಟರೆ ಯಶಸ್ಸು ನಿಮ್ಮ ಬಳಿ ಬಾರದು. ಹಾಗೆಂದು ಈ ರಾಜಿ ಎಂಬುದು ಅವಕಾಶವಾದಿ ಮನೋಭಾವ ಖಂಡಿತಾ ಅಲ್ಲ. ಇದು ಕೆಲವೊಂದು ಸನ್ನಿವೇಶ, ಬೆಳವಣಿಗೆ, ನಾವೇ ರೂಪಿಸಿಕೊಂಡ ವ್ಯವಸ್ಥೆಯ ಜತೆಗಿನ ಹೊಂದಾಣಿಕೆ. ಯಶಸ್ವಿಯಾಗ ಬಯಸುವವರು ಬದಲಾವಣೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಕಲಿಯಲೇಬೇಕು. ಮುಂದಾಗಬಹುದಾದುದನ್ನು ಮೊದಲೇ ಗ್ರಹಿಸಿ ಅಂತ ಬೆಳವಣಿಗೆಗಳಿಗೆ ತನ್ನನ್ನು, ತನ್ನ ಮನೋಭಾವವನ್ನು ಒಗ್ಗಿಸಿಕೊಳ್ಳಲು ಮುಂದಾಗಬೇಕು. ಬದುಕಿದ್ದರೆ ಬೆಲ್ಲ ಬೇಡಿ ತಿಂದೇನು ಅಂದರೆ ಇದೇ ಇರಬೇಕಲ್ಲವೇ? ಬದುಕು ಪ್ರಾಮುಖ್ಯವೇ ಹೊರತು ಬೇರಲ್ಲ. ಸೋತು ಜಯಿಸುವವನೇ ಜಾಣ; ಸೋಲಲೇಕೆ ಹಿಂಜರಿಕೆ?
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

