ಬೈಟುಕಾಫಿ

ಬಾಲಕನ ಸಾಹಸ ಹಿರಿಯರನ್ನೂ ಬೆಚ್ಚಿಸಿತ್ತು!

Published On :

ನರೇಂದ್ರ ಬಾಲಕನಾಗಿದ್ದಾಗಲೇ ತನ್ನ ಧೈರ್ಯ, ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದನು. ಹತ್ತು ಹಲವಾರು ಹವ್ಯಾಸಗಳಲ್ಲಿ ತೊಡಗಿರುತ್ತಿದ್ದನು. ನಾಟಕ ಕಲಿಯುವುದು, ವ್ಯಾಯಾಮ, ಅಂಗಸಾಧನೆ, ಮಲ್ಲಯುದ್ಧ, ಈಜುವುದು, ಕ್ರಿಕೆಟ್, ಗೋಲಿಯಾಟ, ಮಾಯಾಲಾಂದ್ರದ ಮೂಲಕ ಗೋಡೆಯ ಮೇಲೆ ಚಿತ್ರ ಬಿಡಿಸುವುದು, ಬೆರಳ ನೆರಳಾಟ ಹೀಗೆ ವೈವಿಧ್ಯಮಯ ಹವ್ಯಾಸಗಳಲ್ಲಿ ಪ್ರವೀಣನಾಗಿದ್ದನು. ಅದರಲ್ಲೂ ಗರಡಿಮನೆ ಸೇರಿ ಅಂಗಸಾಧನೆ ಮಾಡಿ ಮುಷ್ಟಿಯುದ್ಧ, ಈಜು, ಲಾಠಿ ಬೀಸುವುದರಲ್ಲಿ ವಿಶೇಷ ಸಾಧನೆ ಮಾಡಿದ್ದನು.  ಅಷ್ಟೇ ಅಲ್ಲ, ಮುಸಲ್ಮಾನ ಪೈಲ್ವಾನಿಂದ ಲಾಠಿ ಬೀಸುವ ವಿದ್ಯೆ ಕಲಿತು ಅರಗಿಸಿಕೊಂಡಿದ್ದನು.
ಒಂದು ದಿನ ಶಾಲೆಯಲ್ಲಿ ಬಗೆಬಗೆಯ ಕಸರತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನರೇಂದ್ರ ಪ್ರೇಕ್ಷಕರಲ್ಲಿ ಒಬ್ಬನಾಗಿದ್ದ. ಆದರೆ ಬಿರುಸೇ ಇಲ್ಲದ ಪಂದ್ಯವನ್ನು ಕಂಡು ನರೇಂದ್ರನಿಗೆ ರೇಗಿತು. ಇದ್ದಕ್ಕಿದ್ದಂತೆ ಎದ್ದು ಅಖಾಡವನ್ನು ಪ್ರವೇಶಿಸಿಬಿಟ್ಟ. ನರೇಂದ್ರನ ಜತೆ ಸೆಣಸಲು ವಯಸ್ಸಿನಲ್ಲಿ ಆತನಿಗಿಂತ ಹಿರಿಯನಾದ ದಾಂಡಿಗನೊಬ್ಬ ಎದ್ದು ಬಂದ. ಬಿರುಸಿನಿಂದ ನಡೆದ ಪಂದ್ಯದಲ್ಲಿ ಕೊನೆಗೆ ಗೆದ್ದವನು ನರೇಂದ್ರ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಕುಣಿದರು. ನರೇಂದ್ರನ ಶಾಲೆಯ ಹಿರಿಯರನ್ನೂ ಇದು ಬೆಚ್ಚಿಸಿತು.
ಹೀಗೆ ನರೇಂದ್ರ ಸನ್ನಿವೇಶವನ್ನು ತನ್ನ ಶಕ್ತಿಬಲದಿಂದ ಪರಿವರ್ತಿಸಿ ತನ್ನದಾಗಿಸಿಕೊಳ್ಳುತ್ತಿದ್ದನು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.