ಹಚ್ಚೆ ಹಸಿರು
ಟ್ಯಾಟೂ ಹಾಕಿಸಿಕೊಳ್ಳುವ ಖಯಾಲಿ ಇಂದು ವಿಶ್ವವ್ಯಾಪಿ. ಇಂದಿನ ಯುವಕ- ಯುವತಿಯರಿಗೆ ಹಚ್ಚೆ ಹಾಕಿಸಿಕೊಳ್ಳುವುದೆಂದರೆ...

ಎದೆಯ ಮೇಲೆ, ತೋಳುಗಳ ಮೇಲೆ, ಬೆನ್ನಿನ ಮೇಲೆ, ತೊಡೆಗಳ ಮೇಲೆ...ಹಲ್ಲು ಕಿರಿದು ನಗುತ್ತಿರುವ, ನಾನಾ ಭಂಗಿಯಲ್ಲಿ ಹೆದರಿಸುತ್ತಿರುವ ಕಪ್ಪು ಬಿಳುಪು ಚಿತ್ರಗಳು. ಮುಖ ಆಕರ್ಷಕವಾಗಿಲ್ಲದಿದ್ದರೂ ಪರವಾಗಿಲ್ಲ, ಹಚ್ಚಿಕೊಂಡ ವಿಚಿತ್ರ ಟ್ಯಾಟೂ ತೋರಿಸಿ ಸಂಗಾತಿಗಳನ್ನು ಸೆಳೆಯುವ ತವಕ.
ಟ್ಯಾಟೂ ಹಾಕಿಸಿಕೊಳ್ಳುವ ಖಯಾಲಿ ಇಂದು ವಿಶ್ವವ್ಯಾಪಿ. ಇಂದಿನ ಯುವಕ- ಯುವತಿಯರಿಗೆ ಹಚ್ಚೆ ಹಾಕಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಉತ್ಸಾಹ. ಎಲ್ಲೆಲ್ಲೋ ಹಾಕಿಸಿಕೊಳ್ಳುವ ಹುಚ್ಚು. ಎಲ್ಲಿ ಬೇಕಾದರೂ ಹಾಕಿಕೊಳ್ಳಿ, ಆದರೆ ಅದು ಆರೋಗ್ಯಕರವಾಗಿದೆಯಾ ನೋಡಿಕೊಳ್ಳಿ! ಇಂಗ್ಲೆಂಡ್ ಮತ್ತಿತರೆಡೆ ಟ್ಯಾಟೂ ಹಾಕಿಸಿಕೊಳ್ಳುವುದರ ಬಗ್ಗೆ ಬಿಗಿಯಾದ ಕಾನೂನುಗಳಿವೆ. ಲೈಸೆನ್ಸ್ ಪಡೆಯದೆ ಕಾನೂನುಬಾಹಿರವಾಗಿ ಟ್ಯಾಟೂ ಹಾಕುವಂತಿಲ್ಲ. ಹಾಗೆ ಹಾಕುವವರಿಂದ ಎಚ್ಐವಿ ಮತ್ತು ಹೆಪೆಟೈಟಸ್ ರೋಗಗಳು ಸೋಂಕುವ ಅಪಾಯವೂ ಇದೆಯೆನ್ನಿ. ಸ್ಥಳೀಯ ಕಾನೂನು ಪರಿಪಾಲಕರ ಸಂಘ (ಎಲ್ಜಿಎ)ದವರು ಹೇಳುವುದೇನೆಂದರೆ, ಕಾನೂನುಬಾಹಿರವಾಗಿ ಟ್ಯಾಟೂ ಹಾಕುವವರು ಸ್ಟರಿಲೈಜ್ ಮಾಡಿದ ಸೂಜಿಯನ್ನು ಬಳಸುವುದಿಲ್ಲ. ಇವರಿಗೆ ವೈದ್ಯಕೀಯ ಜ್ಞಾನವೂ ಇರುವುದಿಲ್ಲ. ಒಬ್ಬರಿಗೆ ಚುಚ್ಚಿದ ಸೂಜಿಯನ್ನೇ ಇನ್ನೊಬ್ಬರಿಗೂ ಚುಚ್ಚುವುದರಿಂದ ರೋಗಿಯ ರಕ್ತದಲ್ಲಿರುವ ರೋಗಾಣು ನಿರೋಗಿಯನ್ನೂ ಸೇರುವ ಸಾಧ್ಯತೆ ಹೆಚ್ಚು. ಇಂಥವರು ಸರಕಾರದಿಂದ ಅಧಿಕೃತ ಲೈಸನ್ಸ್ ಪಡೆದಿಲ್ಲದಿರುವುದರಿಂದ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಉಳಿಸುವುದಕ್ಕಾಗಿ ಇಂಥಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಚರ್ಮ ವ್ಯಾಧಿಗಳನ್ನೂ, ಏಡ್ಸ್ ಮತ್ತು ಹೆಪೆಟೈಟಸ್ನ್ನು ಆಹ್ವಾನಿಸಿಕೊಂಡಂತಾಗುತ್ತದೆ. ಹೀಗಾಗಿ ಅಧಿಕೃತ ಲೈಸೆನ್ಸ್ ಪಡೆದ ಪಾರ್ಲರುಗಳಲ್ಲೇ ಟ್ಯಾಟೂ ಹಾಕಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ ಎಲ್ಜಿಎದ ಮುಖ್ಯಸ್ಥರು. ಬ್ರಿಟನ್ನಂಥ ದೊಡ್ಡ ನಗರಗಳಲ್ಲಿ ಕಾನೂನುಬಾಹಿರವಾಗಿ ಟ್ಯಾಟೂ ಹಾಕುವವರಿಗೆ ಎರಡು ವರ್ಷಗಳ ಸೆರೆಮನೆ ವಾಸದ ಶಿಕ್ಷೆಯೂ ಇದೆ. ಈ ಕಾನೂನನ್ನು ಇನ್ನಷ್ಟು ಬಿಗಿ ಮಾಡಲು ಅಲ್ಲಿನ ಆಡಳಿತ ವರ್ಗ ನಿರ್ಧರಿಸಿದೆ. ಭಾರತದಲ್ಲಿಯೂ ಸಹ ಅನೇಕ ನಗರಗಳ ಮುಖ್ಯ ಬೀದಿಗಳಲ್ಲಿ ಅನಧಿಕೃತವಾಗಿ ಟ್ಯಾಟೂ ಹಾಕುವವರು ಬೇಕಾದಷ್ಟು ಜನ ಸಿಗುತ್ತಾರೆ. ಟ್ಯಾಟೂ ಹುಚ್ಚಿರುವ ಗ್ರಾಹಕರೂ ಸಹ ಅಂಥವರಿಂದ ಟ್ಯಾಟೂ ಹಾಕಿಸಿಕೊಳ್ಳಲು ಉತ್ಸುಕರಾಗಿರುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳಿ. ಆದರೆ ಮಾನ್ಯತೆ ಪಡೆದ ಪಾರ್ಲರುಗಳಲ್ಲಿಯೇ ಹಾಕಿಸಿಕೊಳ್ಳಿ. ಸ್ವಲ್ಪ ಹೆಚ್ಚು ಹಣ ಕೊಟ್ಟರೂ ಪರವಾಗಿಲ್ಲ. ಮುಂದೆ ರೋಗ ನಿವಾರಣೆಗಾಗಿ ಸುರಿಯುವ ಅಪಾರ ಹಣದ ಉಳಿತಾಯವಾದೀತು.
-ಎಂ.ಬಿ. ನಾಯಕ, ಹಾಸನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


