ಸ್ವಾಮೀಜಿ ಮತ್ತು ಲಿಯಾನ್ ದಂಪತಿ
ವಿವೇಕಾನಂದರು ಚಿಕಾಗೋದಲ್ಲಿದ್ದ ಸಮಯದಲ್ಲಿ ಲಿಯಾನ್ ದಂಪತಿ ಮನೆಯಲ್ಲಿ ಇಳಿದುಕೊಂಡಿದ್ದರು. ಲಿಯಾನ್ ದಂಪತಿ, ಸಮ್ಮೇಳನದ ಪ್ರತಿನಿಧಿಯಾಗಿ ಬಂದಿರುವವರಲ್ಲಿ ವಿಶಾಲ ಮನೋಭಾವದ ಒಬ್ಬರನ್ನು ತಮ್ಮ ಮನೆಗೆ ಅತಿಥಿಯಾಗಿ ಕಳುಹಿಸಿಕೊಡುವಂತೆ ಸಮ್ಮೇಳನದ ಅಧಿಕಾರಿಗಳನ್ನು ಕೇಳಿಕೊಂಡಿದ್ದರು.
ತಮ್ಮ ಮನೆಗೆ ಯಾರಾದರೂ ಕ್ರೈಸ್ತ ಪಾದ್ರಿಗಳು ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ, ಮಧ್ಯರಾತ್ರಿಯಲ್ಲಿ ಕರೆಗಂಟೆ ಬಾರಿಸಿತು. ಎಮಿಲಿ ಲಿಯಾನ್ ಬಾಗಿಲು ತೆರೆದು ನೋಡುತ್ತಾಳೆ 'ಕಿತ್ತಳೆ ಬಣ್ಣದ ನಿಲುವಂಗಿ, ಕೆಂಪು ಪೇಟ ಧರಿಸಿದ ಸುಂದರ ಪೌರ್ವಾತ್ಯ ಯುವಕ ಸ್ವಾಮಿ ವಿವೇಕಾನಂದರು ನಿಂತಿದ್ದಾರೆ'. ದಂಪತಿ ಅವರನ್ನು ಆದರದಿಂದ ಸ್ವಾಗತಿಸಿ ಉಪಚರಿಸಿದರು.
ಮನೆಗೆ ಬಂದಿರುವ ಸಂಬಂಧಿಕರಲ್ಲಿ ಬಹುತೇಕರು ವರ್ಣಭೇದಬುದ್ಧಿಯ ಅಮೆರಿಕದ ದಕ್ಷಿಣ ಭಾಗದವರು. ಪೌರ್ವಾತ್ಯ ಅತಿಥಿಯನ್ನು ಕಂಡು ಏನನ್ನುತ್ತಾರೋ ಎಂಬ ಆತಂಕ ಅವರಿಗೆ. ಆಗ ಜಾನ್ ಲಿಯಾನ್ 'ನೋಡು, ನಮ್ಮ ಅತಿಥಿ ಸಂಬಂಧಿಕರೆಲ್ಲ ಇಲ್ಲಿಂದ ಹೊರಟುಹೋದರೂ ನಾವು ದುಃಖಿಸಬೇಕಾಗಿಲ್ಲ! ನಾನು ಕಂಡವರಲ್ಲೆಲ್ಲ ಅತ್ಯಂತ ಮೇಧಾವಿ, ಈ ಭಾರತೀಯ! ಅವರಿಗೆ ಇಷ್ಟಬಂದಷ್ಟು ದಿನ ಇಲ್ಲಿರಲಿ' ಎಂದರು.
ಲಿಯಾನ್ ದಂಪತಿ ಸ್ವಾಮೀಜಿಯನ್ನು ತಮ್ಮ ಮಗನಂತೆ ಕಾಣುತ್ತಿದ್ದರು. ಅವರ ಮೊಮ್ಮಗಳು ಪುಟ್ಟ ಕಾರ್ನೆಲಿಯಾ ಸ್ವಾಮೀಜಿಯನ್ನು ತುಂಬಾ ಹಚ್ಚಿಕೊಂಡಿದ್ದಳು. ಸ್ವಾಮೀಜಿಯ ನೆನಪುಗಳನ್ನು 1956ರಲ್ಲಿ ಕಾರ್ನೆಲಿಯಾ ಕೃತಿರೂಪದಲ್ಲಿ ಹೊರತಂದಳು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

