ಬೈಟುಕಾಫಿ

ಖಂಡಿಸು ನನ್ನ

ಖಂಡಿಸು ನನ್ನ
Published On :

ಕೊನೆಗೂ ರಾಧೆಯ ಬಳಿ ಕೃಷ್ಣ ಬಂದಿದ್ದಾನೆ. ಕೃಷ್ಣನ ವಂಚನೆ ಹಾಗೂ ವಿರಹದಿಂದ ಕುಪಿತಳಾಗಿರುವ ರಾಧೆ ಆತನ ಜತೆ ಮಾತಾಡುತ್ತಿಲ್ಲ. ಆಕೆಯನ್ನು ಒಲಿಸಿಕೊಳ್ಳಲು ಕೃಷ್ಣನ ನಾನಾ ಆಟ ನಡೆದಿದೆ.

ಸತ್ಯಮೇವಾಸಿ ಯದಿ ಸುದತಿ ಮಯಿ ಕೋಪಿನೀ
ದೇಹಿ ಖರನಖರಶರಘಾತಂ
ಘಟಯ ಭುಜಬಂಧನಂ ಜನಯ ರದಖಂಡನಂ
ಯೇನ ವಾ ಭವತಿ ಸುಖಜಾತಂ


'ಪ್ರಿಯೆ, ನಿನಗೆ ನನ್ನಲ್ಲಿ ನಿಜಕ್ಕೂ ಕೋಪವೇ ಇದೆಯೆ? ಹಾಗಿದ್ದರೆ ಒಂದು ಕೆಲಸ ಮಾಡು. ಬಾಣದಂತೆ ಚೂಪಾಗಿರುವ ನಿನ್ನ ಉಗುರುಗಳಿಂದ ನನ್ನ ಮೈಯನ್ನು ಪರಚಿ ಜರ್ಝರಿತಗೊಳಿಸು! ಹಲ್ಲುಗಳಿಂದ ಕಚ್ಚಿ ಖಂಡಿಸು! ನಿನ್ನ ತೋಳುಬಳ್ಳಿಗಳಿಂದ ನನ್ನನ್ನು ಕಟ್ಟಿಹಾಕು! ಇಷ್ಟೆಲ್ಲ ಮಾಡಿದರೂ ನನಗೆ ಅದು ಸುಖವೇ ಆಗಲಿದೆ.'
ಎಂಥ ಭಂಡನಿರಬೇಕು ಈ ಕೃಷ್ಣ! ರಾಧೆಯನ್ನು ವಂಚಿಸಿ ಅನ್ಯ ಸ್ತ್ರೀಯರ ಜತೆಗೆ ರಾಸಕೇಳಿಯಾಡಿದ್ದೂ ಅಲ್ಲದೆ ಈಗ ಬಂದು ಆಕೆಯ ಮುಂದೆ ಅಂಗಲಾಚುತ್ತಿದ್ದಾನೆ. ವಿನಂತಿಯೇನೋ ಕಾವ್ಯಮಯವಾಗಿಯೇ ಇದೆ. ಆದರೆ ಅದು ನೇರವಾಗಿ ಕೇಳಿಗೆ ಆಹ್ವಾನಿಸುವಂತೆಯೇ ಇದೆ. ಇದರಿಂದ ನಮಗೆ ತಿಳಿದುಬರುವ ಒಂದು ಸಂಗತಿ ಎಂದರೆ, ವಂಚಿಸುವ ಗಂಡಸರೂ, ಕೋಪಿಸಿಕೊಳ್ಳುವ ಸ್ತ್ರೀಯರೂ, ಮತ್ತಷ್ಟೇ ನಯವಾದ ಓಲೈಕೆಯ ವಿಧಾನಗಳೂ ಆಗ ಚಾಲ್ತಿಯಲ್ಲಿದ್ದವು ಎಂಬುದು. ಇದನ್ನೆಲ್ಲ ನೋಡಿದಾಗ ಕೃಷ್ಣ ಮುಕ್ತರತಿಯ ಪ್ರತಿಪಾದಕನೇ ಎಂಬ ಭಾವವೂ ನಮ್ಮಲ್ಲಿ ಸುಳಿಯದಿರದು.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.