ಸಿಂಹಸದೃಶ ಶಕ್ತಿಶಾಲಿ ವ್ಯಕ್ತಿತ್ವ!
1894ರ ಆರಂಭ ಕಾಲಕ್ಕೆ ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರು ಒಂದು ಕಡೆ ಜನಪ್ರಿಯತೆಯ ಶಿಖರವೇರುತ್ತಿದ್ದರೆ, ಮತ್ತೊಂದು ಕಡೆ ಧರ್ಮಾಂಧ ಕ್ರೈಸ್ತರಿಂದ ಅಪಪ್ರಚಾರಕ್ಕೆ ಗುರಿಯಾಗುತ್ತಿದ್ದರು. ಸ್ವಾಮೀಜಿ ಮಾತ್ರ ಅದಾವ ಪರವಿರೋಧಗಳನ್ನೂ ಗಮನಿಸದೆ ತಮ್ಮ ಕಾರ್ಯದಲ್ಲಿ ಮುಂದೆ ಸಾಗುತ್ತಿದ್ದರು.
ಅಮೆರಿಕ ಕಾಂಗ್ರೆಸ್ ಸದಸ್ಯ, ಸ್ಪೇನ್‌ದೇಶದ ರಾಯಭಾರಿ ಥಾಮಸ್ ಪಾಮರ್ ಅವರು ಸ್ವಾಮೀಜಿಯನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅವರಿಬ್ಬರ ನಿಕಟತೆಯನ್ನು ಕಂಡ ಪತ್ರಿಕೆಗಳು, 'ಸುಂಟರಗಾಳಿ ಸನ್ಯಾಸಿಯಿಂದ ಪಾಮರ್ ಹಿಂದೂವಾಗಿ ಮತಾಂತರ ಹೊಂದಿದ್ದಾರೆ. ಅವರು ಭಾರತಕ್ಕೆ ಹೋಗಲಿದ್ದಾರೆ' ಹೀಗೆ ಸ್ವಾಮೀಜಿಯ ಪ್ರಭಾವವನ್ನು ಕುರಿತು ಎದ್ದ ಊಹಾಪೋಹಗಳಿಗೆ ಲೆಕ್ಕವಿರಲಿಲ್ಲ.
ಸ್ವಾಮೀಜಿಯ ವ್ಯಕ್ತಿತ್ವದ ಪ್ರಭಾವದ ಮಟ್ಟವು ಅವರನ್ನು ನೇರವಾಗಿ ಭೇಟಿ ಮಾಡಿದ ವ್ಯಕ್ತಿಯ ಮಾತುಗಳಲ್ಲಿ ತಿಳಿದುಬರುತ್ತದೆ. ಆ ವ್ಯಕ್ತಿಯನ್ನು 'ನೀವು ವಿವೇಕಾನಂದರನ್ನು ಕಂಡಿರಲ್ಲ,ಆಗ ನಿಮಗಾದ ಅನುಭವವೆಂಥದು?' ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿ ಗಂಭೀರ ಸ್ವರದಲ್ಲಿ 'ನೀವು ಸಿಂಹವನ್ನು ನೋಡಿದ್ದೀರಾ?' ಎಂದು ಮರು ಪ್ರಶ್ನಿಸಿದ.
'ಹೌದು, ನೋಡಿದ್ದೇನೆ, ಮೃಗಾಲಯದಲ್ಲಿ'. 'ಸರಿ, ಅದರೊಂದಿಗೆ ಕೈ ಕುಲುಕಿದ್ದೀರಾ?' 'ಸಿಂಹದೊಂದಿಗೆ ಕೈ ಕುಲುಕುವುದೇ?' ಆ ವ್ಯಕ್ತಿ ದಿಟ್ಟ ಸ್ವರದಲ್ಲಿ, 'ಸ್ವಾಮೀಜಿಯವರ ವ್ಯಕ್ತಿತ್ವದಿಂದ ಹೊಮ್ಮುತ್ತಿದ್ದ ಶಕ್ತಿ ಅಂಥದ್ದು!' ಎಂದ.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

