ಬೈಟುಕಾಫಿ

ಮನಸುಗಳ ಕಂದಕ

ಈ ಸಂವಹನ ಕೊರತೆ ಎಂಬುದು ಇದೆಯಲ್ಲ ಅದಕ್ಕಿಂತ ಅಪಾಯಕಾರಿ ಇನ್ನೊಂದು ಇರಲಾರದು. ಒಂದಿಡೀ ಬದಕನ್ನೇ ಅದು ಮುಳುಗಿಸಿಬಿಡುತ್ತದೆ. ನೆಮ್ಮದಿಯನ್ನೇ ..

ಮನಸುಗಳ ಕಂದಕ
Published On :

ಈ ಸಂವಹನ ಕೊರತೆ ಎಂಬುದು ಇದೆಯಲ್ಲ ಅದಕ್ಕಿಂತ ಅಪಾಯಕಾರಿ ಇನ್ನೊಂದು ಇರಲಾರದು. ಒಂದಿಡೀ ಬದಕನ್ನೇ ಅದು ಮುಳುಗಿಸಿಬಿಡುತ್ತದೆ. ನೆಮ್ಮದಿಯನ್ನೇ ನುಂಗಿಹಾಕಿಬಿಡುತ್ತದೆ. ಸಾವರಿಸಿಕೊಳ್ಳಲೇ ಆಗದಷ್ಟು ಬೃಹತ್ ಸಂಕಷ್ಟಕ್ಕೆ ನಮ್ಮನ್ನು ತಳ್ಳಿಬಿಡುತ್ತದೆ. ಅದಕ್ಕೆ ಇಂಥದ್ದೇ ಕಾರಣ ಬೇಕೆಂದೇನೂ ಇಲ್ಲ. ಇಂಥ ಸನ್ನಿವೇಶದಲ್ಲೇ ಸಂವಹನ ಕೊರತೆ ಉಂಟಾಗುತ್ತದೆ ಎಂಬುದನ್ನೂ ಊಹಿಸಲು ಸಾಧ್ಯವಿಲ್ಲ. ಎರಡು ದುರ್ಬಲ ಮನಸ್ಸುಗಳು ಸೃಷ್ಟಿಸಿಕೊಳ್ಳುವ ಬಿಕ್ಕಟ್ಟು ಇದು. ತೀರಾ ಕೇವಲವೆನಿಸುವ ವಿಚಾರವೊಂದಕ್ಕೆ ಇದ್ದಕ್ಕಿದ್ದಂತೆ ಮನಸು ಮನಸುಗಳ ನಡುವೆ ಬೃಹತ್ ಕಂದಕ ನಿರ್ಮಾಣವಾಗಿಬಿಡುತ್ತದೆ. ಎಂಥ ಸಾಹಸದಿಂದಲೂ ಅದನ್ನು ತುಂಬಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಅದು ವಿಸ್ತರಿಸುತ್ತ ಸಾಗುತ್ತದೆ. ಕೊನೆಗೆ ಯಾವ ಮಟ್ಟಕ್ಕೆ ತಲುಪುತ್ತದೆ ಎಂದರೆ ಕೇವಲ ಸಂಬಂಧಗಳು ಮಾತ್ರ ಮುರಿದುಬೀಳುವುದಿಲ್ಲ, ಬದಲಾಗಿ ಅದರ ಪರಿಣಾಮ ಶಾಂತ ಜೀವನವನ್ನೇ ಕಲಕಿಬಿಡುವಷ್ಟು ಶಕ್ತಿಶಾಲಿಯಾಗಿರುತ್ತದೆ ಈ ಸಂವಹನ ಕೊರತೆ.
ಬಹುತೇಕ ಸಂದರ್ಭದಲ್ಲಿ ನಮ್ಮ ಸ್ವಯಂಕೃತ ಅಪರಾಧದಿಂದ, ತಪ್ಪು ತಿಳಿವಳಿಕೆಯಿಂದಲೇ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತದಾದರೂ ಕೆಲವು ವೇಳೆ ಸ್ವಾರ್ಥಕ್ಕೋಸ್ಕರ ಕೆಲ ವಿಘ್ನಕಾರಿ ಶಕ್ತಿಗಳು ಉದ್ದೇಶಪೂರ್ವಕ ಇಂಥ ಬಿಕ್ಕಟ್ಟನ್ನು ನಿರ್ಮಾಣ ಮಾಡಿರುತ್ತಾರೆ. ಆ ಮೂಲಕ ತಮ್ಮ ಲಾಭವನ್ನು ಕಂಡುಕೊಳ್ಳುವ ಹವಣಿಕೆ ಅವರದ್ದಾಗಿರುತ್ತದೆ. ಇದರಿಂದ ನೈಜ ನಷ್ಟ ಮುರಿದು ಹೋದ ಮನಸ್ಸುಗಳಿಗೇ ವಿನಾ ಅದಕ್ಕೆ ಕಾರಣವಾದವರಿಗೆ ಅಲ್ಲ. ಇಂಥ ಪ್ರಸಂಗಗಳಲ್ಲಿ ಸಾಧ್ಯವಾದರೆ ಪ್ರತಿಷ್ಠೆಯನ್ನು ಬದಿಗಿಟ್ಟು ಪರಸ್ಪರ ನೇರವಾಗಿ ಚರ್ಚಿಸಿ ವಾತಾವರಣವನ್ನು ತಿಳಿಗೊಳಿಸಿಕೊಳ್ಳುವುದೇ ಬುದ್ಧಿವಂತಿಕೆಯ ಲಕ್ಷಣ. ಅದು ಸಾಧ್ಯವಾಗದಿದ್ದಲ್ಲಿ ತಾಳ್ಮೆಯೇ ಅತ್ಯಂತ ಸೂಕ್ತ ಪರಿಹಾರ. ಒಮ್ಮೆ ಸಂವಹನ ಕೊರತೆ ಉಂಟಾದರೆ ಅದರ ಬಗ್ಗೆಯೇ ಮತ್ತಷ್ಟು ಮಾತನಾಡಿ ತಪ್ಪು ಅಭಿಪ್ರಾಯಗಳನ್ನು ಹೆಚ್ಚು ಮಾಡುತ್ತ ಹೋಗುವುದಕ್ಕಿಂತ ಸುಮ್ಮನಿದ್ದುಬಿಡಬೇಕು. ಕಾಲವೇ ಅದಕ್ಕೆ ಪರಿಹಾರವನ್ನು ಕಲ್ಪಿಸುತ್ತದೆ. ಒಂದಲ್ಲಾ ಒಂದು ದಿನ ಸತ್ಯದ ಅರಿವಾಗಿ ತಾನೇ ತಾನಾಗಿ ಉದ್ಭವಿಸಿದ ಬಿಕ್ಕಟ್ಟು ಪರಿಹಾರವಾಗುವ ಸಂಭವ ಇರುತ್ತದೆ. ಮೂರನೆಯವರ ಮಾತು ಕೇಳದೆ ನೇರವಾಗಿ ವಿಷಯ ಸ್ಪಷ್ಟಪಡಿಸಿಕೊಳ್ಳುವುದರ ಜತೆಗೆ ನಮ್ಮ ನಂಬಿಕೆಕಳೆದುಕೊಳ್ಳದಿರುವುದು ಅತ್ಯಂತ ಮುಖ್ಯ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.