ಸ್ನಾನವೋ ರತಿಯೋ?

ನಂಬಿಕೆ ಮುಖ್ಯ. ಪ್ರಣಯದಲ್ಲಂತೂ ಅದು ಅತೀ ಮುಖ್ಯ. ನಲ್ಲ- ನಲ್ಲೆಯರಲ್ಲಿ ನಂಬಿಕೆಯಿಲ್ಲವಾದರೆ ಏನಾಗುತ್ತದೆ? ಪರಸ್ಪರರ ಪ್ರತಿ ಚರ್ಯೆಯೂ ಸಂಶಯಾಸ್ಪದವಾಗುತ್ತದೆ.
ಇಲ್ಲೊಬ್ಬಳು ನಲ್ಲೆಯಿದ್ದಾಳೆ. ಈಕೆಯ ಸಖಿಯೂ ಜಾಣೆಯೇ. ನಲ್ಲೆಗೆ ನಲ್ಲನ ಮೇಲೂ ಸಂಶಯ. ತನ್ನ ಸಖಿಯ ಮೇಲೂ ಅನುಮಾನ. ಒಮ್ಮೆ ಈ ಸಖಿ ಸ್ನಾನ ಮಾಡಿ ಬರುತ್ತೇನೆಂದು ಕೆರೆಗೆ ಹೋದಳು. ಬರುವುದು ಸ್ವಲ್ಪ ತಡವಾಯಿತು. ಆಕೆ ಬಂದ ಕೂಡಲೇ ನಲ್ಲೆ ತನ್ನ ವಾಗ್ಬಾಣಗಳಿಂದ ಆಕೆಯನ್ನು ಘಾತಿಸತೊಡಗಿದಳು.
ನಿಃಶ್ಶೇಷಚ್ಯುತಚಂದನಂ ಸ್ತನತಟಂ ನಿರ್ಮೃಷ್ಟರಾಗೋಧರೋ
ನೇತ್ರೇ ದೂರಮನಂಜನೇ ಪುಲಕಿತಾ ತನ್ವೀ ತವೇಯಂ ತನುಃ
ಮಿಥ್ಯಾವಾದಿನಿ ದೂತಿ! ಬಾಂಧವಜನಸ್ಯಾಙ್ಞಾತಪೀಡಾಗಮೇ
ವಾಪಿಂ ಸ್ನಾತುಮಿತೋ ಗತಾಸಿ ನ ಪುನಸ್ತಸ್ಯಾಧಮಸ್ಯಾಂತಿಕಮ್
ನೀನು ಹೋಗುವ ವೇಳೆ ನಿನ್ನ ಉನ್ನತಕುಚಗಳಿಗೆ ಸವರಿದ್ದ ಚಂದನವು ಈಗ ಕಾಣಿಸುತ್ತಲೇ ಇಲ್ಲ. ತಾಂಬೂಲ ಸೇವನೆಯಿಂದ ರಕ್ತರಾಗರಂಜಿತವಾಗಿದ್ದ ನಿನ್ನ ತುಟಿಗಳು ಈಗ ಬಣ್ಣ ಕಳೆದುಕೊಂಡು ಒಣಗಿ ಸಪ್ಪಗಾಗಿವೆ. ನಿನ್ನ ನಯನಗಳಿಗೆ ಲೇಪಿಸಿದ್ದ ಕಾಡಿಗೆಯ ಕಪ್ಪು ಈಗ ಇಲ್ಲವಾಗಿದೆ. ನಿನ್ನ ಮೈ ಪುಲಕಿತಾವೇಶಗೊಂಡಿದೆ. ಕೆರೆಯಲ್ಲಿ ಸ್ನಾನ ಮಾಡಿ ಬರುತ್ತೇನೆಂದು ಹೇಳಿ ನನ್ನ ನಲ್ಲ, ಆ ನೀಚನ ಬಳಿ ಹೋಗಿ ರತಿಕ್ರೀಡೆಯಾಡಿ ಬಂದಿರುವೆಯಾ? ಮೋಸಗಾತಿ!
ಇಲ್ಲಿ ಗಮನಿಸಬೇಕಾದ್ದೆಂದರೆ, ಸ್ನಾನ ಮಾಡಿ ಬಂದರೂ ಮೈ ಇದೇ ರೀತಿ ಅಗುತ್ತದೆ. ರತಿಕ್ರೀಡೆಯ ಬಳಿಕವೂ ಹೀಗೇ ಕಾಣಿಸುತ್ತದೆ. ಸಖಿ ಎಲ್ಲಿಗೆ ಹೋಗಿ ಬಂದಿದ್ದಳೋ, ಅವಳೇ ಹೇಳಬೇಕು. ಹೇಳಿದರೂ ನಂಬುವವರುಂಟೆ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


