ಬೈಟುಕಾಫಿ

ಅಭಿನಂದನೆಯ ಗಂಗೆ ಅಮೆರಿಕದಲ್ಲಿ ಹರಿದಳು!

Published On :

'ಸ್ವಾಮಿ ವಿವೇಕಾನಂದರು ಭಾರತದ ಹಿಂದೂಗಳ ಪ್ರತಿನಿಧಿಯೇ ಅಲ್ಲ' ಎಂಬ ಅಪಪ್ರಚಾರದಿಂದ ಮನನೊಂದ ಸ್ವಾಮೀಜಿ ಮದ್ರಾಸಿನ ಶಿಷ್ಯರೊಬ್ಬರಿಗೆ ಪತ್ರ ಬರೆದು, ಮದ್ರಾಸ್‌ನಲ್ಲಿ ಸಭೆಯನ್ನು ಏರ್ಪಡಿಸಿ 'ಸ್ವಾಮೀಜಿಯನ್ನು ಹಿಂದೂ ಪ್ರತಿನಿಧಿಯಾಗಿ ಅಮೆರಿಕದ ಸಮ್ಮೇಳನಕ್ಕೆ ಕಳುಹಿಸಿರುವುದಾಗಿ' ಸಂಪೂರ್ಣ ಅನುಮೋದನೆ ವ್ಯಕ್ತಪಡಿಸುವಂಥ ಒಂದು ಗೊತ್ತುವಳಿಯನ್ನು ಹೊರಡಿಸಿ ಸಮ್ಮೇಳನಾಧ್ಯಕ್ಷರಿಗೂ, ಅಮೆರಿಕದ ಪತ್ರಿಕೆಗಳಿಗೂ ಕಳುಹಿಸುವಂತೆ ತಿಳಿಸಿದರು. ಆದರೆ ಎರಡು ತಿಂಗಳಾದರೂ ಭಾರತದಿಂದ ಒಂದೇಒಂದು ಪತ್ರವೂ ಬಾರದಿದ್ದುದು ಅವರಿಗೆ ನಿರಾಸೆಯನ್ನುಂಟುಮಾಡಿತು.
ಸತ್ಯಸಂಗತಿಯೆಂದರೆ, ಭಾರತದಲ್ಲಿ ಸ್ವಾಮೀಜಿಯ ಪತ್ರ ತಲುಪಿದ ಮರುದಿನದಿಂದಲೇ ಪತ್ರಿಕೆಗಳಲ್ಲಿ ಧನ್ಯತಾ ಸಭೆಗಳನ್ನು ನಡೆಸಿ, ಠರಾವನ್ನು ಅಂಗೀ ಕರಿಸಿ ಅಮೆರಿಕಕ್ಕೆ ಕಳುಹಿಸಲಾಗಿತ್ತು. ಆದರೆ ಇದು ಸ್ವಾಮೀಜಿಯ ಕೈಸೇರಿದ್ದು ಮಾತ್ರ ಎರಡು ತಿಂಗಳ ನಂತರ! ಸ್ವಾಮೀಜಿಗೆ ರಾಶಿರಾಶಿ ಬಿನ್ನವತ್ತಳೆಗಳು, ಅಭಿನಂದನಾ ಪತ್ರಗಳ ಗಂಗೆಯೇ ಮಹಾಪೂರವಾಗಿ ಹರಿಯತೊಡಗಿತು. ಇದನ್ನು ನೋಡಿ ಸ್ವಾಮೀಜಿ ಹೇಳುತ್ತಾರೆ, 'ಭಾರತದಲ್ಲಿ ನಾನು ಭಯಂಕರವಾಗಿ ಸಾರ್ವಜನಿಕವಾಗಿಬಿಟ್ಟಿದ್ದೇನೆ. ಒಂದು ಚಟಾಕು ಕೀರ್ತಿಯನ್ನು ಒಂದು ಸೇರು ಶಾಂತಿ-ಪಾವಿತ್ರ್ಯಗಳ ಬೆಲೆಯನ್ನು ತೆರುವುದರಿಂದ ಮಾತ್ರವೇ ಕೊಳ್ಳಲು ಸಾಧ್ಯ. ಈ ಪ್ರಶಂಸೆಯನ್ನು ಕೇಳಿಕೇಳಿ ನನಗೆ ಜುಗುಪ್ಸೆಯಾಗಿದೆ. ಭಗವಂತ ನನಗೆ ಶಾಂತಿ, ಪಾವಿತ್ರ್ಯಗಳ ದಾರಿಯನ್ನು ತೋರಲಿ.' ಹೀಗೆ ಅಮೆರಿಕದಲ್ಲಿ ಸ್ವಾಮೀಜಿಗೆ ಎದುರಾದ ಅಪಪ್ರಚಾರದ ಕೆಸರು ಭಾರತದಿಂದ ಒಮ್ಮೆಲೇ ನುಗ್ಗಿಬಂದ ಅಭಿನಂದನಾ ಗಂಗೆಯ ಮಹಾಪೂರಕ್ಕೆ ಸಿಕ್ಕು ಕೊಚ್ಚಿಹೋಗಿ, ಸ್ವಾಮೀಜಿಯ ಸತ್ಯಶೀಲ ವ್ಯಕ್ತಿತ್ವವನ್ನು ಮತ್ತೊಮ್ಮೆ ಅಮೆರಿಕನ್ನರಿಗೆ ಋಜುವಾತುಗೊಳಿಸಿತು!

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.