ಗುಡ್ಡದ ನಲ್ಲಿ
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ನೀರಾವರಿ ಮೂಲ ಬೆಂಗಳೂರಿನ ನಲ್ಲಿಗುಡ್ಡ ಕೆರೆ. ಮಹಾನಗರಿಯ ಎಲ್ಲ ಕೆರೆಗಳಿಗೆ ಆದ ಕಥೆಯೇ ಈ ಕೆರೆಗೂ ಆಗುತ್ತದೆ ...

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ನೀರಾವರಿ ಮೂಲ ಬೆಂಗಳೂರಿನ ನಲ್ಲಿಗುಡ್ಡ ಕೆರೆ. ಮಹಾನಗರಿಯ ಎಲ್ಲ ಕೆರೆಗಳಿಗೆ ಆದ ಕಥೆಯೇ ಈ ಕೆರೆಗೂ ಆಗುತ್ತದೆ ಎನ್ನುವ ಅಪಾಯ ಒದಗಿತ್ತು. ಕೆರೆಯ ನೀರು ಸಂಗ್ರಹ ಸಾಮರ್ಥ್ಯ ನಿಧಾನವಾಗಿ ಕಡಿಮೆಯಾಗುತ್ತ ಸಾಗಿತ್ತು. ಆದರೆ ಕಾರ್ಪೊರೇಟ್ ಕಂಪನಿಯೊಂದರ ಪ್ರಯತ್ನದ ಫಲವಾಗಿ ಇದೇ ಕೆರೆ ಈಗ ಪುನಃ ಆ ಭಾಗದ ರೈತರ ಪಾಲಿನ ಸಂಜೀವಿನಿಯಾಗಿದೆ.
ಕೆರೆಯ ವಿಸ್ತಾರ ಇದ್ದದ್ದು 8.9596 ಎಂಸಿಎಂ. ನಂತರ ಅದು 6.3378 ಎಂಸಿಎಂಗೆ ಇಳಿಯಿತು. ಇದನ್ನು ಹೀಗೇ ಬಿಟ್ಟರೆ ನೀರಿನ ಬಳಕೆ ಕಡಿಮೆಯಾಗುತ್ತದೆ. ಜತೆಗೆ ಅಂತರ್ಜಲಮಟ್ಟವೂ ಕುಸಿಯುತ್ತದೆ ಎಂಬ ಕಳವಳದಿಂದ ಇದರ ಪುನಶ್ಚೇತನಕ್ಕೆ ಕೈ ಹಾಕಿದ್ದು ಕೋಕಾ-ಕೋಲಾ ಬೆವರೇಜಸ್ ಪ್ರೈ.ಲಿ. (ಎಚ್ಸಿಸಿಬಿಪಿಎಲ್).
ಸಾವಿರ ಗಿಡ
ಶುರುವಿನಲ್ಲಿ ಟ್ಯಾಂಕ್ನ ಪಶ್ಚಿಮ ಭಾಗದಲ್ಲಿನ 1,68,000 ಕ್ಯೂಬಿಕ್ ಮೀಟರ್ ಮಣ್ಣನ್ನು ಅಗೆದು ತೆಗೆದು ಅಲ್ಲಿ ನೀರನ್ನು ತುಂಬಿಕೊಳ್ಳಲು ಸಾಧ್ಯವಾಗುವಂತೆ ಮಾಡಲಾಯಿತು. ಜತೆಗೆ, ಅಂತರ್ಜಲದ ಮಟ್ಟವನ್ನು ಏರಿಸಲೆಂದು ಪೂರ್ವ ಭಾಗದಲ್ಲಿ ಮೂರು ಘಟಕಗಳನ್ನು ಸ್ಥಾಪಿಸಲಾಯಿತು. ಈಗ ನಲ್ಲಿಗುಡ್ಡ ಗ್ರಾಮ, ಪಶ್ಚಿಮದಲ್ಲಿರುವ ಶೆಟ್ಟಿಗೌಡನದೊಡ್ಡಿ ಗ್ರಾಮ ಹಾಗೂ ಬಿಡದಿ ಹೋಬಳಿಗೆ ಇದೇ ನೀರಾವರಿ ಮೂಲವಾಗಿದೆ.
ಕೆರೆಯ ಪೂರ್ವ ತೀರದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಯೋಜನೆ ಪೂರ್ಣಗೊಳಿಸಲಾಯಿತು. ಗಿಡ ನೆಟ್ಟು ಜೀವ ವ್ಯವಸ್ಥೆಯನ್ನು ಬ್ಯಾಲೆನ್ಸ್ ಮಾಡಲಾಯಿತು. ಇದರಿಂದಾಗಿ ಟ್ಯಾಂಕ್ನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಶೇ.25ರಷ್ಟು ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಇದರ ಪ್ರಭಾವ ಇನ್ನಷ್ಟು ಹೆಚ್ಚಲಿದ್ದು, ಅಂತರ್ಜಲದ ಮಟ್ಟವೂ ಹೆಚ್ಚಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಘಟಕಗಳಿಂದ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಲಿದೆ. ಇದರಿಂದಾಗಿ ಕೊಳವೆ ಬಾವಿಗಳು ಹಾಗೂ ತೆರೆದ ಬಾವಿಗಳಿಗೆ ನೀರಿನ ಹರಿವು ಹೆಚ್ಚಾಗಿ, ಅವುಗಳು ನೀರಾವರಿಗೆ ಸಾಕಷ್ಟು ನೀರನ್ನು ಒದಗಿಸುವ ಸಾಮರ್ಥ್ಯ ಹೊಂದುವಂತಾಗಿದೆ. ಈ ಅಭಿವೃದ್ಧಿ ಕಾರ್ಯವು ಸುತ್ತಮುತ್ತಲಿನ ಬನ್ನಿಕುಪ್ಪೆ, ಕೆಂಚನಕುಪ್ಪೆ, ಬಿಡದಿ ಪಂಚಾಯತ್ ವ್ಯಾಪ್ತಿಯ 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೆರವಾಗಲಿದೆ.
3R
ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ಕಂಪನಿಯು ತನ್ನ ಜಲ ನಿರ್ವಹಣೆ ಯೋಜನೆಗಳಲ್ಲಿ ಅನುಸರಿಸುತ್ತಿರುವುದು 3-R ವಿಧಾನವನ್ನು. ಈ ಮೂರು 'ಆರ್'ಗಳೆಂದರೆ,
ರೆಡ್ಯೂಸ್(ಮಿತಗೊಳಿಸು) ರೀಯೂಸ್/ರೀಸೈಕಲ್(ಮರುಬಳಕೆ) ರಿಪ್ಲೆನಿಶ್(ಮರುಭರ್ತಿ)
ನಾವು ನಿಸರ್ಗದಿಂದ ಏನನ್ನು ಪಡೆದಿದ್ದೇವೋ, ಅದನ್ನು ವಾಪಸ್ ನೀಡುವುದು ನಮ್ಮ ಕರ್ತವ್ಯ. ನಮ್ಮ ಕಂಪನಿಯು ನಲ್ಲಿಗುಡ್ಡ ಕೆರೆಯ ಸಮೀಪದಲ್ಲೇ ಇರುವುದರಿಂದ, ಅದರ ಪುನಶ್ಚೇತನ ಮಾಡುವುದು, ಆ ಮೂಲಕ ಸುತ್ತಮುತ್ತಲಿನ ಗ್ರಾಮಗಳು ಮತ್ತು ಕೃಷಿಭೂಮಿಗೆ ಸುಸ್ಥಿರ ನೀರನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ.
- ಪುನೀತ್ ವರ್ಶ್ನೇ, ಎಚ್ಸಿಸಿಬಿಪಿಎಲ್ ವಲಯ ಉಪಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


