ನಮ್ಮ ಒಡಲ ದನಿ
ಬೆಳಗ್ಗೆ ಎದ್ದರೆ ಸುಪ್ರಭಾತ ಕೇಳಿಸುತ್ತದೆ. ಪಕ್ಕದ ಮನೆಯ ಮಗುವಿನ ಅಳು ಕೇಳಿಸುತ್ತದೆ. ಬೀದಿಯಲ್ಲಿ ಹಾಲಿನವನ ಧ್ವನಿ, ಪೇಪರ್ನವನ ಕೂಗಾಟ ಕೇಳಿಸುತ್ತದೆ...

ಬೆಳಗ್ಗೆ ಎದ್ದರೆ ಸುಪ್ರಭಾತ ಕೇಳಿಸುತ್ತದೆ. ಪಕ್ಕದ ಮನೆಯ ಮಗುವಿನ ಅಳು ಕೇಳಿಸುತ್ತದೆ. ಬೀದಿಯಲ್ಲಿ ಹಾಲಿನವನ ಧ್ವನಿ, ಪೇಪರ್ನವನ ಕೂಗಾಟ ಕೇಳಿಸುತ್ತದೆ. ಮನೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಕೆಲಸಕ್ಕೆ ಹೊರಡುತ್ತೇವೆ. ಬಸ್ಸಿನಲ್ಲಿ ಅವರಿವರು ಮಾತಾಡುವುದನ್ನು ಕೇಳಿಸಿಕೊಳ್ಳುತ್ತೇವೆ. ಅನಗತ್ಯವಾಗಿದ್ದರೂ ನಾವೂ ಮಾತಾಡುತ್ತೇವೆ. ಕೆಲಸದ ಸ್ಥಳದಲ್ಲಂತೂ ಸರಿಯೇ, ಸಹೋದ್ಯೋಗಿಗಳು ಮಾತಾಡುವುದನ್ನು ಇಷ್ಟವಿಲ್ಲದಿದ್ದರೂ ಕೇಳಿಸಿಕೊಳ್ಳಬೇಕಾಗುತ್ತದೆ. ಸಂಜೆ ಮಾರ್ಕೆಟ್ನಲ್ಲಿ, ಹೋಟೆಲ್ನಲ್ಲಿ ಯಾರ್ಯಾರ ಮಾತನ್ನೋ ಕೇಳಿಸಿಕೊಂಡು ಪ್ರತಿಕ್ರಿಯಿಸಬೇಕಾಗುತ್ತದೆ. ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗುತ್ತೇವೆ. ದಿನವಿಡೀ ಎಲ್ಲರ ಮಾತನ್ನೂ ಕೇಳುತ್ತೀಯಲ್ಲ ಮನಸೇ, ನಿನ್ನ ಮಾತನ್ನು ನೀನು ಯಾವತ್ತಾದರೂ ಕೇಳಿಸಿಕೊಂಡಿದ್ದೀಯಾ ಅಂತ ಕೇಳುತ್ತಾನೆ ಒಬ್ಬ ಕವಿ. ನಿಜ ಅದು. ಎಲ್ಲರ ಮಾತನ್ನೂ ಕೇಳಿಸಿಕೊಳ್ಳುವ ನಮಗೆ ನಮ್ಮ ಅಂತರಂಗಕ್ಕೆ ಕಿವಿಯಾಗಲು ಪುರುಸೊತ್ತಿರುವುದಿಲ್ಲ. ಒಮ್ಮೆ ಕೇಳಿಸಿಕೊಂಡು ನೋಡಿ. ಅದು ಎಂತೆಂಥ ಘಟನೆಗಳಿಗೆ ಸಾಕ್ಷಿಯಾಗಿರಬಹುದು? ಅದು ಎಂತೆಂಥ ಗುಟ್ಟುಗಳನ್ನು ಹೊತ್ತಿರಬಹುದು? ಅದು ನೀವು ಇದುವರೆಗೂ ಅದುಮಿಟ್ಟ ಎಂತೆಂಥ ಆಸೆ ಆಕಾಂಕ್ಷೆಗಳ ಮೂಟೆಯಾಗಿರಬಹುದು?
ಆದರೆ ಎಚ್ಚರ, ಅದು ನೀವು ಎಂದೆಂದೂ ಕೇಳಲೂ ಇಷ್ಟಪಡದ ಕೆಲವು ಸಂಗತಿಗಳನ್ನೂ ನಿಮ್ಮ ಕಿವಿಯಲ್ಲಿ ಪಿಸುಗುಡಬಹುದು. ನಿಮ್ಮದೇ ಮಾತನ್ನು ನೀವು ಕೇಳಿಸಿಕೊಳ್ಳುವ ಮಾನಸಿಕ ಸ್ಥಿತಿಯೇ ಬೇರೆ. ಅದು ಹುಚ್ಚಲ್ಲ, ಬೆಪ್ಪಲ್ಲ. ಅದು ಶುದ್ಧ ಆಧ್ಯಾತ್ಮಿಕ ಸ್ಥಿತಿ. ನಿಜವಾಗಿ ನಮ್ಮ ಅಂತರಂಗದ ದನಿಗಳನ್ನು ಕೇಳಿಸಿಕೊಂಡು ಅದರಂತೆ ನಡೆಯಲು ಶುರು ಮಾಡಿದಾಗ ನಾವು ಸಹಜ ಮಾನವರಾಗುತ್ತೇವೆ. ನಮ್ಮ ನಡೆನುಡಿಗಳು ಸಹಜವೆನಿಸುತ್ತವೆ. ಅಲ್ಲಿ ಇತರರ ಅನುಕರಣೆಯಾಗಲೀ, ತಾನು ಇನ್ನೊಬ್ಬರಂತಾಗಬೇಕು ಎಂಬ ಹಪಹಪಿಯಾಗಲೀ ಇಲ್ಲ. ಅಲ್ಲಿರೋದು ಶುದ್ಧ ಮಾನವೀಯ ಅಂತಃಕರಣ, ಸಹಜ ಜೀವಂತಿಕೆ, ಪ್ರೀತಿಯುಕ್ತ ನಡವಳಿಕೆಗಳು ಮಾತ್ರ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


