ಸತ್ಯದೂತ ಸ್ವಾಮಿ ವಿವೇಕಾನಂದ!
'ನಾನು ಸತ್ಯವನ್ನು ಪ್ರತಿನಿಧಿಸುತ್ತೇನೆ. ಸತ್ಯವೆಂದಿಗೂ ಸುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇಡೀ ಜಗತ್ತೇ ನನಗೆ ವಿರುದ್ಧವಾದರೂ ಕೊನೆಯಲ್ಲಿ ಸತ್ಯ ಗೆಲ್ಲಲೇಬೇಕು. ಸತ್ಯ ಅನಂತಶಕ್ತಿಯುಳ್ಳ ಸುಡುವ ಪದಾರ್ಥವಿದ್ದಂತೆ. ಅದು ತಾನೆಲ್ಲೇ ಬೀಳಲಿ ಸುಡುತ್ತದೆ. ಮೃದು ಪದಾರ್ಥಗಳನ್ನು ಬೇಗನೆ ಸುಟ್ಟರೆ, ಗಟ್ಟಿ ಪದಾರ್ಥಗಳನ್ನು ನಿಧಾನವಾಗಿ ಸುಡುತ್ತದೆ! ಆದರದು ಸುಟ್ಟೇ ಸುಡುತ್ತದೆ!'
ಇಂಗ್ಲೆಂಡ್ನಲ್ಲಿ ತಮ್ಮ ಕಾರ್ಯೋದ್ದೇಶ ಯಶಸ್ವಿಗೊಂಡಿದ್ದರಿಂದ ಹೊಸ ಉತ್ಸಾಹದಿಂದ ನ್ಯೂಯಾರ್ಕ್ಗೆ ಹಿಂದಿರುಗಿದ ಸ್ವಾಮೀಜಿ ಅಲ್ಲಿ ಎರಡು ಬೃಹತ್ ಕೋಣೆಗಳನ್ನು ಬಾಡಿಗೆ ತೆಗೆದುಕೊಂಡು ತರಗತಿಗಳನ್ನು ಆರಂಭಿಸಿದರು. ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮತ್ತು ಜ್ಞಾನಯೋಗಗಳನ್ನು ಕುರಿತು ತರಗತಿಗಳನ್ನು ಪ್ರಾರಂಭಿಸಿದರು. ಶಿಷ್ಯರು ಶ್ರದ್ಧಾವಂತರಾದರೆ ಗುರುಗಳು ಅವಿಶ್ರಾಂತರಾಗುತ್ತಾರೆ! ದಿನಕ್ಕೆ ಮೂರು ಗಂಟೆಗಳ ಕಾಲ ತರಗತಿ ನೀಡುವುದು, ಸಾರ್ವಜನಿಕ ಭಾಷಣ ಮಾಡುವುದು, ಪತಂಜಲಿ ಮಹರ್ಷಿಗಳ ಯೋಗಸೂತ್ರಗಳ ಮೇಲೆ ವ್ಯಾಖ್ಯಾನ ಬರೆಯುವುದು.. ಹೀಗೆ ಬಿಡುವಿಲ್ಲದ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಅಮೆರಿಕದಲ್ಲಿದ್ದುಕೊಂಡೇ ಸ್ವಾಮೀಜಿ ಭಾರತದಲ್ಲಿ ಸಾಧಿಸಿದ ಅತಿಮುಖ್ಯ ಕಾರ್ಯಗಳಲ್ಲಿ ಮೊದಲನೆಯದು 'ಬ್ರಹ್ಮವಾದಿನ್' ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿದುದು. ಅದಕ್ಕಾಗಿ ಹಣವನ್ನೂ ಕಳುಹಿಸಿದರು. ಅದರ ಬೆಳವಣಿಗೆಗಾಗಿ ಸಲಹೆ ಸೂಚನೆಗಳನ್ನು ನೀಡುತ್ತಾ ಪತ್ರಿಕೆಯ ಶ್ರೇಯಸ್ಸಿಗಾಗಿ ಶ್ರಮಿಸಿದರು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

