'ನಾಟಕೋತ್ಸವ'
ರಂಗಾಸಕ್ತರು, ರಂಗಪ್ರೇಮಿಗಳಿಗಾಗಿ ರಂಗಶಂಕರ ದಿನಕ್ಕೊಂದು ನಾಟಕ ಪ್ರದರ್ಶನವನ್ನು ಈ ಹಿಂದಿನಂತೆ ಮುಂದುವರಿಸುತ್ತಿದೆ. ಅಕ್ಟೋಬರ್ ತಿಂಗಳಿಡೀ ಪ್ರತಿದಿನ ನಾಟಕ ಪ್ರದರ್ಶನಗೊಳ್ಳಲಿದೆ.
ಅಕ್ಟೋಬರ್ 3, 2013ರಂದು ಗಿರೀಶ್ ಕಾರ್ನಾಡ್ ಅವರ ರಚನೆ, ಕೆ.ಎಂ. ಚೈತನ್ಯ ಅವರ ನಿರ್ದೇಶನದ 'ಭಿಕರೆ ಬಿಂಬ್' ರಂಗಶಂಕರ ತಂಡದಿಂದ ಪ್ರದರ್ಶನಗೊಳ್ಳಲಿದ್ದು, 70 ನಿಮಿಷಗಳು. 'ಭಿಕರೆ ಬಿಂಬ್' ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಪದ್ಮಾವತಿ ರಾವ್. ಅಕ್ಟೋಬರ್ 4, 5, 6ರಂದು 'ಪಿಯಾ ಬೆಹ್ರೂಪಿಯಾ' (ಟ್ವೆಲ್ತ್ ನೈಟ್) ಹಿಂದಿ ನಾಟಕವನ್ನು 'ದಿ ಕಂಪನಿ ಥಿಯೇಟರ್, ಮುಂಬೈ' ತಂಡ ಪ್ರದರ್ಶಿಸಲಿದೆ. ನಾಟಕದ ನಿರ್ದೇಶನ ಅಮಿತೋಷ್ ನಾಗ್ಪಾಲ್,ಅತುಲ್ ಕುಮಾರ್ ಅವರದು. ನಾಟಕ 130 ನಿಮಿಷಗಳದು. ಅಕ್ಟೋಬರ್ 8 ಮತ್ತು 9ರಂದು ಅಶ್ವಿನಿಕುಮಾರ್ ಚಾಕ್ರೆ ರಚಿಸಿ, ನಿರ್ದೇಶಿಸಿದ 60 ನಿಮಿಷಗಳ ಇಂಗ್ಲಿಷ್-ಹಿಂದಿ ನಾಟಕ 'ರೊಕಿ ಕಾ ಇನ್ಸಾಫ್' ಅನ್ನು ಬೆಂಗಳೂರಿನ ಮಶಾಲ್ ಥಿಯೇಟರ್ ತಂಡ ಪ್ರದರ್ಶಿಸಲಿದೆ. ಅಕ್ಟೋಬರ್ 10ರಂದು ಪ್ರಸನ್ನ ಅವರು ರಚಿಸಿದ 'ತದ್ರೂಪಿ' ಕನ್ನಡ ನಾಟಕವನ್ನು ನಿರ್ದೇಶಿಸಿದವರು ಜೊಸೆಫ್. 90 ನಿಮಿಷಗಳ ಈ ನಾಟಕವನ್ನು ಬೆಂಗಳೂರಿನ ಸಂಚಯ ತಂಡ ಅಭಿನಯಿಸಲಿದೆ. ಈ ಎಲ್ಲ ನಾಟಕಗಳು ಪ್ರದರ್ಶನಗೊಳ್ಳುವ ಸ್ಥಳ, ರಂಗಶಂಕರ, ಸಮಯ 3.30 ಹೆಚ್ಚಿನ ಮಾಹಿತಿಗೆ 080-26494655/56 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

