ಬೈಟುಕಾಫಿ

ಲಾವಂಚ

Published On :

ಸುಗಂಧಿತ ತೈಲ ಸಸ್ಯಗಳಲ್ಲಿ ಲಾವಂಚ ಒಂದು ಪ್ರಮುಖ ಬೆಳೆ. ಇದರಲ್ಲಿ ಸುಗಂಧ ತೈಲವು ಬೇರಿನ ಭಾಗದಲ್ಲಿರುತ್ತದೆ. ಪೊದೆಯಂತೆ ಒತ್ತಾಗಿ ಬೆಳೆಯುವ ಈ ಬಹುವಾರ್ಷಿಕ ಬೆಳೆಗೆ 'ವೆಟಿವರ್ ಹುಲ್ಲು' ಎಂದು ಕರೆಯುತ್ತಾರೆ.

  • ಇದರ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಭಟ್ಟಿ ಇಳಿಸಿ ತೈಲ ತೆಗೆಯುತ್ತಾರೆ. ಭಾರತದಲ್ಲಿ ಈ ಹುಲ್ಲಿಗೆ ಖಸ್ ಎಂದೂ ಕರೆಯುತ್ತಾರೆ. ಅಂದರೆ ಸುವಾಸಿತ ಬೇರು ಎಂದರ್ಥ. ನೀರಿನಲ್ಲಿ ನೆನೆಸಿ ತೆಗೆದ ಬೇರು ಸುವಾಸಿತತಂಪು ಹವೆ ನೀಡುತ್ತದೆ.
  • ಹಿಂದಿನವರು ರೇಷ್ಮೆ ಸೀರೆ, ಮುಗುಟಗಳು ಹಾಳಾಗದಂತೆ, ಜಿರಳೆ-ತಿಗಣೆಗಳು ಕಪಾಟಿನ ಒಳಹೋಗದಂತೆ ಕಪಾಟು, ಟ್ರಂಕುಗಳಲ್ಲಿ ಲಾವಂಚದ ಬೇರುಗಳನ್ನು ಹಿಡಿಕಟ್ಟಿ ಹಾಕಿಡುತ್ತಿದ್ದರು.
  • ಲಾವಂಚವು ಔಷಧೀಯ ಗುಣಗಳ ಆಗರವೂ ಹೌದು. ಇದರ ತೈಲದ ಲೇಪನ ಮೈಕೈ ನೋವು ಶಮನಗೊಳಿಸುತ್ತದೆ. ಬೇರನ್ನು ನೀರಿನಲ್ಲಿ ಕುದಿಸಿ, ಸೋಸಿ ಕುಡಿದರೆ ವಾತ, ಹೊಟ್ಟೆಶೂಲೆ, ಜಂತು ಹುಳುಗಳಿಂದ ಮುಕ್ತಿ.
  • ಸಾಮಾನ್ಯವಾಗಿ ಕೆರೆ, ನದಿ ತೀರಗಳಲ್ಲಿ, ಹಣ್ಣ-ಕೊಳ್ಳಗಳ ಬುಡದಲ್ಲಿ ಸಹಜವಾಗಿ ಬೆಳೆವ ಲಾವಂಚದ ಬೇರುಗಳು 2ರಿಂದ 3 ಮೀಟರ್‌ಗಳಷ್ಟು ಆಳಕ್ಕೆ ಇಳಿಯುವುದರಿಂದ ಮಣ್ಣಿನ ಸವಕಳಿ ತಡೆಯುತ್ತವೆ.
  • ಲಾವಂಚ ನೆಟ್ಟ 3 - 4 ತಿಂಗಳಲ್ಲೇ ಬೃಹತ್ ಪೊದೆಯಾಗಿ ಬೆಳೆಯುತ್ತದೆ. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲ ಮರುಪೂರಣಕ್ಕೆ ಲಾವಂಚವನ್ನು ಬಳಸುತ್ತಾರೆ. ಕಲುಷಿತ ನೀರನ್ನು ಶುದ್ಧಗೊಳಿಸುವ ಗುಣ ಇದಕ್ಕಿದೆ.
  • ಲಾವಂಚ ಬಹುವಾರ್ಷಿಕ ಬೆಳೆ. ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು 2ರಿಂದ 3 ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ನಾಟಿ ಮಾಡಿದ 10 ತಿಂಗಳಿಗೆ ಕೊಯ್ಲಿಗೆ ಬರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.