ಕಂಟ್ರೋಲ್ ರೂಂ
ಸಾಮಾನ್ಯವಾಗಿ ಅಪರಾಧ ನಡೆದ ತಕ್ಷಣ ಜನರಿಗೆ ಪೊಲೀಸ್ ಸಿಬ್ಬಂದಿ ನೆನಪಾಗುತ್ತಾರೆ. ಆದರೆ, ಆ ಘಟನೆ ಬಗ್ಗೆ ಯಾರಿಗೆ ತಿಳಿಸಬೇಕು ಎಂಬ ಮಾಹಿತಿ ಬಗ್ಗೆ ಜನರಲ್ಲಿ ಅರಿವಿರುವುದಿಲ್ಲ. ಅಲ್ಲದೆ ಪೊಲೀಸರಿಗೆ ತಿಳಿಸಲು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಸಹ ತಿಳಿದಿರುವುದಿಲ್ಲ.
ಅಂತಹ ಸಮಯದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಕಂಟ್ರೋಲ್ ರೂಂನ ನಂಬರ್ ಇದ್ದರೆ ಜನರು ಪರದಾಡುವ ಪ್ರಮೇಯವೇ ಬರುವುದಿಲ್ಲ.
ನೀವು ಯಾವುದೇ ಸ್ಥಳದಲ್ಲಿದ್ದರೂ ಅಂದರೆ ಮನೆ, ಕಚೇರಿ, ರಸ್ತೆ, ಮಾರುಕಟ್ಟೆಯಂತಹ ಪ್ರದೇಶದಲ್ಲಿದ್ದರೂ ಯಾವುದೇ ಅಪರಾಧ/ಅಪಘಾತ ನಡೆದ ತಕ್ಷಣ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದರೆ ನೀವು ಮಾಹಿತಿ ನೀಡಬಹುದು. ನೀವು 100ಕ್ಕೆ ಕರೆ ಮಾಡಿದರೆ ಬೆಂಗಳೂರಿನಲ್ಲಿರುವ ನಿಯಂತ್ರಣಾ ಕೊಠಡಿಗೆ ಕರೆ ಬರುತ್ತದೆ. ಒಂದು ವೇಳೆ ಅಲ್ಲಿನ ಪಿನ್ಕೋಡ್ ಹಾಕಿ ನಂತರ 100ಕ್ಕೆ ಕರೆ ಮಾಡಿದರೆ ಸಂಬಂಧಪಟ್ಟ ಜಿಲ್ಲೆಯ ನಿಯಂತ್ರಣಾ ಕೊಠಡಿಗೆ ಕರೆ ಹೋಗುತ್ತದೆ.
ಇಲ್ಲವಾದಲ್ಲಿ ಬೆಂಗಳೂರಿಗೆ ಬರುವ ಕರೆಯನ್ನು ಇಲ್ಲಿನ ಸಿಬ್ಬಂದಿ ಸಂಬಂಧಪಟ್ಟ ವಲಯ(ಝೋನ್)ದ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡುತ್ತಾರೆ. ಅಲ್ಲಿನ ಸಿಬ್ಬಂದಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ಸೂಚಿಸುತ್ತಾರೆ.
ನಿಯಂತ್ರಣಾ ಕೊಠಡಿ ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತದೆ. ಅಲ್ಲಿ ಪ್ರತಿನಿತ್ಯ ಒಂದು ಪಾಳಿಯಲ್ಲಿ 10ರಿಂದ 15 ಮಂದಿ ಕೆಲಸ ನಿರ್ವಹಿಸುತ್ತಾರೆ. ನಿಯಂತ್ರಣಾ ಕೊಠಡಿಯಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸ ನಿರ್ವಹಿಸುತ್ತಾರೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

