ಪಾಲಕ್ ಸೊಪ್ಪು
ಪಾಲಕ್ ಅಮರಾಂಥೇಸಿಯೇ ಕುಟುಂಬಕ್ಕೆ ಸೇರಿದ ತಿನ್ನಲರ್ಹವಾದ ಹೂಬಿಡುವ ಸಸ್ಯ. ಅದು ಮಧ್ಯ ಏಷ್ಯಾ ಹಾಗೂ ದಕ್ಷಿಣಪಶ್ಚಿಮ ಏಷ್ಯಾಕ್ಕೆ ಸ್ಥಳೀಯ ಸೊಪ್ಪಿನ ತರ ಕಾರಿಯಾಗಿದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್, ಶರ್ಕರ ಪಿಷ್ಟ, ಕಬ್ಬಿಣಾಂಶ, ಜೀವಸತ್ವಗಳು ಹೇರಳವಾಗಿವೆ. ಆರೋಗ್ಯ ಮತ್ತು ರುಚಿ ವಿಷಯದಲ್ಲಿ ಪಾಲಕ್ ಯಾವತ್ತಿಗೂ ಚೆನ್ನ. ಮನೆತಿಂಡಿಗಳಲ್ಲಿ ಪಾಲಕ್ಗೂ ಸ್ವಲ್ಪ ಸ್ಥಳ ಮೀಸಲಿಡಿ.
ಇದರ ತವರೂರಿನ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಲವರ ಅಭಿಪ್ರಾಯದಲ್ಲಿ ಇದರ ತವರೂರು ಭಾರತವಾದರೆ ಮತ್ತೆ ಕೆಲವರ ಅಭಿಪ್ರಾಯದಲ್ಲಿ ಚೀನಾ. ಕ್ರಿ.ಶ. 647ಕ್ಕೂ ಮೊದಲೇ ಚೀನಾಕ್ಕೆ ಇದರ ಬಗ್ಗೆ ತಿಳಿದಿತ್ತು.
ಇದರ ಎಲೆಗಳು ರಸವತ್ತಾಗಿ, ಕಾಂಡಗಳು ಮೃದುವಾಗಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಇದಕ್ಕೆ ಚಳಿ ಹವಾಗುಣವಿದ್ದರೆ ಉತ್ತಮ. ಹಿಮ ಸುರಿದರೂ ಈ ಬೆಳೆಗೆ ಹಾನಿಯಾಗದು. ಸ್ವಲ್ಪಮಟ್ಟಿನ ಬಿಸಿಲನ್ನು ಸಹಿಸಬಲ್ಲದು.
ಪಾಲಕ್ 30 ಸೆಂ.ಮೀ.ನಷ್ಟು ಎತ್ತರಕ್ಕೆ ಬೆಳೆಯುವ ವಾರ್ಷಿಕ ಸಸ್ಯ. ಬೀಟರೂಟ್ ಗುಂಪಿಗೆ ಸೇರಿದ ಪಾಲಕ್ ಪೌಷ್ಟಿಕ ಸೊಪ್ಪು. ಬಹುಬೇಗ ಕೊಯ್ಲಿಗೆ ಬರುತ್ತದೆ. ಬೆಳೆ ಅವಧಿಯಲ್ಲಿ 3-4 ಕೊಯ್ಲುಗಳಿರುತ್ತವೆ.
ಕರ್ನಾಟಕದಲ್ಲಿ ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು. ಆದರೆ ಸೆಪ್ಟೆಂಬರ್-ನವೆಂಬರ್ ಅತ್ಯುತ್ತಮ. ನೀರು ಬಸಿಯುವ ಯಾವುದೇ ಮಣ್ಣಿನ ಭೂಮಿ ಉತ್ತಮ. ಮಣ್ಣಿನ ರಸಸಾರ6ರಿಂದ 7ರಷ್ಟಿದ್ದರೆ ಒಳ್ಳೆಯದು.
ಬಿತ್ತನೆಯಾದ 30-40 ದಿನಗಳಲ್ಲಿ ಮೊದಲ ಕೊಯ್ಲು ಸಾಧ್ಯ. ಮೂರು ವಾರಗಳಿಗೊಮ್ಮೆ ಸೊಪ್ಪನ್ನು ಕೊಯ್ಲು ಮಾಡಬಹುದು. ಹೆಕ್ಟೇರಿಗೆ ಸುಮಾರು 10 ಟನ್ನುಗಳಷ್ಟು ಸೊಪ್ಪು ಬೆಳೆಯಲು ಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

