ಬೈಟುಕಾಫಿ

ಭವಿಷ್ಯದ ಸಿಡಿಲು ಮಿಂಚಿದ್ದು ಮದ್ರಾಸ್‌ನಲ್ಲಿ!

Published On :

1893, ಇದು ಸ್ವಾಮಿ ವಿವೇಕಾನಂದರ ಜೀವನದ ಮಹತ್ವದ ಸಂವತ್ಸರ. ಅವರು ವಿಶ್ವವಿಜೇತರಾದುದು, ವಿಶ್ವವಿಖ್ಯಾತರಾದುದು ಈ ವರ್ಷದಲ್ಲೇ. ಜನವರಿಯಲ್ಲಿ ಮದ್ರಾಸಿಗೆ ಬಂದಾಗ ಸ್ವಾಮೀಜಿಯ ವ್ಯಕ್ತಿತ್ವ ಅಲ್ಲಿನವರನ್ನು ಸೆಳೆಯಿತು. ಅವರ ಕಂಚಿನ ಕಂಠ, ನಡೆನುಡಿಯಲ್ಲಿ ಸೂಸುತ್ತಿದ್ದ ಆತ್ಮಶಕ್ತಿ, ಅಸಾಧಾರಣ ಬುದ್ಧಿಶಕ್ತಿ, ಪ್ರಕಾಂಡ ಪಾಂಡಿತ್ಯ, ಮೋಡಿಗೊಳಿಸುವ ವಾಗ್ಝರಿ, ನಗು ಚಿಮ್ಮಿಸುವ ಹಾಸ್ಯ, ಮಧುರ ಸಂಗೀತ ಅವು ಜನರನ್ನು ವಿಶೇಷವಾಗಿ ಆಕರ್ಷಿಸಿದವು.
ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮದ್ರಾಸಿನಲ್ಲಿ ಸಮಾಜ ಸುಧಾರಣಾ ಚಳವಳಿ ನಡೆಸುತ್ತಿದ್ದ ಯುವಕರನ್ನು ಕಂಡು ಸ್ವಾಮೀಜಿ 'ನೀವು ಪಾಶ್ಚಾತ್ಯ ಆದರ್ಶಗಳನ್ನು ಹಿಂಬಾಲಿಸುವ ಮೊದಲು ಅವುಗಳನ್ನು ಚೆನ್ನಾಗಿ ಪರಿಶೀಲಿಸಿ, ವಿಮರ್ಶಿಸಿ ನೋಡಬೇಕು. ಅವರ ವಿಲಾಸಪೂರ್ಣ ಸಂಸ್ಕೃತಿ ನಮ್ಮ ಸಮಾಜದೊಳಗೆ ಸೇರದಂತೆ ಎಚ್ಚರವಹಿಸಬೇಕು. ಸುಧಾರಣೆ ನಮ್ಮ ರಾಷ್ಟ್ರದ ಆದರ್ಶ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಯಾವುದೇ ಬಗೆಯ ಸುಧಾರಣೆ ರಚನಾತ್ಮಕವಾಗಿರಬೇಕಲ್ಲದೆ ವಿಧ್ವಂಸಕವಾಗಿರಬೇರದು' ಎಂದು ಎಚ್ಚರಿಸಿದರು.
ವಿವೇಕಾನಂದರನ್ನು ಸರಿಯಾಗಿ ತಿಳಿದುಕೊಂಡವರಲ್ಲಿ ಮದ್ರಾಸಿಗರೇ ಮೊದಲಿಗರು. ಅವರೆಲ್ಲ ಸ್ವಾಮೀಜಿಗಳ ಅನುಯಾಯಿಗಳಾದರು. ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮೀಜಿ ಹೋಗಲು ಸಾಧ್ಯವಾದದ್ದು ಇಲ್ಲಿನ ಯುವಕರ ಪ್ರೋತ್ಸಾಹ ಹಾಗೂ ನೆರವಿನಿಂದ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.