ತುಂಬು ಚಂದಿರ

ರಾಜರು ತಿಕ್ಕಲರು. ಅವರಿಗೆ ಯಾವ್ಯಾವುದೋ ಸಮಯದಲ್ಲಿ ಯಾವುದೋ ಬಯಕೆಯಾಗುವುದು. ಹೀಗೇ ಒಬ್ಬ ರಾಜ ತನ್ನ ಆಸ್ಥಾನಸಭೆಯಲ್ಲಿ ಕೇಳಿದ. 'ಅಮವಾಸ್ಯೆಯ ರಾತ್ರಿ. ತುಂಬು ಚಂದಿರನನ್ನು ನೋಡಬೇಕೆಂದು ಆಸೆಯಾಗಿದೆ ಎಂದಿಟ್ಟುಕೊಳ್ಳಿ. ಹೇಗೆ?'
ಇತರರ ಸಮಸ್ಯೆ, ಕವಿಗಳಿಗೆ ಸಮಸ್ಯೆಯೇ ಅಲ್ಲ. ಅವರು ಅಮವಾಸ್ಯೆಯಲ್ಲೂ ತುಂಬಿದ ಚಂದ್ರನನ್ನು ಕಾಣಿಸಬಲ್ಲರು. ಆಸ್ಥಾನ ಕವಿ ಉತ್ತರಿಸಿದ:
ಪ್ರತಿ ಕ್ಷಣಸಮುಲ್ಲಸನ್ನವಕಲಾ ಕಲಾಪಾನ್ವಿತ
ಕ್ಷಪಾಕರವಿಲೋಕನೇ ಯದಿ ತವಾಸ್ತಿಕೌತೂಹಲಮ್
ವಿಲೋಕಯ ತದಾ ಸಖೇ ಸುರತ ಸಂಗರಾಲೋಕನ
ಪ್ರಹೃಷ್ಟದಯಿತಾಮುಖಂ ನಿಬಿಡಕಂಚುಕೋತ್ತಾರಣೇ
ಅಮವಾಸ್ಯೆಯೆಂದೇನು? ಪ್ರತಿದಿನವೂ ಚಂದ್ರನನ್ನು ನೋಡಬಹುದು. ಮತ್ತೆ, ಆಗಸದ ಚಂದ್ರನಾದರೋ ಸ್ವಲ್ಪಸ್ವಲ್ಪವೇ ತುಂಬಿಕೊಳ್ಳುತ್ತ ಹದಿನೈದು ದಿನಕ್ಕೊಮ್ಮೆ ಪೂರ್ಣವಾಗುವವನು. ಈ ವಿಧಾನದಲ್ಲಿ, ಪೂರ್ಣ ಚಂದ್ರನನ್ನು ಆವಿಷ್ಕರಿಸಿಕೊಳ್ಳಲು ಅರ್ಧ ದಿನ ಕಾಯುವ ಆಗತ್ಯವೂ ಇಲ್ಲ. ಹೇಗೆ ಗೊತ್ತೆ? ಪ್ರಣಯಕೇಳಿಯ ಸಂದರ್ಭದಲ್ಲಿ, ಉತ್ತುಂಗಸುಖದ ನಿರೀಕ್ಷೆಯಲ್ಲಿ, ಪ್ರೇಯಸಿ ಕಂಚುಕವನ್ನು ಮೆಲ್ಲಮೆಲ್ಲನೆ ಕಳಚುವಾಗ ಅವಳ ಮುಖವನ್ನು ನೋಡಿದರೆ ಸಾಕು!
ಸಾಮಾನ್ಯ ಕವಿಯಾದರೆ, ಕಂಚುಕ ಕಳಚಿದಲ್ಲೇ ನೋಡಿಬಿಡಿ- ಎರಡು ಚಂದ್ರಗಳು ಕಾಣಿಸುತ್ತವೆ ಎನ್ನುತ್ತಿದ್ದ. ಆದರೆ ಈ ಆಸ್ಥಾನ ಕವಿ ಪೋಲಿತನದಲ್ಲೂ ಗೌರವ ಕಾಯ್ದುಕೊಂಡ. ಪ್ರಿಯಕರ ನೋಡುತ್ತಿರುವುದರಿಂದ ನಾಚಿಕೆಯಿಂದ ಕೆಂಪಿಟ್ಟ ಮುಖ, ಮೋರೆಯ ಉಜ್ವಲತೆಗೆ ಕಲೆ ಮೂಡಿಸಿದ ಲಜ್ಜೆಗಳು ಚಂದ್ರನ ಸಾದೃಶ್ಯವನ್ನೇ ನೀಡುತ್ತವೆ.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


