ವೈವಿಧ್ಯಮಯ ನಾಟಕ
ರಂಗಶಂಕರದಲ್ಲಿ ಅಕ್ಟೋಬರ್ ತಿಂಗಳಿಡೀ ನಡೆಯುವ ದಿನಕ್ಕೊಂದು ನಾಟಕ ಕಾರ್ಯಕ್ರಮಕ್ಕೆ ದಿನಾಂಕ 17ರಂದು ಬಿಡುವು.
ಶುಕ್ರವಾರ, ಅಂದರೆ 18-10-13ರಂದು ಕನ್ನಡ ನಾಟಕ 'ತುಘಲಕ್' ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಸ್ಯಾಮ್ಕುಟ್ಟಿ ಪಟ್ಟೊಂಕರಿಯವರದು. ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಲಿರುವ ಈ ನಾಟಕ 120 ನಿಮಿಷಗಳ ಅವಧಿಯದು. 19ರಂದು ಶನಿವಾರ, 'ಕಲಾಭೀತಮ್' (ಅಂಜುಮಲ್ಲಿಗೆ) ಮಲಯಾಳಂ ನಾಟಕವಿದೆ. ರಚನೆ ಸ್ಯಾಮ್ ಜಾರ್ಜ್ ಅವರದು. ಅಭಿನಯ ಎಪಿಟಿ ತ್ರಿವೇಂಡ್ರಮ್ ತಂಡದವರಿಂದ.
20ರಂದು ಬೆಂಗಾಲಿ ನಾಟಕ 'ನಾಗಮಂಡಲ' ಪ್ರದರ್ಶನಗೊಳ್ಳಲಿದೆ. 120 ನಿಮಿಷಗಳ ಈ ನಾಟಕವನ್ನು ರಚಿಸಿದವರು ಅವಂತಿ ಚಕ್ರವರ್ತಿ. ನಾಟಕವನ್ನು ಅಭಿನಯಿಸಲಿದ್ದಾರೆ ಕೋಲ್ಕತ್ತಾದ ಬಲ್ಲಿಗುಂಗೆ ಸ್ವಪ್ನಾ ಸೂಚ್ನಾ ತಂಡ. 21ರಂದು ನಾಟಕದ ಬದಲು ಸಿನಿಮಾ ಪ್ರದರ್ಶನವಿದೆ. ಸಂಜೆ 7.30ಕ್ಕೆ 'ಕಾಡು' ಸಿನಿಮಾ ಶೋ.
ಅಕ್ಟೋಬರ್ 22, ಮಂಗಳವಾರದಂದು ಪ್ರದರ್ಶನಗೊಳ್ಳುವ ನಾಟಕ 'ಗಿರೀಶರಿಗೆ ನಮಸ್ಕಾರ'. ಗಿರೀಶ್ ಕಾರ್ನಾಡರ ಆಯ್ದ ನಾಟಕಗಳ ಪ್ರದರ್ಶನ. ಒಟ್ಟು ಎಂಟು ನಿರ್ದೇಶಕರು ನಾಟಕ ನಿರ್ದೇಶಿಸಿದ್ದಾರೆ. ಒಟ್ಟು ಎಂಟು ಬೇರೆ ಬೇರೆ ತಂಡಗಳು ಅಭಿನಯಿಸಲಿವೆ. ಸಮಯ ಸಂಜೆ 7.30ಕ್ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

