ಪ್ರಾಣಿ ಪ್ರೀತಿ
'ಮಾರಾಟಕ್ಕೆ ಜಾತಿನಾಯಿಯ ಏಳು ಮರಿಗಳಿವೆ' ಎಂಬ ಬೋರ್ಡ್ ನೋಡಿ ಚಿಕ್ಕ ಹುಡುಗ ನೊಬ್ಬ ಯಜಮಾನನ ಬಳಿಗೆ ಬಂದು, 'ಒಂದು ನಾಯಿಮರಿ ಬೆಲೆ ಎಷ್ಟು?' ಎಂದು ಕೇಳಿದ. ಯಜಮಾನ 'ನಿನಗೆ ಅದನ್ನು ಕೊಳ್ಳಲು ಸಾಧ್ಯವಾಗಲಾರದು. ಒಂದು ಮರಿಯ ಬೆಲೆ 2 ಸಾವಿರ' ಎಂದ. ಹುಡುಗನ ಮುಖ ಬಾಡಿತು. ಆದರೂ 'ನಾನು ಅವುಗಳನ್ನು ನೋಡಬಹುದೇ?' ಎಂದು ದೈನ್ಯದಿಂದ ಕೇಳಿದ. ಯಜಮಾನ 'ಆಯಿತು ಬಾ' ಎಂದು ಮರಿಗಳ ಹೆಸರು ಹಿಡಿದು ಕರೆದ.
ಮುದ್ದುಮುದ್ದಾಗಿದ್ದ ಆರು ಮರಿಗಳು ಹೊರಬಂದವು. ಏಳನೆಯದು ಮಾತ್ರ ಬರಲಿಲ್ಲ. ಮತ್ತೆ ಮತ್ತೆ ಕರೆದಾಗ, ಮರಿಯೊಂದು ಕುಂಟುತ್ತ, ನಿಧಾನವಾಗಿ ಬಂತು. ಹುಡುಗ ಆ ಮರಿಯನ್ನು ಅಪ್ಪಿಕೊಂಡು ಮುದ್ದಿಸಿ, ಪ್ರೀತಿಯಿಂದ ಮೈಸವರಿದ. ಯಜಮಾನ, 'ಅದೇನು? ಇಷ್ಟು ಮರಿಗಳನ್ನು ಬಿಟ್ಟು ಆ ಕುಂಟು ಮರಿಯನ್ನು ಎತ್ತಿಕೊಂಡೆ?' ಎಂದು ಕೇಳಿದ. ಹುಡುಗ ಪಾಯಿಜಾಮವನ್ನು ಮೇಲೆ ಮಾಡಿ, ತನ್ನ ಕೃತಕ ಕಾಲುಗಳನ್ನು ತೋರಿಸುತ್ತ, 'ಈ ಮರಿ ಮಾತ್ರ ನನ್ನ ನೋವನ್ನು ಅರ್ಥಮಾಡಿಕೊಳ್ಳಬಹುದು' ಎನ್ನಲು, ಯಜಮಾನನಿಗೆ ದುಃಖ ಉಕ್ಕಿಬಂದು, ಆ ಮರಿಯನ್ನು ಹುಡುಗನಿಗೆ ಪುಕ್ಕಟೆಯಾಗಿ ಕೊಟ್ಟುಬಿಟ್ಟ. ದೇವರು ನಮ್ಮ ಹೃದಯದಲ್ಲಿ ಬೇಕಾದಷ್ಟು ಪ್ರೀತಿಯನ್ನು ತುಂಬಿದ್ದಾನೆ. ಆದರೆ ಅದರ ಅರಿವೇ ಇಲ್ಲದವರಂತೆ ನಡೆದುಕೊಳ್ಳುತ್ತೇವೆ.
- ಬ್ರಹ್ಮಣಿ ಪಿ. ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

