ಬೈಟುಕಾಫಿ

ಎಬ್ಬಿಸಬೇಡ

ಎಬ್ಬಿಸಬೇಡ
Published On :

ಕಾಳಿದಾಸನ 'ಮೇಘದೂತ' ಒಂದು ಅಮರ ಕಾವ್ಯ. ವಿರಹವೇದನೆಗೆ ಹೊಸ ಭಾಷ್ಯವನ್ನೇ ಬರೆದ ಕೃತಿ. ಶಪಿತ ಯಕ್ಷನೊಬ್ಬ ತನ್ನ ಊರಿನಿಂದ ದೂರದ ರಾಮಗಿರಿಯಲ್ಲಿ ವರ್ಷಕಾಲ ಕಳೆಯುತ್ತಿದ್ದಾನೆ. ಶ್ರಾವಣ ಬಂದಿದೆ. ಮನೆಯಲ್ಲಿರುವ ಪ್ರಿಯಪತ್ನಿಯ ನೆನಪಾಗಿ ವಿರಹ ಉಕ್ಕುತ್ತಿದೆ. ಗಿರಿಯ ಮೇಲೆ ಹಾದುಹೋಗುವ ಮೇಘವನ್ನು ಕಂಡು, ಅದು ಅಲಕಾವತಿಗೇ ಹೋಗುತ್ತಿದೆ ಎಂದು ಭಾವಿಸಿ, ಅದರ ಮೂಲಕ ಪತ್ನಿಗೆ ಸಂದೇಶ ಕಳುಹಿಸುತ್ತಿದ್ದಾನೆ.

ತಸ್ಮಿನ್ಕಾಲೇ ಜಲದಿ ಯದಿ ಸಾ ಲಬ್ಧ ನಿದ್ರಾಸುಖಾ ಸ್ಯಾ
ದನ್ವಾಸ್ಯೈನಾಂ ಸ್ತನಿತವಿಮುಖೋ ಯಾಮಮಾತ್ರಂ ಸಹಸ್ವ
ಮಾ ಭೂದಸ್ಯಾಃ ಪ್ರಣಯಿನಿ ಮಯಿ ಸ್ವಪ್ನಲಬ್ಧೇಕಥಂಚಿ
ತ್ಸದ್ಯಃ ಕಂಠಚ್ಯುತಭುಜಲತಾಗ್ರಂಥಿಗಾಢೋಪಗೂಢಮ್


'ಪ್ರಿಯ ಮೇಘರಾಜನೆ, ನೀನು ಅಲ್ಲಿಗೆ ಹೋದ ಹೊತ್ತಿನಲ್ಲಿ ರಾತ್ರಿಯಾಗಿದ್ದರೆ ಆಕೆ ನಿದ್ದೆ ಹೋಗಿದ್ದಾಳು. ಆಗ ನನ್ನ ಸಂದೇಶವನ್ನು ತಲುಪಿಸಲಾದರೂ, ಗುಡುಗು ಮೊರೆದು ಆಕೆಯನ್ನು ಎಚ್ಚರಿಸಬೇಡ. ಯಾಕೆಂದರೆ ಆ ನಿದ್ದೆಯಲ್ಲಿ ಮೂಡುವ ಕನಸಿಲ್ಲಾದರೂ ಆಕೆ ನನ್ನನ್ನು ಸೇರಿ ನನ್ನ ಕೊರಳನ್ನು ತಬ್ಬಿಕೊಂಡಿರಬಹುದು. ನಿನ್ನ ಘರ್ಜನೆಯಿಂದ ಆಕೆಯನ್ನು ಎಚ್ಚರಿಸಿ, ನಾವು ಕನಸಿನಲ್ಲಿ ಸೇರುವುದನ್ನಾದರೂ ತಪ್ಪಿಸಬೇಡ.'
ಕನಸಿನಲ್ಲಿ ಮೂಡುವ ಶೃಂಗಾರ ಲೋಕವನ್ನೂ ಕಂಪಿಸುವಂತೆ ಮಾಡಲಿಚ್ಛಿಸದ ವ್ಯಕ್ತಿ ಈ ಯಕ್ಷ. ವಿರಹಿಯ ಆರ್ತ ಮನಸಿನಲ್ಲಿ ಮೂಡುವ ಸುಕೋಮಲ ಭಾವವನ್ನು ಆಷ್ಟೇ ಸುಕೋಮಲವಾಗಿ ಪದಗಳಲ್ಲಿ ಮೂಡಿಸಿದ್ದಾನೆ ಕಾಳಿದಾಸ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.