ಬೈಟುಕಾಫಿ

ಗುಹೆಗಳ ರಚನೆ

Published On :

ಶಿಲಾಯುಗದಲ್ಲಿ ಚಳಿ ಮಳೆಗಳಿಂದ ರಕ್ಷಿಸಿಕೊಳ್ಳಲು ಮಾನವ ಗುಹೆಗಳಲ್ಲಿ ವಾಸಿಸುತ್ತಿದ್ದ. ಪುರಾತನ ಕಾಲದಲ್ಲಿ ಜನರಿಗೆ ಗುಹೆಗಳ ಬಗ್ಗೆ ವಿಚಿತ್ರ ನಂಬಿಕೆಗಳಿದ್ದವು. ಬೆಟ್ಟವೊಂದರಲ್ಲಿ ಉಂಟಾಗುವ ಆಳವಾದ ಕಂದರವನ್ನೂ ಗುಹೆಯೆಂದು ಕರೆಯುತ್ತೇವೆ. ಗುಹೆಗಳು ಅನೇಕ ವಿಧಾನಗಳಲ್ಲಿ ರಚಿತವಾಗುತ್ತವೆ. ಸಮುದ್ರದ ಅಲೆಗಳು ಹತ್ತಿರದ ಬೆಟ್ಟಗಳಿಗೆ ಅಪ್ಪಳಿಸಿದಾಗ ಬಂಡೆಗಳ ನಡುವಿನ ಮೃದುವಾದ ಕಲ್ಲುಗಳನ್ನು ಕೊಚ್ಚಿಕೊಂಡು ಹೋಗುತ್ತವೆ. ಸಾವಿರಾರು ವರ್ಷಗಳ ಕಾಲ ಇದೇ ತರಹದ ಕ್ರಿಯೆ ನಡೆದುಬಂದು ಬೆಟ್ಟದೊಳಗೆ ದೊಡ್ಡ ದೊಡ್ಡ ಕಂದರಗಳು ಏರ್ಪಡುತ್ತಾ ಬರುತ್ತವೆ. ಅಲ್ಲದೆ, ಭೂಪದರಗಳಲ್ಲಿ ಜ್ವಾಲಾಮುಖಿಯಿಂದುಂಟಾಗುವ ಬದಲಾವಣೆಗಳಿಂದಲೂ ಗುಹೆಗಳು ರಚಿತವಾಗುತ್ತವೆ. ಇವನ್ನೇ ನಾನು ಗುಹೆಗಳು ಎಂದು ಕರೆಯುತ್ತೇವೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.