ಬೈಟುಕಾಫಿ

ಯಾರವಳ್ಯಾರವಳು?

ಮನುಷ್ಯನ ಮನಸ್ಸಿನ ವ್ಯಾಪಾರ ವಿಚಿತ್ರವಾದದ್ದು. ಹೆಚ್ಚಾಗಿ ಅದು ತನಗಾಗಿಯೇ ಮಿಡಿಯುವುದು. ಅನ್ಯರು ಏನನ್ನುತ್ತಾರೋ...

ಯಾರವಳ್ಯಾರವಳು?
Published On :

ಮನುಷ್ಯನ ಮನಸ್ಸಿನ ವ್ಯಾಪಾರ ವಿಚಿತ್ರವಾದದ್ದು. ಹೆಚ್ಚಾಗಿ ಅದು ತನಗಾಗಿಯೇ ಮಿಡಿಯುವುದು. ಅನ್ಯರು ಏನನ್ನುತ್ತಾರೋ ಎಂದು ಕೂಡ ಕೆಲವೊಮ್ಮೆ ಚಡಪಡಿಸುವುದು. ಪ್ರಣಯ ರತಿಕ್ರೀಡೆಗಳ ವಿಚಾರದಲ್ಲಿ ಅದು ಎಲ್ಲ ಉಚಿತಾನುಚಿತಗಳನ್ನೂ ಮೀರಿ ತನ್ನ ದೇಹದ ಮಾತನ್ನೇ ಕೇಳುವುದು.

ಕಥಮಪಿ ಕೃತಪ್ರತ್ಯಾಖ್ಯಾನೇ ಪ್ರಿಯೇ ಸ್ಖಲಿತೋತ್ತರೇ
ವಿರಹಕೃಶಯಾ ಕೃತ್ವಾ ವ್ಯಾಜಂ ಪ್ರಕಲ್ಪಿತಮಶ್ರುತಮ್
ಅಸಹನಸಖೀಶ್ರೋತ್ರಪ್ರಾಪ್ತಿಪ್ರಮಾದಸಸಂಭ್ರಮಂ
ವಿಗಲಿತದೃಶಾ ಶೂನ್ಯೇ ಗೇಹೇ ಸಮುಚ್ಛ್ವಸಿತಂ ಪುನಃ


ಇಲ್ಲೊಬ್ಬ ನಾಯಿಕೆಯಿದ್ದಾಳೆ. ಅವಳ ಪ್ರಿಯತಮ ಬಹುಕಾಲದ ಬಳಿಕ ಆಕೆಯ ಬಳಿಗೆ ಬಂದಿದ್ದಾನೆ. ಆತ ಲಂಪಟ, ಅನ್ಯ ತರುಣಿಯೊಬ್ಬಳ ಜತೆಗೆ ರಮಿಸಿ ಬಂದಿದ್ದಾನೆ ಎಂಬುದೂ ಆಕೆಗೆ ಗೊತ್ತಾಗಿದೆ. ತನ್ನ ಅಪರಾಧವನ್ನು ಆತ ಒಪ್ಪಿಕೊಳ್ಳಲು ತಯಾರಿಲ್ಲ. ನೂರಾರು ಸಮರ್ಥನೆ ಹೇಳುತ್ತಾನೆ. ಆದರೇನು? ಇದ್ದಕ್ಕಿದ್ದಂತೆ, ಆತನ ನಾಲಿಗೆಯಿಂದ ಆ ಇನ್ನೊಬ್ಬ ಪ್ರೇಯಸಿಯ ಹೆಸರು ಅಚಾನಕ್ಕಾಗಿ ಉದುರಿಬಿದ್ದಿದೆ!
ಈಗ ನಲ್ಲೆ ಉರಿದುಬೀಳಬೇಕು. ಆದರೆ ಆತ ಆ ಹೆಸರನ್ನು  ಉಚ್ಚರಿಸಿಯೇ ಇಲ್ಲ ಎಂಬಂತೆ ಆಕೆ ನಡೆದುಕೊಂಡಿದ್ದಾಳೆ. ಅದಕ್ಕೆ ಕಾರಣ- ಅಷ್ಟೊಂದು ದಿನಗಳ ವಿರಹ ವೇದನೆ. ಆಕೆಯ ಮೈಯೆಲ್ಲ ಬಯಕೆಯ ಬೆಂಕಿಯಲ್ಲಿ  ಉರಿದು ಆತನ ಸಂಗವನ್ನೇ ಬಯಸಿವೆ. ಈ ದಿನವನ್ನು ಹಾಳು ಮಾಡಿಕೊಳ್ಳಲು ಆಕೆ ತಯಾರಿಲ್ಲ. ರತಿಕ್ರೀಡೆಯೆಲ್ಲ ಮುಗಿದು, ಶಯ್ಯಾಗೃಹ ತೊರೆದ ಬಳಿಕ ಆಕೆಗೆ ದುಃಖ ಉಮ್ಮಳಿಸಿದೆ. ಈ ಚಾಂಡಾಲನನ್ನು ಅಲ್ಲೇ ಶಿಕ್ಷಿಸಬೇಕಿತ್ತು. ನನ್ನ ಸಖಿಯರು ಆ ಹೆಸರನ್ನು ಕೇಳಿಸಿಕೊಂಡಿದ್ದರೆ ಏನು ಗತಿ? ಎಂಬೆಲ್ಲ ಮಿಶ್ರ ಭಾವಗಳು ಮನವನ್ನು ಆಕ್ರಮಿಸಿವೆ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.