ಬೈಟುಕಾಫಿ

ಅವರೇಕಾಯಿ

ಅವರೆಕಾಯಿ ವಾರ್ಷಿಕ ಬೆಳೆ. ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಗಿಡಗಳನ್ನು ಬೆಳೆಯಲು ಬಿಟ್ಟರೆ...

ಅವರೇಕಾಯಿ
Published On :
  • ಅವರೆಕಾಯಿ ವಾರ್ಷಿಕ ಬೆಳೆ. ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ.  ಗಿಡಗಳನ್ನು ಬೆಳೆಯಲು ಬಿಟ್ಟರೆ ಉದ್ದ ಹಂಬುಗಳ ಬಳ್ಳಿಯಂತೆ ಆಸರೆಗೆ ಸುತ್ತಿ ಉದ್ದಕ್ಕೆ ಇಲ್ಲವೇ ಮೇಲಕ್ಕೆ ಸಾಗುತ್ತದೆ.
  • ಅವರೆಕಾಯಿ ಮತ್ತು ಕಾಳು ಪೌಷ್ಟಿಕ ಹಾಗೂ ರುಚಿಕರ ತರಕಾರಿ. ಕರ್ನಾಟಕದಲ್ಲಿ ಅವರೆಯನ್ನು ಹೊಲದ ಬೆಳೆಯಾಗಿ ಬೆಳೆಯುವುದೇ ಹೆಚ್ಚು. ಪ್ರೊಟೀನ್, ಶರ್ಕರಪಿಷ್ಟ, ಖನಿಜ ವಸ್ತುಗಳ ಖನಿ ಈ ಅವರೆ.
  • ಎಳೆಯ ಕಾಯಿಗಳಲ್ಲಿ ಹೆಚ್ಚಿನ ನಾರು ಇರುವ ಕಾರಣ ಜೀರ್ಣಕ್ರಿಯೆಗೆ ಸಹಕಾರಿ. ಸಿಪ್ಪೆ ಸುಲಿದ ಅವರೆ ಕಾಳು ವಾತಕರ.  ಅವರೆಯ ತವರೂರು ಭಾರತ. ಹಲವಾರು ಕಾಡುಬಗೆಗಳು ಅವರೆಯಲ್ಲಿ ಕಂಡುಬರುತ್ತವೆ.
  • ಇದರ ಬೇಸಾಯ ಮತ್ತು ಬಳಕೆ ದೇಶದ ಎಲ್ಲ ಕಡೆ ಕಂಡುಬರುತ್ತವೆ. ಕಾಂಡ ಭಾಗ ಬಲಹೀನವಾಗಿರುತ್ತದೆ. ಹೂವು ದ್ವಿಲಿಂಗಿಗಳಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸ್ವ ಪರಾಗಸ್ಪರ್ಶ ಉಂಟಾಗುತ್ತದೆ.

ಲೆಕ್ಕರಾಜರಾಣಿ

ಅವರೇಕಾಯಿ

  • ಬೇರುಗಳಲ್ಲಿ ಸಾಕಷ್ಟು ಗಂಟುಗಳಿದ್ದು ಗಾಳಿಯಲ್ಲಿನ ಸಾರಜನಕವನ್ನು ಹಿಡಿದಿಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಲ್ಲದು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಐಐಎಚ್‌ಆರ್-95, 140 ತಳಿಗಳನ್ನು ಉತ್ಪಾದಿಸಿದೆ.
  • ಅವರೆಕಾಳು ವಿಶಿಷ್ಟ ಸೊಗಡಿನಿಂದ ಕೂಡಿರುತ್ತದೆ. ಬೆಂಗಳೂರಿನ ಕೃಷಿ ವಿ.ವಿ.ಯು ಹೆಬ್ಬಾಳ ಅವರೆ-1 ಮತ್ತು ಹೆಬ್ಬಾಳ ಅವರೆ-2 ತಳಿಗಳನ್ನು ಈ ಸರಣಿಗೆ ಸೇರಿಸಿದೆ. ಇವುಗಳಲ್ಲದೇ ಕೆಲವೊಂದು ಸ್ಥಳೀಯ ತಳಿಗಳೂ ಬೇಸಾಯದಲ್ಲಿವೆ.
  • ಹೂ ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಮಂಜು ಅಥವಾ ಇಬ್ಬನಿ ಸುರಿದರೆ ಉತ್ತಮ. ಅಂತಹ ಹವಾಗುಣದಲ್ಲಿ ಸೊಗಡು ಚೆನ್ನಾಗಿದ್ದು ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಬೆಂಗಳೂರಿನಲ್ಲಿ ವರ್ಷದ 360 ದಿನವೂ ಅವರೆಕಾಯಿ ಲಭ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.