ಬೈಟುಕಾಫಿ

ಲೈಫ್ ಆಫ್ ರುಪೈ

ಅಮೆರಿಕದ ಡಾಲರ್ ಸೇರಿದಂತೆ ಪೌಂಡ್, ಯೂರೋ, ಹೀಗೆ ಹಲವು ವಿದೇಶಿ ಕರೆನ್ಸಿಗಳ...

ಲೈಫ್ ಆಫ್ ರುಪೈ
Published On :

ಅಮೆರಿಕದ ಡಾಲರ್ ಸೇರಿದಂತೆ ಪೌಂಡ್, ಯೂರೋ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಡಾಲರ್... ಹೀಗೆ ಹಲವು ವಿದೇಶಿ ಕರೆನ್ಸಿಗಳ ಮುಂದೆ ಬೋರಲು ಬಿದ್ದ ರುಪಾಯಿ ಸದ್ಯ ಕೊಂಚ ಮೇಲೆದ್ದಿದೆ. ಆದರೂ ಬದಲಾಗಿರುವ ಹಣಕಾಸು ಪರಿಸ್ಥಿತಿಯಲ್ಲಿ ಎದ್ದ ರುಪಾಯಿ ಮತ್ತೆ ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್‌ನ ಪಂಡಿತರು ಇದ್ದಾರೆ. ಒಂದರ್ಥದಲ್ಲಿ ನಮ್ಮ ದೇಶದ ರುಪಾಯಿಗೆ ಲಕ್ವ ಬಡಿದು ಹೋಗಿದೆ.

ಯಾಕೆ ಇಂಥ ಪರಿಸ್ಥಿತಿ?
ವಿಶ್ವವೇ ಗ್ರಾಮವಾಗಿರುವಾಗ ಅಂತಾರಾಷ್ಟ್ರೀಯ ವ್ಯವಹಾರಗಳೆಲ್ಲ ಅಮೆರಿಕನ್ ಡಾಲರ್ ಮೂಲಕವೇ ನಡೆಯುತ್ತದೆ. ಈ ರೂಪದಲ್ಲಿ ನಡೆಯುವ ವ್ಯವಹಾರವೇ ದೇಶದ ಆರ್ಥಿಕ ಸ್ಥಿತಿಗತಿ, ಪ್ರಗತಿ ಮತ್ತು ಭದ್ರತೆಯನ್ನು ಅಳೆಯುವ ಬ್ಯಾರೋ ಮೀಟರ್. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕಡಿಮೆ ರುಪಾಯಿ ಕೊಟ್ಟು ಹೆಚ್ಚು ಡಾಲರ್ ಪಡೆದಾಗ ಅದನ್ನು ಶಕ್ತಿಶಾಲಿ ಕರೆನ್ಸಿ ಎಂದು ಕರೆಯಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಡಾಲರ್ ಅಥವಾ ಬ್ರಿಟಿಷ್ ಪೌಂಡ್ ಅನ್ನು ಪಡೆಯಲು ದೇಶದ ನೋಟುಗಳ ಕಟ್ಟುಗಳನ್ನೇ ನೀಡಬೇಕಾಗುತ್ತದೆ.
ಯಾವುದೇ ದೇಶದ ವಿದೇಶಿ ವಿನಿಮಯದ ಗಾತ್ರ ಅದರ ರಫ್ತು- ಆಮದು ಮೇಲೆ ಅವಲಂಬಿತವಾಗಿರುತ್ತದೆ.  ಆಯಾತ ಹೆಚ್ಚಾಗಿ, ನಿರ್ಯಾತ ತಗ್ಗಿದಾಗ ಸಂಗ್ರಹವಾಗಿರುವ ವಿದೇಶಿ ವಿನಿಮಯ ಕರಗುತ್ತದೆ. ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಆಯಾತದ ಪ್ರಮಾಣ ನಿರ್ಯಾತಕ್ಕಿಂತ 50,180 ಡಾಲರ್ ಹೆಚ್ಚಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 8 ಸಾವಿರ ಮಿಲಿಯನ್ ಡಾಲರ್ ಹೆಚ್ಚು.

ಆಯಾತ ಹೆಚ್ಚಲು ಕಾರಣ

  • ನಮ್ಮವರು ವಿದೇಶಿ ವಸ್ತುಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. 1991ರಲ್ಲಿ ನಮ್ಮ ಹಣಕಾಸು ವ್ಯವಸ್ಥೆಯನ್ನು ಜಾಗತೀಕರಣಕ್ಕೆ ಒಳಪಡಿಸುವ ಮುನ್ನ ಇತರ ದೇಶಗಳಿಂದ ತರುವ ವಸ್ತುಗಳ ಮೇಲೆ ನಿಷೇಧದ ಪಟ್ಟಿ ದೊಡ್ಡದಾಗಿತ್ತು. ಇದರ ಮೇಲೆ ವಿಧಿಸಲಾಗಿದ್ದ ನಿಯಮ ಸಡಿಲಿಸಿದ್ದು ಎಲ್ಲ ಅಯೋವುಯಕ್ಕೆ ಕಾರಣ ಎಂದು ಹೇಳಬಹುದು. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಸೂಜಿಯಿಂದ ವಿಮಾನದ ವರೆಗಿನ ವಸ್ತುಗಳನ್ನು ಇತರ ದೇಶಗಳಿಂದ ತರಲಾಗುತ್ತಿದೆ. ಹೀಗಾಗಿ ವಿದೇಶಿ ವಿನಿಮಯದ  ಮೇಲೆ ಹತೋಟಿ ತಪ್ಪಿತು.
  • ಶಿಕ್ಷಣ ಸಾಲ, ವಿದೇಶ ಪ್ರವಾಸ ಮತ್ತು ಬಿಸಿನೆಸ್ ಟೂರ್, ವೈದ್ಯಕೀಯ ಚಿಕಿತ್ಸೆ ಹೆಸರಲ್ಲಿ ವಿದೇಶಿ ವಿನಿಮಯವನ್ನು ಕೊಳ್ಳೆ ಹೊಡೆಯಲಾಯಿತು.
ಡಾಲರ್ ಮೌಲ್ಯ ಏರಿಕೆ ಹೇಗಾಯಿತು?
  • ಈಗಿನ ದಿನಮಾನದಲ್ಲಿ ತೈಲೋತ್ಪನ್ನಗಳ ದರ, ಚಿನ್ನದ ದರ, ಷೇರು ಮಾರುಕಟ್ಟೆ ದರ ಲಂಡನ್, ನ್ಯೂಯಾರ್ಕ್, ಸಿಂಗಾಪುರ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ.
  • ಜಾಗತಿಕವಾಗಿ ನಡೆಯುವ ರಾಜಕೀಯ ಸ್ಥಿತ್ಯಂತರಗಳೂ ಪರಿಣಾಮ ಬೀರುತ್ತವೆ.
  • ಸರ್ಕಾರ ಇತ್ತೀಚೆಗೆ ಚಿನ್ನ ಆಮದು ಮಾಡಿಕೊಳ್ಳಲು ಅವಕಾಶ ಕೊಟ್ಟಿತ್ತು. ಜನರು ಡಾಲರ್ ತೆತ್ತು ಮನಸೋ ಇಚ್ಛೆ ಚಿನ್ನ ಖರೀದಿಸಿದರು.
  • ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರದಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ವಿಫಲ.
  • ಸ್ಥಗಿತಗೊಂಡ ಯೋಜನೆಗಳ ಹೆಸರಿನಲ್ಲಿ ಹೂಡಿಕೆದಾರರು ಮತ್ತು ಸಂಸ್ಥೆಗಳು ಹಣ ಹಿಂಪಡೆದುಕೊಂಡದ್ದು.
ನಮ್ಮ ಮೇಲೆ ಪರಿಣಾಮ ಹೇಗೆ?
ತೈಲೋತ್ಪನ್ನ ಬೆಲೆ ಹೆಚ್ಚಳ
ಸಾಗಣೆ ದರ/ ಅಗತ್ಯ ವಸ್ತುಗಳ ಬೆಲೆ  ಹೆಚ್ಚಳ
ವಿದೇಶಿ ಪ್ರವಾಸ ಮತ್ತು ವಿದ್ಯಾಭ್ಯಾಸ
ಆಮದು ವಸ್ತುಗಳು
ಉದ್ಯೋಗಸ್ಥರ ಮೇಲಿನ ಪರಿಣಾಮ?
  • ಹೊಸ ಉದ್ಯೋಗ ಸೃಷ್ಟಿ ಮತ್ತು ನೇಮಕದ ಮೇಲೆ ಕಂಪನಿಗಳು ಆಸಕ್ತಿ ವಹಿಸದೇ ಇರಬಹುದು.
  • ವಾರ್ಷಿಕವಾಗಿ ವೇತನ ಹೆಚ್ಚಳ ಮತ್ತು ನೀಡಲಾಗುವ ಭತ್ಯೆಯ ಮೇಲೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚು.
  • ಮಾಹಿತಿ ತಂತ್ರಜ್ಞಾನ ಮತ್ತು ಅದನ್ನು ಆಧರಿಸಿದ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುವುದಕ್ಕೆ ಆಯಾ ಕಂಪನಿಗಳು ಮನಸ್ಸು ಮಾಡಬಹುದು.
  • ಕೈಗಾರಿಕಾ ಕ್ಷೇತ್ರದ ಮೇಲೆ
  • ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ದೇಶೀಯವಾಗಿ ಪ್ರಬಲವಾಗಿರುವ ಕಂಪನಿಗಳು ಹೊಸ ಯೋಜನೆಗಳನ್ನು ಸ್ಥಗಿತಗೊಳಿಸಬಹುದು.
  • ಹೊಸ ಕೈಗಾರಿಕೆ ಸ್ಥಾಪನೆಯಾಗದೇ ಇದ್ದಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕೊಡಲಿಯೇಟು ಬಿದ್ದಂತಾಗುತ್ತದೆ.
ರಿಯಲ್ ಎಸ್ಟೇಟ್ ಉದ್ದಿಮೆಗೆ ಹೊಡೆತ
1991- ಶೇ.22
ಕಾರಣವೇನು?
  • ಸಂಪೂರ್ಣ ಬರಿದಾಗಿದ್ದ ವಿದೇಶಿ ವಿನಿಮಯ ನಿಧಿ.
  • ದುರ್ಬಲವಾಗಿದ್ದ ಅರ್ಥ ವ್ಯವಸ್ಥೆ
1997-98- ಶೇ.19.4
ಕಾರಣವೇನು?
  • ಈ ಸಂದರ್ಭ ಭಾರತ ಸರ್ಕಾರ ಪೋಖ್ರಾನ್‌ನಲ್ಲಿ ಎರಡನೇ ಬಾರಿಗೆ ಪರಮಾಣು ಪರೀಕ್ಷೆ ನಡೆಸಿತ್ತು. ಅದಕ್ಕೆ ದೇಶದ ಮೇಲೆ ಅಮೆರಿಕ ದಿಗ್ಬಂಧನ ಹೇರಿತ್ತು.
  • ದಕ್ಷಿಣ ಏಷ್ಯಾದಲ್ಲಿ ಉಂಟಾಗಿದ್ದ ಹಣಕಾಸು ಬಿಕ್ಕಟ್ಟು
6,000 ಕೋಟಿ ಹಿಂದಕ್ಕೆ
  • ಡಾಲರ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕರೆನ್ಸಿ ಮುಂದೆ ಕುಗ್ಗಿದ ರುಪಾಯಿಯ ಪರಿಣಾಮ ಏನು ಗೊತ್ತೇ? ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬರೋಬ್ಬರಿ ರು. 6 ಸಾವಿರ ಕೋಟಿ ಮೊತ್ತವನ್ನು ದೇಶದ ಷೇರು ಪೇಟೆಯಿಂದ ಹಿಂದಕ್ಕೆ ಪಡೆದುಕೊಂಡಿದ್ದಾರೆ (ಆ.18ರ ವರೆಗಿನ ಮಾಹಿತಿ).
  • ಈ ವರ್ಷದ ಜೂನ್‌ನಿಂದ ಲೆಕ್ಕ ಹಿಡಿಯುವುದಾದರೆ ಎಫ್‌ಐಐಗಳು ಹಿಂಪಡೆದ ಬಂಡವಾಳದ ಮೊತ್ತ 25,000 ಕೋಟಿ
  • ಆ.1-16ರ ವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ ಬಾಂಡ್‌ಗಳ ಮೌಲ್ಯ 11,150 ಕೋಟಿ.
  • ದೇಶದ ವಿನಿಮಯ ಸಂಗ್ರಹ - 290.78 ಮಿಲಿಯ ಡಾಲರ್
- ರಮಾನಂದ ಶರ್ಮಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.