ಬೈಟುಕಾಫಿ

ಜೇಡ

ಜೇಡ
Published On :
  • ಜೇಡ ಅತ್ಯಂತ ಕುಶಲಿ ಬೇಟೆಗಾರ. ಇದು ತನ್ನ ಆಹಾರಕ್ಕಾಗಿ ಬೇಟೆಯಾಡಲು ವಿಶೇಷ ತಂತ್ರವನ್ನು ಬಳಸುತ್ತದೆ. ತಾನು ಬಯಸಿದ ಬೇಟೆಯನ್ನು ತನ್ನ ಬಲೆಯಲ್ಲಿ ಬೀಳಿಸಿ ಅದನ್ನು ನಿಸ್ಸಹಾಯಕಗೊಳಿಸಿ ತಿನ್ನುತ್ತದೆ.
  • ಜೇಡಕ್ಕೆ ನಾಲ್ಕು ಜತೆ ಕಣ್ಣುಗಳಿರುತ್ತವೆ. ಇವುಗಳಲ್ಲಿ ಪ್ರಧಾನ ಕಣ್ಣುಗಳು ತಲೆಯ ಮೇಲಿರುತ್ತವೆ. ಉಳಿದ ಕಣ್ಣುಗಳನ್ನು ಕೇವಲ ಬೆಳಕನ್ನು ಗ್ರಹಿಸುವುದಕ್ಕೆ ಮಾತ್ರ ಬಳಸುತ್ತದೆ.
  • ಜೇಡ ರೈತನ ಮಿತ್ರ. ಹೇಗೆಂದರೆ, ಅವು ಬೆಳೆಗಳನ್ನು ಹಾಳು ಮಾಡುವ ಕೀಟಗಳನ್ನು ತಿನ್ನುತ್ತವೆ. ಮಲೇರಿಯಾ ತರಬಲ್ಲ ಸೊಳ್ಳೆಗಳಿಗೆ ಈ ಜೇಡಗಳು ಶತ್ರು.
  • ಜೇಡ ನೇಯ್ದ ಬಲೆಗಳು ಸಾವಿರಾರು ವರ್ಷಗಳವರೆಗೂ ಹಾಳಾಗದೇ ಇರು ತ್ತವೆ. ಆದರೆ ಬೆಳೆಗಳಿಗೆ ರಾಸಾಯನಿಕ ಬಳಕೆಯಿಂದ ಜೇಡಗಳ ಸಂತತಿ ನಶಿಸುತ್ತಿದೆ.
  • ಇವುಗಳ ಜೀವಿತಾವಧಿ ಸುಮಾರು ಎರಡು ವರ್ಷಗಳು. ಆದರೆ ಕೆಲವು ಜಾತಿಯ ಜೇಡಗಳು 25 ವರ್ಷಗಳವರೆಗೂ ಬದುಕಿದ ನಿದರ್ಶನಗಳಿವೆ.
  • ಮೊಟ್ಟಮೊದಲ ಜೇಡ ಭೂಮಿಯ ಮೇಲೆ ಕಂಡುಬಂದಿದ್ದು 386 ದಶಲಕ್ಷ ವರ್ಷಗಳ ಹಿಂದೆ. ಈಗ ಕಾಣುತ್ತಿರುವ ಸಂತತಿ 200 ದಶಲಕ್ಷ ವರ್ಷಗಳಿಂದ ವಾಸಿಸುತ್ತಿವೆ.
  • ಇದುವರೆಗೂ ಭಾರತದಲ್ಲಿ 1500 ಜಾತಿಯ ಜೇಡಗಳನ್ನು ಗುರುತಿಸಲಾಗಿದೆ. ಬಲೆ ನೇಯುವುದರಲ್ಲಿ ಹೆಸರುವಾಸಿಯಾದ ಜೇಡ, ಪ್ರಕೃತಿಯ ನೇಕಾರ ಎಂಬ ಹೆಸರು ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.