ಸಲ್ಲಾಪ

ವ್ಯಕ್ತಿಯ ಅವಗುಣಗಳ ವಿಡಂಬನೆ ಪಾಶ್ಚಾತ್ಯರ ಅಸ್ತ್ರವೇನೂ ಅಲ್ಲ. ಹಿಂದಿನ ಸಂಸ್ಕೃತ ಸಾಹಿತ್ಯದಲ್ಲೂ ಸಾಕಷ್ಟು ಕುಚೋದ್ಯ, ವ್ಯಂಗ್ಯ, ಗೇಲಿ ಇದೆ. ಅದರಲ್ಲೂ ಸನ್ಯಾಸಿಗಳು, ಮಠಗಳನ್ನು ಕಟ್ಟಿಕೊಂಡು ತಾವೇ ಜಗದ್ಗುರುಗಳೆಂದು ಪೋಸು ಕೊಡುವವರು, ಬಹಿರಂಗವಾಗಿ ಮಾರಾರಿಯ ಜಪ ಮಾಡುತ್ತ ಅಂತರಂಗದಲ್ಲಿ ಕಾಮನನ್ನಿಟ್ಟುಕೊಂಡವರು... ಇಂಥವರನ್ನು ನಮ್ಮ ಸುಭಾಷಿತಗಳೂ ಸಾಕಷ್ಟು ಬಾರಿ ಗೇಲಿ ಮಾಡಿ ಚಿಂದಿ ಎಬ್ಬಿಸಿವೆ. ಅಂಥದೊಂದು ಇಲ್ಲಿದೆ.
ಶ್ರಮಣಃ ಶ್ರಾವಕವಧ್ವಾ ಸುರತವಿಧೌ ದಶತಿ ನಾಧರಂ ದತ್ತಂ
ಮದಿರಾಕ್ಷಿ ಮಾಂಸಭಕ್ಷಣಮಸ್ಮತ್ ಸಮಯೇ ನಿಷಿದ್ಧಮಿತಿ
ಮಠದಲ್ಲಿ ವಾಸಿಸುವ ಯತಿಯೊಬ್ಬ ತನ್ನ ಶಿಷ್ಯೆಯ ಜತೆ 'ಸುರತಾಧ್ಯಾತ್ಮ'ದಲ್ಲಿ ತಲ್ಲೀನನಾಗಿದ್ದಾನೆ. ಪ್ರೇಮೋತ್ಕಟತೆಯ ಸಂದರ್ಭದಲ್ಲಿ ಆ ಸನ್ಯಾಸಿನಿ ತನ್ನ ಗುರುವಿನ ತುಟಿಗೆ ತುಟಿ ಹಚ್ಚಲು ಮುಂದಾಗಿದ್ದಾಳೆ. ಅಧರಾಮೃತದ ಸವಿಗೆ ಮರುಳಾಗಲು ಆತನೇನು ಲೌಕಿಕ ಆಸಾಮಿಯೆ? ಆತ ಹೇಳುತ್ತಾನೆ- 'ಅರೆ, ಕೂಡದು. ನಾವು ಸನ್ಯಾಸಿಗಳು, ನಮಗೆ ಮಾಂಸಸೇವನೆ ನಿಷಿದ್ಧ!'
ಎಂಥಾ ಕಟ್ಟುನಿಟ್ಟಿನ ಯತಿಜೀವನ! ಸತ್ತರೂ ಆತ ಮಾಂಸಾಹಾರ ಸೇವಿಸಲಾರ. ಆದರೆ ಮೈಗೆ ಅಂಥ ಯಾವ ಕಟ್ಟುಕಟ್ಟಲೆಗಳೂ ಇಲ್ಲವಲ್ಲ! ಧ್ಯಾನ ಉಪಾಸನೆಗಳ ಪರಮೋಚ್ಛ ಸ್ಥಿತಿಯೇ ಬ್ರಹ್ಮಾನಂದ ಎನ್ನುತ್ತಾರೆ. ಕಠಿಣ ದುಡಿಮೆಯಿಲ್ಲದೆ, ಭೌತಿಕ ಸುಖವೂ ಬ್ರಹ್ಮಾನಂದವೂ ಸುಲಭವಾಗಿ ಎರಡೂ ಜೀವಗಳಿಗೂ ದಕ್ಕುವುದಾದರೆ, ಯಾಕೆ ಬೇಡ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


