ಬೈಟುಕಾಫಿ

ನಿದ್ದೆ ಕಮ್ಮಿಯಾದರೆ ಬುದ್ಧಿ ಕಮ್ಮಿ!

ನಿದ್ದೆ ಕಮ್ಮಿಯಾದರೆ ಬುದ್ಧಿ ಕಮ್ಮಿ!
Published On :

ನಿದ್ರಾ ಸಮಸ್ಯೆ ಹೊಂದಿರುವ ಮಕ್ಕಳು ರಾತ್ರಿ ಚೆನ್ನಾಗಿ ನಿದ್ರೆ ಮಾಡುವ ಅವರ ವಾರಿಗೆಯ ಮಕ್ಕಳಿಗಿಂತ ಶಾಲೆಯೆಡೆಗೆ ಕಡಿಮೆ ಒಲವನ್ನು ಹೊಂದಿರುತ್ತಾರಂತೆ. ಹಾಗೆನ್ನುತ್ತದೆ ಒಂದು ಹೊಸ ಅಧ್ಯಯನ. ಬ್ರೆಜಿಲ್ ಸಂಶೋಧಕ ಸಾವ್ ಪಾಲೊ ಸಾರ್ವಜನಿಕ ಶಾಲೆಗಳ ಏಳರಿಂದ ಹತ್ತರ ವಯಸ್ಸಿನ ಮಕ್ಕಳನ್ನು ಅಧ್ಯಯನ ಮಾಡಿದರು. ನಿದ್ರೆಯಲ್ಲಿನ ಅಸ್ವಸ್ಥತೆ ಅಥವಾ ನಿದ್ರೆಯಲ್ಲಿನ ಉಸಿರಾಟದ ಕಾಯಿಲೆಗಳನ್ನು ಹೊಂದಿದ ಮಕ್ಕಳು, ನಿದ್ರಾ ಸಮಸ್ಯೆ ಹೊಂದಿರದ ಮಕ್ಕಳಿಗಿಂತ ಕೆಳಗಿನ ದರ್ಜೆಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಂತು.

  • ಮಕ್ಕಳು ನಿದ್ರೆಗೆ ಸಂಬಂಧಪಟ್ಟ ಗುರುತಿಸಲಾಗದ ಕಾಯಿಲೆಗಳನ್ನು ಹೊಂದಿರಬಹುದು. ನಿದ್ರೆಯಲ್ಲಿ ನಡೆದಾಡುವುದು, ದುಃಸ್ವಪ್ನ ಅಥವಾ ನಿದ್ರಾಹೀನತೆ, ಅಥವಾ ನಿದ್ರೆಯಲ್ಲಿನ ಉಸಿರಾಟದ ಸಮಸ್ಯೆ, ಅಸ್ತಮಾ ಅಥವಾ ಗಮನ ಕೊರತೆ ಜೊತೆಗೆ ಕೆಲವು ವೈದ್ಯಕೀಯ ಚಿಕಿತ್ಸೆ ಅಥವಾ ಔಷಧಿಗಳು ಕೂಡಾ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ.
  • ಮಕ್ಕಳಲ್ಲಿ ಕಡಿಮೆ ನಿದ್ರೆಯು ಬೊಜ್ಜಿಗೆ ಕಾರಣವಾಗುತ್ತದೆ. ಇದು ಧೀರ್ಘಾವಧಿಯಲ್ಲಿ ಹೃದಯ ರೋಗ ಮತ್ತು ಮಧುಮೇಹದ ಅಪಾಯ ಹೆಚ್ಚಿಸುತ್ತದೆ.
  • ನಿದ್ರೆಯ ಅಭಾವ ಮೆದುಳಿನ ಕೆಲವು ಭಾಗಗಳು, ವಿಶೇಷವಾಗಿ ಮುಂಭಾಗದ ಪಾಲೆ ಹಾಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಮುಂಭಾಗದ ಹಾಲೆಗಳು ಕಾರ್ಯಕಾರಿ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ. ಅಂದರೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ನೆನಪುಗಳು, ಭವಿಷ್ಯದ ಯೋಜನೆಗಳು ಇತ್ಯಾದಿ. ಮತ್ತು ಸಾಮಾಜಿಕವಾಗಿ ಅನಪೇಕ್ಷಿತ ವರ್ತನೆಯನ್ನು ಪ್ರತಿಬಂಧಿಸುತ್ತದೆ. ಉದಾಹರಣೆಗೆ, ಸಹಪಾಠಿಯೊಂದಿಗೆ ಜಗಳ. ಇವುಗಳಿಗೆ ಹಾನಿಯಾದರೆ ನಿಸ್ಸಂಶಯವಾಗಿ ನಮ್ಮ ಸಾಮರ್ಥ್ಯ ಕುಗ್ಗುತ್ತದೆ.
- ರಶ್ಮಿ ಕಾರ್ಗಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.