ಪಾತರಗಿತ್ತಿ

ಕೀಟವರ್ಗಕ್ಕೆ ಸೇರಿದ, ವೈಭವದ ವರ್ಣಾಲಂಕಾರ, ಚಿತ್ರವಿಚಿತ್ರ ಚಿತ್ತಾರಗಳನ್ನು ಪಡೆದ, ರೈತ ಮಿತ್ರ ಪಾತರಗಿತ್ತಿ ಅಥವಾ ಚಿಟ್ಟೆ ಅಥವಾ ಪತಂಗಗಳು ಲೆಪಿಡಾಪೈರಾ ವರ್ಗಕ್ಕೆ ಸೇರಿದವು.
ಪಾತರಗಿತ್ತಿ ಮೈಬಣ್ಣಕ್ಕೆ ಮನಸೋಲದವರೇ ಇಲ್ಲ. ವರಕವಿ ಬೇಂದ್ರೆಯವರು 'ಪಾತರಗಿತ್ತಿ ಪಕ್ಕ...' ಎಂಬ ಅದ್ಭುತ ಕವನವನ್ನೇ ರಚಿಸಿದ್ದಾರೆ.
ವಿಶೇಷವೆಂದರೆ, ಪಾತರಗಿತ್ತಿಗೆ ಈ ಹೆಸರು ಬರುವುದೇ ಅದು ಪ್ರೌಢಾವಸ್ಥೆ ತಲುಪಿದ ನಂತರ. ಪ್ರೌಢಾವಸ್ಥೆ ತಲುಪಿದೊಡನೆ ಗೂಡನ್ನು ಸೀಳಿ ಚಿಟ್ಟೆಯಾಗಿ ಹೊರಬರುತ್ತವೆ.
ಪಾತರಗಿತ್ತಿಯ ಬಹುತೇಕ ಎಲ್ಲ ಪ್ರಭೇದಗಳೂ ಶುದ್ಧ ಸಸ್ಯಾಹಾರಿಗಳು. ಅವುಗಳ ಆಹಾರ ಪ್ರಧಾನವಾಗಿ ಹೂಗಳಲ್ಲಿನ ಮಕರಂದ. ಕೇವಲ ದ್ರವಾಹಾರ ಸೇವಿಸುತ್ತವೆ.
ದಕ್ಷಿಣ ಅಮೆರಿಕದ ಅಮೆಜೋನಿಯಾ ಮಳೆಕಾಡುಗಳಲ್ಲಿ ಪಾತರಗಿತ್ತಿಗಳು ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿ 10 ಸಾವಿರಕ್ಕೂ ಅಧಿಕ ಚಿಟ್ಟೆ ಪ್ರಭೇದಗಳಿವೆ!
ಅಂಟಾರ್ಕ್ಟಿಕಾ ಭೂಖಂಡವನ್ನು ಬಿಟ್ಟು ಇನ್ನೆಲ್ಲ ಪ್ರದೇಶಗಳಲ್ಲೂ ಪಾತರಗಿತ್ತಿಗಳಿವೆ. ಇದುವರೆಗೆ ಸಂಶೋಧಿಸಲಾದ ಚಿಟ್ಟೆ ಪ್ರಭೇದಗಳ ಸಂಖ್ಯೆ ಕೇವಲ 15000 ಮಾತ್ರ.
ಚಿಟ್ಟೆಗಳದು ತೀರಾ ಅಲ್ಪ ಆಯುಷ್ಯ. ಅವು 90 ದಿನಗಳಿಂದ ಹೆಚ್ಚೆಂದರೆ 240 ದಿನಗಳ ಕಾಲ ಬದುಕಿರಬಲ್ಲವು.. ಅದಕ್ಕಿಂತ ದೀರ್ಘಾಯುಷಿ ಪ್ರಭೇದಗಳು ಅತಿ ವಿರಳ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


