ಬೈಟುಕಾಫಿ

ಲಜ್ಜಾಭರಣ

ಲಜ್ಜಾಭರಣ
Published On :

ನಾಚಿಕೆ ಎಂಬುದೊಂದು ಸುಂದರ ಭಾವ. ಮದುವೆಯಾದ ಹೊಸತರಲ್ಲಿ ವಧು- ವರ ನಾಚಿಕೊಳ್ಳಲೇಬೇಕು. ಪರಸ್ಪರ ಅಂಗೋಪಾಂಗಗಳ ಸಂಶೋಧನೆ, ಸ್ಪರ್ಶ, ನೋಟಗಳು ಇಬ್ಬರಿಗೂ ಹೊಸತೂ ಹಿತಾಘಾತಕಾರಿಯೂ ಆಗಿರುವಾಗ, ನಾಚಿಕೆ ಅನಿವಾರ್ಯ. ವಧುವಿನಲ್ಲಿ ಅದು ತುಸು ಹೆಚ್ಚೇ ಇರುತ್ತದೆ ಅನ್ನೋಣ.

ಹಸ್ತಂ ಕಂಪವತೀ ರುಣದ್ಧಿರಶನಾವ್ಯಾಪಾರಲೋಲಾಂಗುಲಿಂ
ಹಸ್ತೌ ಸ್ವೌಲಯತಿಸ್ತನಾವರಣತಾಮಾಲಿಂಗ್ಯಮಾನಾ ಬಲಾತ್
ಪಾತುಂ ಪಕ್ಷಲಚಕ್ಷುರುನ್ನಮಯತಃ ಸಾಚೀಕರೋತ್ಯಾನನಂ
ವ್ಯಾಜೇನಾಪ್ಯಭಿಲಾಷಾಪೂರಣಸುಖಂ ನಿರ್ವರ್ತಯತ್ಯೇವ ಮೇ

ವಿವಾಹದ ನಂತರದ ರಾತ್ರಿ. ಪ್ರಿಯ- ಪ್ರಿಯತಮೆಯರು ಗಂಡ -ಹೆಂಡತಿಯರಾಗಿದ್ದಾರೆ. ಸಜ್ಜೆವನೆಯ ಏಕಾಂತ, ಕತ್ತಲಲ್ಲೂ ವಧುವಿಗೆ ನಾಚಿಕೆ. ಅವಳ ಕಟಿಯಲ್ಲಿ ಓಡಾಡುತ್ತಿರುವ ಆತನ ಕೈಗಳನ್ನು ಆಕೆಯ ಕೈಗಳು ನಡುಗುತ್ತಾ ತಡೆಯುತ್ತಿವೆ. ಆತ ತಬ್ಬಿಕೊಳ್ಳಲು ಮುಂದಾದರೆ, ಈಕೆ ವಕ್ಷಸ್ಥಳವನ್ನು ಅಮೂಲ್ಯ ನಿಧಿಯೆಂಬಂತೆ ಕೈಗಳಿಂದ ಮುಚ್ಚಿಕೊಳ್ಳುತ್ತಾಳೆ. ಮುಖವನ್ನು ಹಿಡಿದು ಚುಂಬಿಸಲು ಮುಂದಾದರೆ ಮುಖವನ್ನೇ ಆಚೆ ತಿರುಗಿಸುತ್ತಾಳೆ. ಪತ್ನಿಯ ನಾಚಿಕೆ, ಪ್ರಣಯಸಲ್ಲಾಪಕ್ಕೆ ತಡೆಯುಂಟುಮಾಡುತ್ತಿದ್ದರೂ, ಆತನಿಗೂ ಅದು ಹಿತವಾಗಿಯೇ ಇದೆ. ಪತಿ ಇನ್ನಷ್ಟು ಅಂಗಲಾಚಲಿ ಎಂಬುದೂ ಆಕೆಯ ಮನಸ್ಸಲ್ಲಿ ಇದ್ದಿರಬೇಕು. ಕೇಳಿಯ ಪೂರ್ವರಂಗವನ್ನು ಆಕೆ ಸಮರ್ಪಕವಾಗಿಯೇ ಅಭಿನಯಿಸಿದ್ದಾಳೆ.
ಇಂದು ನಾಚಿಕೆಯೊಂಬುದೊಂದು ಅವಶ್ಯ ಗುಣ ಎಂಬ ಭಾವನೆಯೇ ನಮ್ಮ ಯುವಜನರಲ್ಲಿ ಹೊರಟುಹೋಗಿದೆಯೇ ಎಂಬ ಸಂಶಯವೂ ಮೂಡುತ್ತದೆ. ಬಲ್ಲವರೇ ಬಲ್ಲರು, ಲಜ್ಜೆಯ ಸವಿಯ!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.