ಬೇರೇನೋ ಬೇಕು

ಯಃ ಕೌಮಾರಹರಃ ಸ ಏವ ಹಿ ವರಃ ತಾ ಏವ ಚೈತ್ರಕ್ಷಪಾಃ
ತೇ ಚೋನ್ಮೀಲಿತಮಾಲತೀಸುರಭಯಃ ಪ್ರೌಢಾ ಕದಂಬಾನಿಲಾಃ
ಸಾ ಚೈವಾಸ್ಮಿ ತಥಾಪಿ ಚೌರ್ಯಸುರತವ್ಯಾಪಾರಲೀಲಾವಿಧೌ
ರೇವಾರೋಧಸಿ ವೇತಸೀತರುಲೇ ಚೇತಃ ಸಮುತ್ಕಂಠತೇ
ಚೈತ್ರಮಾಸದ ಬೆಳದಿಂಗಳ ಇರುಳು. ನರ್ಮದಾ ನದಿಯ ದಡದಲ್ಲಿರುವ, ಜಾಜಿ ಮಲ್ಲಿಗೆ ಹೂಗಳ ಸುವಾಸನೆ ಪಸರಿಸಿದ, ಕದಂಬ ವೃಕ್ಷಗಳ ನೆರಳಿನಿಂದ ಆವೃತವಾದ ತೋಟ. ಪ್ರಣಯಿನಿ ತನ್ನ ಪ್ರಿಯಕರನನ್ನು ಗುಟ್ಟಾಗಿ ಭೇಟಿಯಾಗಿದ್ದಾಳೆ. ಮಧುರಕಾವ್ಯದಂತೆ ಅವರಿಬ್ಬರ ಶೃಂಗಾರಕೇಳಿಯೂ ನಡೆದುಹೋಗಿದೆ. ಇದೆಲ್ಲ ನಡೆದು ವರ್ಷಗಳೇ ಕಳೆದಿವೆ. ಈಗ ಅವರಿಬ್ಬರೂ ಗಂಡ- ಹೆಂಡತಿ. ಮತ್ತದೇ ಚೈತ್ರಮಾಸದ ಇರುಳು ಕಳೆಯಲು ಅದೇ ನರ್ಮದಾ ತೀರದ ಕದಂಬತೋಪಿಗೆ ಬಂದಿದ್ದಾರೆ. ನಲ್ಲೆ ಅಂದುಕೊಳ್ಳುತ್ತಾಳೆ- 'ನನ್ನ ಕನ್ಯತ್ವ ಕಳೆದವನೇ ಈಗ ಪತಿ. ಅದೇ ವಸಂತಮಾಸ. ಅದೇ ಮತ್ತೇರಿಸುವ ಜಾಜಿ ಪರಿಮಳ. ಅದೇ ನಾನು. ಆದರೂ ಅಂದಿನ ರೋಮಾಂಚನ, ಉದ್ವೇಗವಿಲ್ಲ. ಮನಸ್ಸು ಬೇರೇನನ್ನೋ ಹುಡುಕುತ್ತಿದೆ...'
ಮನಸ್ಸು ವಿಚಿತ್ರ. ಸುಖಸೌಭಾಗ್ಯಗಳ ಜೇನಹೊಳೆಯೇ ಎದುರಲ್ಲಿ ಹರಿದಿದ್ದರೂ, ಕುಡಿಯಲು ಬೇರೇನನ್ನೋ ಹುಡುಕುತ್ತದೆ. ಪ್ರೀತಿಯ ಸೊದೆಯೇ ಉಕ್ಕುತ್ತಿದ್ದರೂ, ಮತ್ಯಾವುದೋ ಕಳ್ಳತನಕ್ಕೆ ಹೊಂಚುತ್ತದೆ. ಹಾಗೆ ಹಂಬಲಿಸುತ್ತಿರುವ ನಲ್ಲೆಯೊಬ್ಬಳ ಚಿತ್ರವಿದು. ಆಕೆ ಇನ್ನೊಬ್ಬನನ್ನು ಬಯಸುತ್ತಿದ್ದಾಳೆಂದು ಅರ್ಥವಿಸಬೇಕಿಲ್ಲ. ಪ್ರೇಮದ ತೀವ್ರತೆ ಕಡಿಮೆಯಾದಾಗ ಸಹಜವಾಗಿ ಉಕ್ಕುವ ಭಾವವಿದು.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


