ಹಬ್ಬದೂಟ
ಸಿಹಿ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶ್ರಾವಣದ ತುಂಬಾ ಹಬ್ಬಗಳ ಸಡಗರ. ಹಬ್ಬಗಳ ಸಿಹಿಯೂಟ ಶಾಲೆಯಲ್ಲೂ ಸಿಕ್ಕರೆ ಮಕ್ಕಳಿಗೆ ಎಷ್ಟು ಖುಷಿಯಾಗಬೇಡ ಹೇಳಿ!

ಪ್ರತಿ ಮಗುವಿಗೂ ಶ್ರಾವಣ ಮುಗಿವವರೆಗೆ ನಿತ್ಯ ಸಿಹಿ ಅಡುಗೆ ನೀಡಲು ಶಿಕ್ಷಕರು ನೀಡಿದ ನಾಮಕರಣ 'ಅಮೃತ ಭೋಜನ'.
ಸಿಹಿ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶ್ರಾವಣದ ತುಂಬಾ ಹಬ್ಬಗಳ ಸಡಗರ. ಹಬ್ಬಗಳ ಸಿಹಿಯೂಟ ಶಾಲೆಯಲ್ಲೂ ಸಿಕ್ಕರೆ ಮಕ್ಕಳಿಗೆ ಎಷ್ಟು ಖುಷಿಯಾಗಬೇಡ ಹೇಳಿ!
ಈ ಭಾಗ್ಯ ಗದಗ ಸಮೀಪದ ನರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳದು. ಕಲೆದ ಶ್ರಾವಣವಿಡೀ ಮಕ್ಕಳಿಗೆ ಪ್ರತಿದಿನ ಎಂಬಂತೆ ಸಿಹಿಯೂಟ. ಇದರ ಪರಿಣಾಮ, ಮಕ್ಕಳ ಹಾಜರಾತಿಯಲ್ಲೂ ಭರತ ಕಂಡುಬಂದಿದೆ!
ಪ್ರತಿ ಮಗುವಿಗೂ ಶ್ರಾವಣ ಮುಗಿವವರೆಗೆ ನಿತ್ಯ ಸಿಹಿ ಅಡುಗೆ ನೀಡಲು ಶಿಕ್ಷಕರು ನೀಡಿದ ನಾಮಕರಣ 'ಅಮೃತ ಭೋಜನ'. ಇದಕ್ಕೆ ತಗಲುವ ವೆಚ್ಚ ಗ್ರಾಮದ ಹಿರಿಯರು, ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ಪದಾಧಿಕಾರಿಗಳದು. ದಿನದ ಬಿಸಿಯೂಟ ತಯಾರಿಸುವುದೇ ಕಷ್ಟ ಎಂದು ಗೊಣಗುವವರು ಇಲ್ಲಿನ ಸಿಬ್ಬಂದಿಯನ್ನು ನೋಡಿ ಕಲಿಯಬಹುದು. ಕೇವಲ ಅಮೃತ ಭೋಜನ ಮಾತ್ರವಲ್ಲ, ಈ ಶಾಲೆಯ ಶಿಕ್ಷಕರು ಇಲ್ಲಿನ ಅತ್ಯಂತ ಬಡ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅವರ ನೋಟ್ಬುಕ್, ಪೆನ್ಸಿಲ್, ಸ್ಕೂಲ್ ಬ್ಯಾಗ್, ಬಟ್ಟೆಗಳನ್ನು ಕೊಡುತ್ತಾರೆ. ಸಿಹಿ ಊಟದ ಜತೆಗೆ ಉತ್ತಮ ವಾತಾವರಣ, ಸಾಧನಗಳೂ ಸಿಗುತ್ತಿವೆ.
ನಾವೇನು ವಿಶೇಷ ಮಾಡುದಿಲ್ರೀ. ನಮ್ಮ ಮನ್ಯಾಗ ಹೆಂಗ್ ಶ್ರಾವಣದಾಗ ಸಿಹಿ ಅಡುಗೆ ಮಾಡ್ತೀವಿ ಹಂಗ ಇಲ್ಲಿ ಮಾಡ್ತೀವಿ. ಮಕ್ಕಳಿಗೆ ಒಳ್ಳೇ ಶಿಕ್ಷಣ ಸಿಗಬೇಕು. ಅವರು ಹೆಚ್ಚೆಚ್ಚು ಶಾಲಿಗೆ ಸೇರಬೇಕು. ಅದೇ ನಮ್ಮ ಉದ್ದೇಶ.
- ಶೋಭಾ ನರಗುಂದ,
ಮುಖ್ಯ ಅಡುಗೆಯವರು
ಸಿಹಿ ಊಟ ಮಕ್ಕಳಿಗೆ ಹೆಚ್ಚು ಪ್ರೀತಿ ಎನ್ನುವುದನ್ನೇ ಗಮನದಲ್ಲಿಟ್ಟುಕೊಂಡು ಈ ಅಮೃತ ಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳವಾಗಿದೆ. ಪಾಲಕರಲ್ಲಿಯೂ ಉತ್ಸಾಹಕ್ಕೆ ಕಾರಣವಾಗಿದೆ. ಗ್ರಾಮಸ್ಥರ ಸಹಕಾರ, ಅಡುಗೆಯವರ ಶ್ರಮ, ಶಾಲಾ ಶಿಕ್ಷಕರ ಮಾರ್ಗದರ್ಶನದಿಂದ ಇದೆಲ್ಲಾ ಸಾಕಾರವಾಗಿದೆ.
- ಕೆ.ಎಸ್. ಕಳಕಣ್ಣವರ, ಮುಖ್ಯೋಪಾಧ್ಯಾಯರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಸಾಪುರ
ಶಿಕ್ಷಕರು, ಅಡುಗೆಯವರು ಹಾಗೂ ಶಾಲಾ ಸುಧಾರಣಾ ಸಮಿತಿ ಸಹಯೋಗದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮಕ್ಕೆ ನಾನೇ ಚಾಲನೆ ನೀಡಿದ್ದೇನೆ. ಇದರಿಂದ ಮಕ್ಕಳ ಹಾಜರಾತಿ ಮತ್ತು ಶಾಲೆಯ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿದೆ. - -ರಾಜೀವ ನಾಯಕ, ಡಿಡಿಪಿಐ, ಗದಗ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


