ಸಚ್ಚಿದಾನಂದರಾಗಿ ಸ್ವಾಮೀಜಿ!
ವಿವೇಕಾನಂದರು ಪರಿವ್ರಾಜಕರಾಗಿ ಸಂಚರಿಸುತ್ತಿದ್ದಾಗ ತಮ್ಮ ಗುರುತು ಸಿಗಬಾರದೆಂದು ಹೆಸರನ್ನು ಬದಲಿಸಿಕೊಳ್ಳುತ್ತಿದ್ದರು. ಒಮ್ಮೆ ಜುನಾಗಢದಲ್ಲಿ ಸಚ್ಚಿದಾನಂದ ಹೆಸರಿನಲ್ಲಿ ಅಲ್ಲಿಯ ದಿವಾನರಾದ ಹರಿದಾಸ್ ದೇಸಾಯಿಯವರ ಆಶ್ರಮದಲ್ಲಿದ್ದರು. ಇದೇ ವೇಳೆಗೆ ಸ್ವಾಮಿ ಅಭೇದಾನಂದರೂ ಜುನಾಗಢಕ್ಕೆ ಬಂದರು. ಇಲ್ಲಿ ಸಚ್ಚಿದಾನಂದ ಹೆಸರಿನ, ಉನ್ನತ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಬಂಗಾಳಿ ಸಾಧುವೊಬ್ಬರು ಬಂದಿರುವುದು ತಿಳಿದು ಅವರನ್ನು ಭೇಟಿಯಾಗಲು ಬಂದರು.
ಅನಿರೀಕ್ಷಿತವಾಗಿ ಬಂದ ಗುರುಭಾಯಿಯನ್ನು ಕಂಡು ಸ್ವಾಮೀಜಿ ಮುಖ ಬೆಳಗಿತು. ಆ ಸಮಯದಲ್ಲಿ ಸ್ವಾಮೀಜಿ ಅದ್ವೈತ ವೇದಾಂತದ ಬಗ್ಗೆ ಚರ್ಚಿಸುತ್ತಿದ್ದರು. ಪಂಡಿತರಿಗೆ ಗುರುಭಾಯಿಯನ್ನು ಪರಿಚಯಿಸುತ್ತಾ, 'ಇವರು ನನ್ನ ಗುರುಭಾಯಿ, ಅದ್ವೈತವೇದಾಂತದ ನಿಷ್ಠಾವಂತ ಪ್ರತಿಪಾದಕರು. ಈಗ ನಾವು ಚರ್ಚಿಸುತ್ತಿದ್ದ ವಿಷಯವನ್ನು ಇವರು ವಿವರಿಸುತ್ತಾರೆ' ಎಂದೇಬಿಟ್ಟರು. ಪಂಡಿತರ ಪ್ರಶ್ನೆಗಳಿಗೆ ಅಭೇದಾನಂದರು ಸಮರ್ಪಕವಾಗಿ ಉತ್ತರಿಸಿದರು. ಸ್ವಾಮೀಜಿ ಅಭೇದಾನಂದರ ವಿದ್ವತ್ತು, ನಿರ್ಗಳತೆ, ನವಚೈತನ್ಯವನ್ನು ಕಂಡು ಒಳಗೊಳಗೇ ಹೆಮ್ಮೆಪಟ್ಟುಕೊಂಡರು. ಹೀಗೆ ಸ್ವಾಮಿ ವಿವೇಕಾನಂದರು ತಮ್ಮಂತೆಯೇ ಗುರುಭಾಯಿಗಳೂ ಸಮರ್ಥರಾಗಬೇಕು, ಸ್ವತಃ ಶಕ್ತಿ ಗಳಿಸಬೇಕೆಂದು ಆಶಿಸುತ್ತಿದ್ದರು. ಅವರನ್ನು ಯಾವ ಮುನ್ಸೂಚನೆಯೂ ಇಲ್ಲದೆ ಒರೆಗೆ ಹಚ್ಚುತ್ತಿದ್ದರು. ಅವರ ಏಳ್ಗೆಗಾಗಿ ಶ್ರಮಿಸುತ್ತಿದ್ದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

