ಬೈಟುಕಾಫಿ

ಬಿಲ್ವಫಲಗಳು

ಬಿಲ್ವಫಲಗಳು
Published On :

ಒಬ್ಬ ಕವಿಯಿದ್ದ. ಆತ ಸ್ವಲ್ಪ ಹೆಚ್ಚೇ ರಸಿಕ. ಸೌಂದರ್ಯ ಕಾಣುವೆಡೆಯೆಲ್ಲಾ ಕಣ್ಣು ಹಾಕಿ, ತನಗೇನಾದರೂ ದಕ್ಕುತ್ತದೋ ಎಂದು ಕಲ್ಲು ಬಿಸಾಡುವುದು ಅವನ ಅಭ್ಯಾಸ. ಆತ ಹಾಗೇ ಒಮ್ಮೆ ದಾರಿಯಲ್ಲಿ ಹೋಗುತ್ತಿದ್ದ. ಬುಟ್ಟಿಯಲ್ಲಿ ಏನನ್ನೋ ಇಟ್ಟುಕೊಂಡು ಮಾರುತ್ತಿದ್ದ ಚೆಲುವೆಯೊಬ್ಬಳು ಗೋಚರಿಸಿದಳು. ಬುಟ್ಟಿಯಲ್ಲಿ ಏನಿದೆ ಎಂದು ಬಗ್ಗಿ ನೋಡಿದ. ಹಾಗೆ ಬಗ್ಗುವಾಗ ಬುಟ್ಟಿಯಲ್ಲಿದ್ದ ಬಿಲ್ವದ ಹಣ್ಣು ಕಾಣಿಸಿತು. ಜತೆಗೇ ಅವನ ಕಣ್ಣಿಗೆ ಏನು ಕಾಣಿಸಬಾರದೋ ಅದೂ ಕಾಣಿಸಿತು. ತಗೊಳ್ಳಿ, ದಿಢೀರನೆ ಆತನ ಕವಿತ್ವ ಜಾಗೃತವಾಯಿತು!

ಆಪಾಂಡು ಪೀನ ಕಠಿನಂ ವರ್ತುಲಂ ಸುಮನೋಹರಮ್
ಕರೈರಾಕೃಷ್ಯತೇತ್ಯರ್ಥಂ ಕಿಂ ವೃದ್ಧೈರಪಿ ಸಸ್ಪ್ರಹಮ್


ಇದರ ಅಕ್ಷರಾರ್ಥ ಹೀಗೆ: 'ಬಿಳಿ ಬಣ್ಣದಲ್ಲಿದೆ. ದಪ್ಪವಾಗಿದೆ. ಕಠಿಣವಾಗಿರಬಹುದು. ಉರುಟುರುಟಾಗಿದೆ. ಮನಸ್ಸನ್ನು ಕದಿಯುವಂತಿದೆ. ಒಮ್ಮೆ ಕೈಹಾಕಿ ಮುಟ್ಟೋಣ, ನೀವೋಣ ಎನ್ನಿಸುತ್ತದೆ. ಮುದುಕರನ್ನೂ ಆಶೆಯಿಂದ ನೋಡುವಂತೆ ಹತ್ತಿರ ಸೆಳೆಯುತ್ತಿದೆ!'
ಘಾಟಿ ಕವಿ ಹೇಳಿದ್ದೇನು ಎಂಬುದು ನಿಮಗೂ ಗೊತ್ತಾಗಿರಬಹುದು. ಆತನ ಉಕ್ತಿಯ ಹೊರಾರ್ಥ ಬಿಲ್ವಫಲ. ಒಳಾರ್ಥ ಬೇರೆಯೇ. ಆ ಚೆಲುವೆಗೂ ಅರ್ಥವಾದರೆ, ಆಕೆ ಒಲಿದರೆ, ಎರಡು 'ಬಿಲ್ವಫಲ'ಗಳ ಪೂರ್ಣ ಪ್ರಯೋಜನ ಪಡೆಯಬಹುದಲ್ಲ ಎಂಬುದು ಅವನ ಖತರ್‌ನಾಕ್ ಐಡಿಯಾ. ಅರ್ಥವಾಗದ ದಡ್ಡಿಯಾದರೆ, ಬುಟ್ಟಿಯೊಳಗಿದ್ದುದನ್ನೇ ತಗೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದರಾಯಿತು!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.